ಸುದ್ದಿಗಳು

ನನ್ನ ಮೂರು ಸಿನಿಮಾಗಳಿಗಿಂತಲೂ ‘ಜೇಮ್ಸ್’ ವಿಭಿನ್ನ: ನಿರ್ದೇಶಕ ಚೇತನ್ ಕುಮಾರ್

ಕಳೆದ ಶುಕ್ರವಾರ ರಾಜ್ಯಾದ್ಯಂತ ತೆರೆ ಕಂಡಿದ್ದ ‘ಭರಾಟೆ’ ಚಿತ್ರವು ಪ್ರೇಕ್ಷಕರ ಮೆಚ್ಚುಗೆಯೊಂದಿಗೆ ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದೇ ವೇಳೆ ಚಿತ್ರತಂಡದವರು ಚಿತ್ರದ ಸಕ್ಸಸ್ ಪ್ರೇಸ್ ಮೀಟ್ ಮಾಡಿದ್ದರು.

‘ಎಲ್ಲಾ ಪ್ರೇಕ್ಷಕರಿಗೂ ಧನ್ಯವಾದಗಳು’ ಎಂದು ಧನ್ಯವಾದಗಳನ್ನು ಅರ್ಪಿಸಿದ ನಿರ್ದೇಶಕ ಚೇತನ್ ಕುಮಾರ್, ತಮ್ಮ ನಿರ್ದೇಶನದ ಮೂರನೇ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ಪ್ರತಿಕ್ರಿಯೆಗೆ ಮತ್ತು ಭರ್ಜರಿ ಕಲೆಕ್ಷನ್ ಗೆ ಸಂತಸ ವ್ಯಕ್ತಪಡಿಸಿದರು.

‘ಎಲ್ಲರಿಗೂ ಧನ್ಯವಾದಗಳನ್ನು ಈ ರೀತಿಯಾಗಿ ತಿಳಿಸಿದರು, ‘ನಮ್ಮ ಚಿತ್ರದ ಯಶಸ್ಸನ್ನು ಪ್ರೇಕ್ಷಕರಿಗೆ ಅರ್ಪಿಸುತ್ತೇನೆ. ಹಾಗೆಯೇ ಮಾದ್ಯಮದವರಿಗೂ ಧನ್ಯವಾದಗಳು. ನಮ್ಮ ಚಿತ್ರಕ್ಕೆ ಒಳ್ಳೆಯ ಪ್ರಶಂಸೆಯ ಮಾತುಗಳು ಬರುತ್ತಿವೆ. ಖುಷಿಯಾಗುತ್ತಿದೆ’ ಎಂದು ಚೇತನ್ ಕುಮಾರ್ ಹೇಳಿದರು.

ಇದೇ ವೇಳೆ ಮಾಧ್ಯಮದವರು ‘ಜೇಮ್ಸ್’ ಚಿತ್ರದ ಕುರಿತಂತೆ ಕೇಳಿದಾಗ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದರು, ‘ಇದು ನನ್ನ ಕನಸಿನ ಪ್ರಾಜೆಕ್ಟ್. ನನ್ನ ಮೂರು ಸಿನಿಮಾ ಏನು ಮಾಡಿದ್ದೀನಿ ಅವುಗಳೆಲ್ಲಾ ಒಂದು ಜಾನರ್.. ‘ಜೇಮ್ಸ್’ ಬೇರೆ ಜಾನರ್.. ಹೊಸರೀತಿಯ ಕಥೆ ಈ ಚಿತ್ರದಲ್ಲಿರುತ್ತದೆ. ಅಂದಹಾಗೆ ಈ ಚಿತ್ರವು ಮುಂದಿನ ತಿಂಗಳು ಶುರುವಾಗುತ್ತದೆ’.

ಇನ್ನು ಬಹಳ ದಿನಗಳ ಹಿಂದೆಯೇ ಈ ಸಿನಿಮಾ ಅನೌ ನ್ಸ್‌ಮೆಂಟ್‌ ಆಗಿತ್ತಾದರೂ, ಸಿನಿಮಾ ಶುರುವಾಗುವ ಸೂಚನೆ ಸಿಕ್ಕಿರಲಿಲ್ಲ. ಇದರ ಥೀಮ್ ಸಾಂಗ್ ಈಗಾಗಲೇ ಸಾಕಷ್ಟು ಜನರ ಮೆಚ್ಚುಗೆ ಪಡೆದುಕೊಂಡಿದೆ. ಇನ್ನು, ಈ ಸಿನಿಮಾದಲ್ಲಿ ಪುನೀತ್‌ ಗೆ ನಾಯಕಿ ಯಾರು? ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.

ಸ್ವಿಟ್ಜರ್ಲ್ಯಾಂಡ್ನಲ್ಲಿ ಶೂಟಿಂಗ್ ಮುಗಿಸಿದ ಒಡೆಯ

#ChethanKumar  #Bharaate #James  #SriMuruli #Filmnews #KannadaSuddigalu

Tags