ಸುದ್ದಿಗಳು

ಬೆಂಗಳೂರಿಗೆ ಬಂದ ‘ಡಿಚ್ಕಿ ಡಿಸೈನ್’ ಮಹಾದೇವ…!!

ಚಿತ್ರರಂಗಕ್ಕೆ ದಿನದಿಂದ ದಿನಕ್ಕೆ ಹೊಸಬರು ಹೊಸ ಹೊಸ ಯೋಚನೆ, ಯೋಜನೆಗಳೊಂದಿಗೆ ಬರುತ್ತಿದ್ದಾರೆ. ಅವರಂತೆಯೇ ಇದೀಗ ಡಿಚ್ಕಿ ಡಿಸೈನ್’ ಎಂಬ ಹೆಸರಿನ ಹೊಸಬರ ಚಿತ್ರವೊಂದು ಎಲ್ಲರ ಗಮನ ಸೆಳೆಯುತ್ತಿದೆ.

ಹೌದು, ‘ಡಿಚ್ಕಿ ಡಿಸೈನ್’ ಎಂಬ ಹೆಸರಿನ ಚಿತ್ರವು ಇಷ್ಟು ದಿನಗಳ ಕಾಲ ಹಿಪ್ ಹಾಪ್ ಸಾಂಗ್ ಮತ್ತು ಟೀಸರ್ ಮೂಲಕ ಗಮನ ಸೆಳೆದಿತ್ತು. ಇದೀಗ ಚಿತ್ರದ ಟ್ರೈಲರ್ ಕೂಡಾ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಮೋಡಿ ಮಾಡುತ್ತಿದೆ.

ಹೆಸರಿಗೆ ತಕ್ಕಂತೆ ಇದೊಂದು ಹೊಸ ಹುಡುಗರ ಕಾಮಿಡಿ ಕ್ರೈಮ್ ಥ್ರಿಲ್ಲರ್ ಕಥೆಯಾಗಿದೆ. ರಣ ಚಂದು ಈ ಚಿತ್ರದಲ್ಲಿ ನಟಿಸುವುದರೊಂದಿಗೆ ನಿರ್ದೇಶನ ಸಹ ಮಾಡಿದ್ದು, ನಾಯಕಿ ನಿಮಿಕಾ ರತ್ನಾಕರ್ ಇಲ್ಲಿ ಶೃತಿ ಎಂಬ ಪಾತ್ರ ನಿರ್ವಹಿಸಿದ್ದಾರೆ.

ಡಿ ಬೀಟ್ಸ್ ಯುಟ್ಯೂಬ್ ಚಾನಲ್ ನಿಂದ ರಿಲೀಸ್ ಆಗಿರುವ ಈ ಟ್ರೈಲರ್ ನಲ್ಲಿ ಹಳ್ಳಿ ಹೈದ ಮಹಾದೇವ ಬೆಂಗಳೂರಿಗೆ ಬಂದ ಮೇಲೆ ಏನಾಗುತ್ತದೆ. ಇಲ್ಲಿನ ಜೀವನ ಅವನ ಬದುಕನ್ನು ಹೇಗೆಲ್ಲಾ ಬದಲಾಯಿಸುತ್ತದೆ ಎನ್ನುವುದನ್ನು ಮಜವಾಗಿ ತೋರಿಸಲಾಗಿದೆ.

ರೋಣದ ಬಕ್ಕೇಶ್ ಸಂಗೀತದ ಹಾಡುಗಳು ಗಮನ ಸೆಳೆಯುತ್ತಿದ್ದು, ಅಂಬಿಷನ್, ಕನ್ಪ್ಯೂಷನ್, ಎಮೋಷನ್, ಸ್ಕ್ಯಾಮ್, ಕ್ರೈಮ್ ಇವೆಲ್ಲವನ್ನು ಹೊಂದಿರುವ ಈ ಚಿತ್ರವನ್ನು ಗೋಲ್ಡನ್ ಲೆನ್ಸ್ ಸಿನಿಮಾಸ್ ನಿರ್ಮಾಣ ಮಾಡಿದೆ.

ಇನ್ನು ಚಿತ್ರದಲ್ಲಿ ರಣ ಚಂದು, ನಿಮಿಕಾ ರತ್ನಾಕರ್, ಮನೋಹರ ಗೌಡ, ರವಿ ಎಸ್, ಪ್ರಶಾಂತ್, ಸೇರಿದಂತೆ ಅನೇಕರು ನಟಿಸಿದ್ದು, ಚಿತ್ರಕ್ಕೆ ಕಿಶೋರ್ ಮತ್ತು ಸಮರ್ಥ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಜುಲೈ 19 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಚಂದನವನದಲ್ಲಿ ಮತ್ತೆ ಕಾಣಿಸಿಕೊಂಡ ‘ಮೋಹಿನಿ’

#dichkidesign #movie #balkaninews #kannadasuddigalu, #nimikarathnakar

Tags