ಸುದ್ದಿಗಳು

‘ದಿಲ್ಬರ್’ ಗೆ ಬಳಕುವ ಬಳ್ಳಿಯಂತೆ ಕುಣಿದ ಸುಷ್ಮಿತಾ

ಸುಷ್ಮಿತಾ ಕೂಡ ದಿಲ್ಬರ್ ಹಾಡಿಗೆ ಬೆಲ್ಲಿ ಡಾನ್ಸ್ ಮಾಡಿದ್ದಾರೆ.

ಮುಂಬೈ,ಸೆ.08: ಬಾಲಿವುಡ್ ನ ಸೂಪರ್ ಹಿಟ್ ಹಾಡುಗಳಲ್ಲೊಂದು ‘ದಿಲ್ಬರ್’ ಕೂಡ ಒಂದು. ಇತ್ತೀಚೆಗೆಯಷ್ಟೇ ಈ ಹಾಡನ್ನು ರಿಮಿಕ್ಸ್ ಮಾಡಿದ್ದರು. ‘ಸತ್ಯಮೇವ ಜಯತೇ’ ಸಿನಿಮಾದಲ್ಲಿ ಈ ಹಾಡಿಗೆ ನಟಿ ನೋರಾ ಫತೇಹಿ ಹೆಜ್ಜೆ ಹಾಕಿದ್ದಾರೆ. ಇದು ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಆದರೆ ಈ ಹಾಡು 90 ರ ಮೋಡಿ ಮಾಡಿತ್ತು. ಬಾಲಿವುಡ್ ನಟಿ ಸುಷ್ಮಿತಾ ಸೇನ್ ಸಖತ್ ಆಗಿ ಸೊಂಟ ಕುಲಿಕಿಸಿದ್ದರು. 20 ವರ್ಷಗಳ ನಂತರ ಮತ್ತೆ ರಿಮಿಕ್ಸ್ ರೂಪದಲ್ಲಿ ಬಂದ ದಿಲ್ಬರ್ ಹಾಡನ್ನು ಈಗಲೂ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ರಿಮಿಕ್ಸ್ ನಲ್ಲಿ ನೋರಾ ಬೆಲ್ಲಿ ಡಾನ್ಸ್ ಮಾಡಿದ್ದಾರೆ. ನೊರಾ ಫತೇಹಿ ಮೊದಲೇ ಡ್ಯಾನ್ಸರ್. ಸುಷ್ಮಿತಾಗೆ ಈ ಹಾಡಿನ ನೆನಪಾದಂತಿದೆ. ಸುಷ್ಮಿತಾ ಕೂಡ ದಿಲ್ಬರ್ ಹಾಡಿಗೆ ಬೆಲ್ಲಿ ಡಾನ್ಸ್ ಮಾಡಿದ್ದಾರೆ.

ಸುಷ್ಮಿತಾ ಡಾನ್ಸ್

ಸುಷ್ಮಿತಾ ಸೇನ್ ವರ್ಕ್ಔಟ್ ನಂತರ ಡಾನ್ಸ್ ಮಾಡಿದ್ದಾರೆ. ಅದರ ವಿಡಿಯೋವನ್ನು ಸುಷ್ಮಿತಾ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಸುಷ್ಮಿತಾ ಡಾನ್ಸ್ ಅಭಿಮಾನಿಗಳಿಗೆ ಇಷ್ಟವಾಗಿದೆ.ಈಗಲೂ ಸುಷ್ಮಿತಾ ತಮ್ಮ ನಲುವತ್ತರ ಹರೆಯದಲ್ಲೂ ಇನ್ನೂ ತಮ್ಮ ದೇಹವನ್ನು ಕಟ್ಟು ಮಸ್ತಾಗಿ ಇಟ್ಟುಕೊಂಡಿದ್ದಾರೆ. ವಯಸ್ಸಾದರೂ ಚಿರು ಯವೌನದಂತಿರುವ ಸುಷ್ಮಿತಾ ಬಳಕುವ ಬಳ್ಳಿಯಂತೆ ಕುಣಿದಿದ್ದಾರೆ..

Tags

Related Articles