ಸುದ್ದಿಗಳು

ಮತ್ತೆ ಮೋಡಿ ಮಾಡಲಿದೆಯಾ ‘ದಿಲ್ ರಂಗೀಲಾ’ ಜೋಡಿ..!!!

‘ಚಮಕ್’ ಚಿತ್ರದ ಯಶಸ್ಸಿನ ನಂತರ ಗಣೇಶ್ ಅಭಿನಯದ ಸಿನಿಮಾ ‘ಗೀತಾ’

ಈ ಹಿಂದೆ ‘ದಿಲ್ ರಂಗೀಲಾ’ ಚಿತ್ರದಲ್ಲಿ ನಟಿಸಿ, ಮೋಡಿ ಮಾಡಿದ್ದ ಗಣೇಶ್ ಮತ್ತು ರಚಿತಾ ರಾಮ್ , ‘ಗೀತಾ’ ಚಿತ್ರದಲ್ಲಿ ಒಂದಾಗಲಿದೆಯಾ..?? ಈ ಬಗ್ಗೆ ಅಭಿಮಾನಿಗಳ ಅನಿಸಿಕೆಯೇನು..?

ಬೆಂಗಳೂರು, ಸ.07: ಗೋಲ್ಡನ್ ಸ್ಟಾರ್ ಗಣೇಶ್ ‘ಚಮಕ್’ ಚಿತ್ರದ ಯಶಸ್ಸಿನ ನಂತರ ಎರಡು ಮೂರು ಚಿತ್ರಗಳಲ್ಲಿ ನಿರತರಾಗಿದ್ದಾರೆ. ಚಿತ್ರೀಕರಣದ ಜೊತೆ ಜೊತೆಯಲ್ಲಿ ಕ್ರಿಕೆಟ್ ಆಡಲು ಸಿದ್ದವಾಗಿದ್ದಾರೆ. ಇವುಗಳ ಮಧ್ಯೆ ಗಣೇಶ್ ನಿರೂಪಣೆಯಲ್ಲಿ ಮೂಡಿ ಬರುವ ಸೂಪರ್ ಮಿನಿಟ್ ಕೂಡ ಆರಂಭವಾಗುತ್ತಿದೆ. ಇಷ್ಟೆಲ್ಲದರ ನಡುವೆ ‘ಗೀತಾ’ ಚಿತ್ರದ ನಾಯಕಿಯ ಬಗ್ಗೆ ಸದ್ದು ಮಾಡುತ್ತಿದೆ.

ಗೀತಾ.. ಯಾರು..??

1981 ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ಶಂಕರ್ ನಾಗ್ ಅವರ ‘ಗೀತಾ’ ಭಾರೀ ಸಂಚಲನ ಮೂಡಿಸಿತ್ತು. ಈಗ ಅದೇ ಹೆಸರಿನಲ್ಲಿ ಗಣೇಶ್ ನಟಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಆದರೆ ಈ ಚಿತ್ರಕ್ಕೆ ನಾಯಕಿ ಯಾರು ಎಂಬುದು ಅಂತಿಮವಾಗಿಲ್ಲ. ಹೀಗಾಗಿ ನಾಯಕಿಯ ಪಾತ್ರವನ್ನು ಯಾರು ನಿಭಾಯಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಆದರೆ ಗಣೇಶ್ ಅವರ ಅಭಿಮಾನಿಗಳು ಈ ಚಿತ್ರಕ್ಕೆ ‘ರಚಿತಾ ರಾಮ್’ ನಾಯಕಿಯಾಗಲಿ ಎಂದು ಆಶಿಸುತ್ತಿದ್ದಾರೆ.

ಮುಂದಿನ ತಿಂಗಳು ಆರಂಭ

ಸದ್ಯ ‘ಗೀತಾ’ ಚಿತ್ರಕ್ಕೆ ನಾಯಕಿಯ ಪಾತ್ರಕ್ಕಾಗಿ ಹುಡುಕಾಟ ನಡೆದಿದ್ದು, ಅಕ್ಟೋಬರ್ ನಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಗೋಲ್ಡನ್ ಫಿಲಂ ಅಸೋಸಿಯೇಷನ್ ನೊಂದಿಗೆ ಸಯ್ಯದ್ ಸಲಾಂ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದಿವಂಗತ ಶಂಕರ್ ನಾಗ್ ವ್ಯಕ್ತಿತ್ವವನ್ನು ರೀಲ್ ಪಾತ್ರದಲ್ಲಿ ಗಣೇಶ್ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮತ್ತೆ ತೆರೆ ಮೇಲೆ ಗಣಿ-ರಚ್ಚು

ಈ ಹಿಂದೆ ಗಣೇಶ್ ಮತ್ತು ರಚಿತಾ ರಾಮ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ‘ದಿಲ್ ರಂಗೀಲಾ’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗೆ ನಾಯಕಿಯಾಗಿದ್ದರು ರಚಿತಾ. ಇಬ್ಬರ ಜೋಡಿಯನ್ನ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.ಇನ್ನು ಈ ಸಿನಿಮಾವನ್ನು ವಿಜಯ ನಾಗೇಂದ್ರ ನಿರ್ದೇಶನ ಮಾಡುತ್ತಿದ್ದಾರೆ.

Tags