ಸುದ್ದಿಗಳು

‘ಡೇಂಜರ್ ಜೋನ್’ ನಿರ್ದೇಶಕರ ತ್ರಿಭಾಷಾ ಸಿನಿಮಾ…!!!

ಈ ಹಿಂದೆ ‘ಡೇಂಜರ್ ಜೋನ್’ ಎಂಬ ಭಯಾನಕ ಕಥೆಯುಳ್ಳ ಸಿನಿಮಾವನ್ನು ಪ್ರೇಕ್ಷಕರಿಗೆ ಕೊಟ್ಟಿದ್ದ ನಿರ್ದೇಶಕ ದೇವರಾಜ ಕುಮಾರ್ ಇದೀಗ ಮೂರನೇಯ ಚಿತ್ರದ ತಯಾರಿಯಲ್ಲಿದ್ದು,ಚಿತ್ರಕ್ಕೆ ‘ಅನುಷ್ಕಾ’ ಎಂದು ನಾಮಕರಣ ಮಾಡಿದ್ದಾರೆ.

ಬೆಂಗಳೂರು, ಆ. 06: ಖ್ಯಾತ ಖಳನಟ ದಿ. ಅನಿಲ್ ಕುಮಾರ್ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ ‘ಡೇಂಜರ್ ಜೋನ್’ ಚಿತ್ರವು ಪ್ರೇಕ್ಷಕರನ್ನು ಆಕರ್ಷಿಸಿತ್ತು. ಈ ಚಿತ್ರವನ್ನು ದೇವರಾಜ ಕುಮಾರ್ ನಿರ್ದೇಶನ ಮಾಡಿದ್ದರು. ಮೊದಲ ಚಿತ್ರದ ಮೂಲಕ ಭಯಾನಕ ಕಥಾಹಂದರವನ್ನು ಹೇಳಿದ್ದ ಅವರು ಆನಂತರ ‘ನಿಶ್ಯಬ್ದ-2’ ಚಿತ್ರವನ್ನು ಮಾಡಿದ್ದರು.

ಅನುಷ್ಕಾ

ಹಿಂದಿನ ಎರಡು ಚಿತ್ರಗಳಲ್ಲಿ ಭಿನ್ನ ಕಥೆಗಳನ್ನು ಹೇಳಿದ್ದ ನಿರ್ದೇಶಕ ದೇವರಾಜ್ ಕುಮಾರ್ ಅವರು ಇದೀಗ ಮೂರನೇಯ ಚಿತ್ರದ ತಯಾರಿಯಲ್ಲಿದ್ದಾರೆ. ಚಿತ್ರಕ್ಕೆ ‘ಅನುಷ್ಕಾ’ ಎಂದು ನಾಮಕರಣ ಮಾಡಿದ್ದು, ಈ ಚಿತ್ರವು ಅಂದರೆ ಕನ್ನಡ, ತೆಲುಗು ಮತ್ತು ತಮಿಳು , ಹೀಗೆ ಮೂರು ಭಾಷೆಗಳಲ್ಲಿ ಮೂಡಿ ಬರಲಿದೆಯಂತೆ.

ಗೋಲ್ ಮಾಲ್ ಬ್ರದರ್ಸ್

ನಿರ್ದೇಶಕ ದೇವರಾಜ್ ಕುಮಾರ್ ಅವರು, ನಟ ಸೃಜನ್ ಲೋಕೇಶ್ ಅವರ ನಾಯಕತ್ವದ ‘ಗೋಲ್ ಮಾಲ್ ಬ್ರದರ್ಸ್’ ಚಿತ್ರವನ್ನು ಮಾಡುತ್ತಿದ್ದರು. ಸದ್ಯ ಆ ಚಿತ್ರವನ್ನು ಬದಿಗಿಟ್ಟು, ಇದೀಗ ‘ಅನುಷ್ಕಾ’ ಚಿತ್ರವನ್ನು ಪ್ರಾರಂಭಿಸಿದ್ದು, ಎಸ್. ಕೆ ಗಂಗಾಧರ ಎಂಬುವವರು ನಿರ್ಮಾಣ ಮಾಡುತ್ತಿದ್ದಾರೆ.

ಇನ್ನು ನಿರ್ದೇಶಕರಾದ ದೇವರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಮೇಕಪ್ ಮ್ಯಾನ್ ಆಗಿ ಗುರುತಿಸಿಕೊಂಡಿದ್ದವರು. ಆದರೆ ಈ ವೃತ್ತಿಯ ನಡುವೆಯೂ ನಿರ್ದೇಶನದತ್ತ ತೀವ್ರವಾದ ಒಲವು ಹೊಂದಿದ್ದ ಅವರು ‘ಡೇಂಜರ್ ಜೋನ್’ ಚಿತ್ರದ ಮೂಲಕ ಕನಸು ಸಾಕಾರಗೊಳಿಸಿಕೊಂಡು ಈಗಾಗಲೇ ಎರಡು ಚಿತ್ರಗಳನ್ನು ಮಾಡಿ ಮುಗಿಸಿದ್ದಾರೆ.

Tags