ಸುದ್ದಿಗಳು

ನನ್ನನ್ನು ರಾಜಕೀಯಕ್ಕೆ ಎಳೆಯಬೇಡಿ: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಪುನೀತ್ ರಾಜ್ ಕುಮಾರ್ ನಂತರ ಧ್ರುವ ಸರ್ಜಾ ಹೇಳಿಕೆ

ಬೆಂಗಳೂರು.ಮಾ.23: ಇನ್ನೇನು ಲೋಕಸಭಾ ಚುನಾವಣೆ ಬರುತ್ತಿದೆ. ಹೀಗಾಗಿ ಸ್ಪರ್ಧಿಗಳು ತಾವು ಸ್ಪರ್ಧಿಸುತ್ತಿರುವ ಕ್ಷೇತ್ರಗಳ ಪರವಾಗಿ ಮತಯಾಚನೆ ಮಾಡುತ್ತಿದ್ದು, ಅವರ ಪರವಾಗಿ ಸಿನಿಮಾ ಕಲಾವಿದರು ಸಹ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ.

ಈಗಾಗಲೇ ಮಂಡ್ಯದ ಲೋಕಸಭಾ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ದರ್ಶನ್, ಯಶ್, ದೊಡ್ಡಣ್ಣ, ರಾಕ್ಲೈನ್ ವೆಂಕಟೇಶ್ ಸೇರಿದಂತೆ ಅನೇಕರು ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ಇಷ್ಟೇ ಅಲ್ಲದೇ ಚಂದನವನದ ಕೆಲವು ತಾರೆಯರು ಸಹ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನು ಇತ್ತಿಚೆಗಷ್ಟೇ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಾನು ಯಾರ ಪರವೂ ಅಲ್ಲಾ, ನಾನು ಪ್ರಚಾರ ಕಾರ್ಯ ಮಾಡುವುದಿಲ್ಲ ಎಂದು ಬಹಿರಂಗವಾಗಿ ಸ್ಪಷ್ಟಪಡಿಸಿದ್ದರು. ಅವರಂತೆಯೇ ಹಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡಾ ‘ನನ್ನನ್ನು ರಾಜಕೀಯಕ್ಕೆ ಎಳೆಯಬೇಡಿ’ ಎಂದಿದ್ದಾರೆ.

Image result for sumalatha and nikhil kumar

ಹೌದು, ಧ್ರುವ ಸರ್ಜಾರನ್ನು ಮಾಧ್ಯಮ ಮಿತ್ರರು ‘ನೀವು ಸಹ ಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲವೇ..?’ ಎಂದು ಪ್ರಶ್ನಿಸಿದ್ದಾರೆ. ‘ಈ ಬಗ್ಗೆ ಮಾತನಾಡೋದು ಬೇಡವೇ ಬೇಡ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ತಾವೂ ಸಹ ರಾಜಕೀಯಕ್ಕೆ ಹೋಗುವುದಾಗಲಿ, ಅಥವಾ ಪ್ರಚಾರ ಕಾರ್ಯ ಮಾಡುವುದಾಗಲಿ ಮಾಡುವುದಿಲ್ಲ. ಆದರೆ ಎಲ್ಲರೂ ತಪ್ಪದೇ ಮತಧಾನ ಮಾಡಿ” ಎಂದಿದ್ದಾರೆ.

ಹೀಗಾಗಿ ಕನ್ನಡ ಚಿತ್ರರಂಗದಿಂದ ಯಾರು ಯಾರು ಕಲಾವಿದರು ತಮ್ಮ ಸ್ಟೇಟ್ಮೆಂಟ್ ಕೊಡಲಿದ್ದಾರೆ ಎನ್ನುವುದು ಕುತೂಹಲಕಾರಿಯಾಗಿದೆ. ಸದ್ಯಕ್ಕೆ ಧ್ರುವ ಸರ್ಜಾ ‘ಪೊಗರು’ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಈ ಚಿತ್ರದಲ್ಲಿ ಅವರು ಶಾಲಾ ಬಾಲಕನಾಗಿಯೂ ಮತ್ತು ಯುವಕನಾಗಿ ಹೀಗೆ ಡಬಲ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಘಣ್ಣನ 25 ನೇ ಸಿನಿಮಾ ‘ಆಡಿಸಿದಾತ’

#dhruvasarja, #political, #balkaninews #dhruvasarja, #filmnews, #kannadasuddigalu #nikhil, #sumalatha,

Tags