ಸುದ್ದಿಗಳು

ಲಾಂಗ್ ಬಿಟ್ಟು ಲೇಖನಿ ಹಿಡಿದು ಬರುತ್ತಿದ್ದಾರೆ ಕರುನಾಡ ಚಕ್ರವರ್ತಿ ಶಿವಣ್ಣ

ಸ್ಯಾಂಡಲ್ ವುಡ್ ನ ಚಿರಯುವಕ  ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್  57ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ… ವರ್ಷದ 365ದಿನವೂ ಸಿನಿಮಾದ ಚಿತ್ರೀಕರಣದಲ್ಲೇ ಬ್ಯುಸಿ ಆಗಿರುವ ಸಿನಿಮಾರಂಗದ ಏಕೈಕ ಕಲಾವಿದ ಶಿವರಾಜ್ ಕುಮಾರ್….57 ವರ್ಷದಲ್ಲಿಯೂ ವಿಭಿನ್ನ  ರೀತಿಯ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಶಿವಣ್ಣ ಈ ಬಾರಿ ದ್ರೋಣನಾಗಿ ಲೇಖನಿ ಹಿಡಿದು ಬರುತ್ತಿದ್ದಾರೆ…

ದ್ರೋಣ ಟೈಟಲ್ ಹೇಳುವಂತೆ ಶಿವಣ್ಣ ಶಾಲೆಯ ಗುರುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..ಇದೇ ಮೊದಲ ಬಾರಿಗೆ ಮೇಸ್ಟ್ರ ಪಾತ್ರದಲ್ಲಿ ಅಭಿನಯ ಮಾಡುತ್ತಿರುವ ಶಿವಣ್ಣ ಲೇಖನಿ ಕತ್ತಿಗಿಂತ ಹರಿತವಾಗಿದೆ ಎನ್ನುವ ಉದ್ದೇಶವನ್ನಿಟ್ಟುಕೊಂಡು ಪ್ರೇಕ್ಷಕರ ಮುಂದೆ ಬರಲಿದ್ದಾರೆ…ಮುಹೂರ್ತ ಸಂದರ್ಭದಲ್ಲೇ ಬಹಳಷ್ಟು ವಿಶೇಷತೆಗಳನ್ನು ಹೊರಹಾಕಿ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದ್ದ ‘ದ್ರೋಣ’ ಟೀಂ ಸದ್ಯ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದ್ದಾರೆ…

ಶಿವಣ್ಣನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಪೋಸ್ಟರ್ ನ ರಿಲೀಸ್ ಮಾಡಿರೋ ಚಿತ್ರತಂಡ.. ಶಿವರಾಜ್ ಕುಮಾರ್ ಅಭಿನಯದ ಮುಂದಿನ ಸಿನಿಮಾ ‘ದ್ರೋಣ’ ಅಭಿಮಾನಿಗಳೇ ಶಿವಣ್ಣನ ಪಾಠ ಕೇಳಲು ಸಿದ್ದರಾಗಿ ಎನ್ನುವ ಸೂಚನೆ ಕೊಟ್ಟಿದ್ದಾರೆ…

ಈ ಸಿನಿಮಾವನ್ನು ಡಾಲ್ಫಿನ್ ಮಿಡಿಯಾ ಹೌಸ್  ಬ್ಯಾನರ್ ನಲ್ಲಿ  ಬಿ.ಮಹದೇವ್, ಸಂಗಮೇಶ್.ಬಿ, ಹಾಗೂ ಶೇಷು ಚಕ್ರವರ್ತಿ ನಿರ್ಮಿಸಿದ್ದಾರೆ.. ಸಿನಿಮಾರಂಗದಲ್ಲಿ ಬಹಳಷ್ಟು ವರ್ಷಗಳಿಂದ ಗುರುತಿಸಿಕೊಂಡಿರುವ  ಪ್ರಮೋದ್ ಚಕ್ರವರ್ತಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ..  ಅನುಭವಸ್ಥ ತಂತ್ರಜ್ಞನರೊಂದಿಗೆ  ಪ್ರಮೋದ್ ಚಕ್ರವರ್ತಿ ದ್ರೋಣ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ…

ಇಂದು ಬೆಂಗಳೂರಿನಲ್ಲಿ ‘ಡಿಯರ್ ಕಾಮ್ರೇಡ್ ಮ್ಯೂಸಿಕ್’ ಫೆಸ್ಟಿವಲ್!!

#shivarajkumar #shivarajkumarmovies #shivarajkumarinstagram #shivarajkumardhronamovie

Tags