ಸುದ್ದಿಗಳು

ಇಟಲಿಯ ರಸ್ತೆ ಪಾಲಾದ ‘ಸಾಗರ್ ಕಿನಾರೆ’ ಹಾಡಿನ ಚೆಲುವೆ ಡಿಂಪಲ್ ನ ಮುಕ್ತ ನರ್ತನ

ಡಿಂಪಲ್ ‘ಬಾಬಿ’ ಡ್ಯಾನ್ಸ್ ವೈರಲ್..!

ಮುಂಬೈ, ಅ.11: ಬಾಲಿವುಡ್‍ ನನ್ನು ಹಲವು ವರ್ಷಗಳ ಕಾಲ ಆಳಿದ್ದ ಬಾಬಿ ಖ್ಯಾತಿಯ ಡಿಂಪಲ್ ಕಪಾಡಿಯಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಬಾಬಿ ಚಿತ್ರದಲ್ಲಿ ರಿಷಿ ಕಪೂರ್ ಅವರೊಂದಿಗೆ ಹಮ್ ತುಮ್ ಏಕ್ ಕಮರೆ ಮೆ ಬಂದ್ ಹೋ…’ ಹಾಡಿನ ಮೂಲಕ ಪ್ರಸಿದ್ಧ ಪಡೆದಿದ್ದ ಡಿಂಪಲ್ ಮತ್ತೊಮ್ಮೆ ಸ್ಟೆಪ್ಸ್ ಹಾಕಿದ್ದಾರೆ. ಆದರೆ, ಈ ಚಿತ್ರದಲ್ಲಿ ನಿಜ ಜೀವನದಲ್ಲಿ ಡ್ಯಾನ್ಸ್ ಮಾಡಿದ್ದಾರೆ.

ಡಿಂಪಲ್ ಕಪಾಡಿಯಾ ಡ್ಯಾನ್ಸ್ ವೈರಲ್

ಇಟಲಿಯ ರಸ್ತೆಯಲ್ಲಿ ಡ್ಯಾನ್ಸ್ ಮಾಡಿರುವ ಡಿಂಪಲ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಪುತ್ರಿ ಟ್ವಿಂಕಲ್ ಖನ್ನ, ಅಳಿಯ ಅಕ್ಷಯ್ ಕುಮಾರ್ ಮತ್ತು ಮೊಮ್ಮಗಳು ನಿತಾರಾ ಅವರೊಂದಿಗೆ ಇಟಲಿ ಪ್ರವಾಸದಲ್ಲಿದ್ದಾರೆ ಡಿಂಪಲ್. ಕುಟುಂಬದೊಂದಿಗೆ  ಸಖತ್ ಹ್ಯಾಪಿ ಮೂಡ್‍ ನಲ್ಲಿರುವ ಡಿಂಪಲ್ ಬಾಬಿ ಚಿತ್ರ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋವನ್ನು ಅಕ್ಷಯ್ ಮತ್ತು ಟ್ವಿಂಕಲ್ ಖನ್ನಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಭಾರಿ ಸುದ್ದಿಯಾಗಿದೆ.

ಅಕ್ಷಯ್ ಕುಮಾರ್ ಅವರು ಇತ್ತೀಚೆಗಷ್ಟೇ ‘ಹೌಸ್‍ಫುಲ್-4’ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿ ಕುಟುಂಬದೊಂದಿಗೆ ರಿಲ್ಯಾಕ್ಸ್ ಮೂಡ್‍ ನಲ್ಲಿದ್ದಾರೆ. ಬಿಡುವಿನ ಸಮಯದಲ್ಲಿ ವಿದೇಶ ಪ್ರವಾಸ ಕೈಗೊಂಡಿದ್ದು, ಸ್ವಲ್ಪ ವಿರಾಮ ಪಡೆದುಕೊಂಡಿದ್ದಾರೆ. ಪ್ರವಾಸದ ಪಿಕ್ಸ್ ಗಳನ್ನು ಇನ್ಸ್ಟಾಗ್ರಾಮ್‍ ನಲ್ಲಿ ಪೋಸ್ಟ್ ಮಾಡಿದ್ದಾರೆ.

.

Tags