ಸಾರ್ವಜನಿಕರಿಗೆ ಸುವರ್ಣಾವಕಾಶ : ಇದು ಬಹುಭಾಷಾ ನಟಿ ಧನ್ಯಾರ ಮೊದಲ ಕನ್ನಡ ಚಿತ್ರ

ಕನ್ನಡ ಚಿತ್ರರಂಗಕ್ಕೆ ಪರಭಾಷಾ ನಟಿಯರು ಆಗಮಿಸುವುದೇನೂ ಹೊಸ ಬೆಳವಣಿಗೆಯಲ್ಲ. ಅದೇ ರೀತಿ ಕನ್ನಡದಲ್ಲಿ ನೆಲೆ ಕಂಡುಕೊಂಡಿರುವ ಕನ್ನಡದ ನಟಿಯರು ಪರಭಾಷಾ ಚಿತ್ರಗಳಲ್ಲಿ ನಟಿಸಲು ಹಾತೊರೆಯುವುದು ಸಹ ಅಷ್ಟೇ ಸಹಜವಾದ ಬೆಳವಣಿಗೆ. ಆದರೆ ಮೂಲತಃ ಅಪ್ಪಟ ಕನ್ನಡತಿಯಾದರೂ ಪರಭಾಷಾ ತಾರೆಯಾಗಿ ಮಿಂಚುತ್ತಿರುವ ನಟಿಯರು ಹೊಸಬರಂತೆ ಕನ್ನಡಕ್ಕೆ ಆಗಮಿಸುವುದು ಅಪರೂಪದ ಬೆಳವಣಿಗೆ. ಇಂತಹದ್ದೊಂದು ವಿದ್ಯಮಾನಕ್ಕೆ ಸಾಕ್ಷಿಯಾಗಿರುವವರು ಬಹುಭಾಷಾ ನಟಿ ಧನ್ಯಾ ಬಾಲಕೃಷ್ಣ. ಮೂಲತಃ ಕನ್ನಡತಿಯೇ ಆಗಿರುವ ಅವರೀಗ ಈ ವಾರ ಬಿಡುಗಡೆಯಾಗುತ್ತಿರುವ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ. … Continue reading ಸಾರ್ವಜನಿಕರಿಗೆ ಸುವರ್ಣಾವಕಾಶ : ಇದು ಬಹುಭಾಷಾ ನಟಿ ಧನ್ಯಾರ ಮೊದಲ ಕನ್ನಡ ಚಿತ್ರ