ಸುದ್ದಿಗಳು

“ಆ ದಿನಗಳು” ಚಿತ್ರದಿಂದ “ಅಮ್ಮ ಐ ಲವ್ ಯು” ವರೆಗಿನ ನಿರ್ದೇಶಕರ ಸಿನಿ ಪಯಣ…!

ಕನ್ನಡ ಚಿತ್ರರಂಗ ಕಂಡ ಸೃಜನ ಶೀಲ ನಿರ್ದೇಶಕರ ಸಾಲಿಗೆ ಖ್ಯಾತ ನಿರ್ದೇಶಕ, ರಂಗಕರ್ಮಿ, ಚೈತನ್ಯರವರ ಹೆಸರು ಸಹ ಸ್ಯಾಂಡಲ್ ವುಡ್ ನಲ್ಲಿ ಮುಂಚೂಣಿಯಲ್ಲಿದೆ. ಹಲವಾರು ವರ್ಷ ರಂಗಭೂಮಿಯಲ್ಲಿ ಕೃಷಿ ಮಾಡಿರುವ ಇವರು ಮೊದಲ ಬಾರಿಗೆ “ಆ ದಿನಗಳು” ಎನ್ನುವ ಶೀರ್ಷಿಕೆಯಲ್ಲಿ ಹಳೆಯ ತಲೆ ಮಾರಿನ ರೌಡಿಸಂ ಭೂಗತ ಲೋಕದ ಕರಾಳ ಬದುಕನ್ನು ತಮ್ಮದೇ ಆದ ಶೈಲಿಯಲ್ಲಿ ಕಥೆಯನ್ನು ಹೆಣೆಯುವುದರ ಮೂಲಕ ಆಗಿನ ಕಾಲಮಾನದ ರೀತಿಯಲ್ಲೇ ದೃಶ್ಯರೂಪಕ್ಕೆ ಇಳಿಸಿ ನಿರ್ದೇಶನ ಮಾಡಿ ಯಶಸ್ಸು ಕಂಡವರು ಇವರು…. ಅಲ್ಲಿಂದ ಶುರುವಾದ ಇವರ ಸಿನಿ ಪಯಣ ಇತ್ತೀಚಿಗೆ ತೆರೆಕಂಡು ಭರ್ಜರಿ ಯಶಸ್ಸು ಕಾಣುತ್ತಿರುವ ಚಿರಂಜೀವಿ ಸರ್ಜಾ ಅಭಿನಯದ ‘ಅಮ್ಮ ಐ ಲವ್ ಯು’ ಚಿತ್ರದವರೆಗೂ ಸಾಗಿ ಬಂದಿದೆ… ಈ ಯಶಸ್ಸಿನ ಸಂಭ್ರಮದಲ್ಲಿರುವ ನಿರ್ದೇಶಕ ಚೈತನ್ಯರೋದಿಗೆ ನಮ್ಮ ಬಾಲ್ಕಾನಿ ನ್ಯೂಸ್ ತಂಡ ನಡೆಸಿದ ಚುಟುಕು ಸಂದರ್ಶನದಲ್ಲಿ ಮನಬಿಚ್ಚಿ ತಮ್ಮ ಸಿನಿಮಾ ಪಯಣದ ಅನುಭವವಗಳನ್ನು ತಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ.

ದ್ವಾರಕೀಶ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ 51ನೇ ಚಿತ್ರ “ಅಮ್ಮ ಲವ್ ಯು” ತೆರೆ ಕಂಡು ಅತ್ಯತ್ತಮವಾಗಿ ಪ್ರೇಕ್ಷಕರನ್ನು ಮೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಚೈತನ್ಯರವರು ಸಿನಿಮಾ ನೋಡುವ ರೀತಿ, ಸಿನಿಮಾ ರೂಪಿಸುವ ರೀತಿ ಮತ್ತು ಚಿತ್ರರಂಗದ ಕುರಿತಾಗಿ ಅವರ ವಿಶ್ಲೇಷಣೆ, ಕ್ರಿಯಾಶೀಲಾತ್ಮಕ ಪ್ರಯೋಗಗಳು ಹಾಗು ಅವರ ದೃಷ್ಟಿಕೋನ ಕುರಿತಾಗಿ ಅವರು ನೀಡಿರುವ ಪ್ರತಿಕ್ರಿಯೆ ನಿಜಕ್ಕೂ ನಮ್ಮನ್ನು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ನಾವು ನೋಡಿ ಮೆಚ್ಚಿದ ಸಿನಿಮಾ ಅಮ್ಮ ಲವ್ ಯು ಕುರಿತಾಗಿ ಕೇಳಿದ ಪ್ರಶ್ನೆಗೆ ಮೀರಿ ಅವರ ಕ್ರಿಯಾಶೀಲತೆಯ ಆಯಾಮಗಳು ಒಂದು ರೀತಿಯಲ್ಲಿ ಎಲೆ ಕೋಸಿನಂತೆ ಎಳೆ ಎಳೆಯಾಗಿ ತೆರೆದು ಕೊಳ್ಳುತ್ತಾ ಹೋಯಿತು….!

ಈ ನಿಟ್ಟನಲ್ಲಿ ಹೇಳುವುದಾದರೆ ಸ್ಯಾಂಡಲ್ ವುಡ್ ಪ್ರವೇಶ ಪಡೆದು ದಶಕಗಳು ಕಳೆದಿವೆ, ಇವರ ಚೊಚ್ಚಲ ಅಂಡರ್ ವರ್ಲ್ಡ್ ಬ್ಯಾಕ್ ಗ್ರೌಂಡ್ ಇರುವ “ ಆ ದಿನಗಳು” ಸಿನಿಮಾ ನಿಜವಾಗಿಯೂ ಆ ದಿನಗಳಲ್ಲಿ ಒಂದು ಹೊಸ ಅಲೆಯನ್ನೇ ಸೃಷ್ಟಿಸಿತ್ತು ಜೊತೆಗೆ ಈ ರೀತಿಯ ಕತೆಗಳು ನಮ್ಮ ಉದ್ಯಮದಲ್ಲಿ ತುಂಬಾ ವಿರಳವಾದರೂ ಈ ರೀತಿಯ ಹೊಸ ಕತೆಯನ್ನು ರೂಪಿಸುವುದರ ಮೂಲಕ ಪ್ರೇಕ್ಷಕರಿಗೆ ಮೆಚ್ಚಿಸಿದ್ದರು, ನಂತರ ಒಂದೇ ವಿಧಾನದಲ್ಲಿ ಸಿನಿಮಾ ಮಾಡದೇ ಹಲವು ಪ್ರಕಾರಗಳಾದ ಯಾಕ್ಷನ್, ಹಾರರ್, ಥ್ರಿಲ್ಲರ್, ರೌಡಿಸಂ ಹಾಗು ಕಾಮಿಡಿ ಬೇಸ್ಡ್ ಕಥೆಗಳಿಗೆ ಜೀವ ನೀಡುವುದರ ಮೂಲಕ ತಮ್ಮದೇ ಆದ ಕಾರ್ಯ ಶೈಲಿಯನ್ನು ತೆರೆಯ ಮೇಲೆ ತೋರಿಸಿರುವ ನಿರ್ದೇಶಕರಿಗೆ ಪ್ರತಿ ಸಿನಿಮಾ ಸಹ ಅವರಿಗೆ ಒಂದು ರೀತಿಯ ಹೊಸತನವನ್ನು ನೀಡುತ್ತದೆಯಂತೆ ಹಾಗು ಅವರೂ ಸಹ ಸಾಕಷ್ಟು ಪೂರ್ವ ತಯಾರಿ ನಡೆಸಿ ಪ್ರತಿ ಕಥೆಯಲ್ಲೂ ಸಹ ಸಾಮಾಜಿಕ ಸಾಮರಸ್ಯಗಳನ್ನು ಹೆಕ್ಕಿ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರಂತೆ.

ಜೊತೆಗೆ ಸಿನಿಮಾರಂಗಕ್ಕೆ ಹೊಸ ರೀತಿಯ ಪ್ರಯೋಗಳು ಅತ್ಯವಶ್ಯಕ ಎನ್ನುವ ನಿಟ್ಟಿನಲ್ಲಿ ಹೇಳುತ್ತಾ ಕಳೆದೆರಡು ವರ್ಷಗಳಿಂದ ತಾಯಿ ಮಗನ ಭಾಂದವ್ಯ ಇರುವ ಸಿನಿಮಾಗಳು ಇರಲಿಲ್ಲ ಹಾಗಾಗಿ ನಾನು ಈ ರೀತಿಯ ಎಮೋಷನ್ಸ್ ಗಳನ್ನು ಇಟ್ಟುಕೊಂಡು ಕೆಲಸ ಮಾಡಿದ್ದೇನೆ ಜೊತೆಗೆ ಈ ಸಿನಿಮಾಕ್ಕೆ ಎಲ್ಲಾ ವರ್ಗದಿಂದಲೂ ಅದ್ಬುತವಾದ ಸಹಕಾರ ಸಿಕ್ಕಿದ್ದರಿಂದ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಹೇಳುತ್ತಾ…. ನಾನು ಇಲ್ಲಿಯವರೆಗೂ ಯಾವುದೇ ರೊಮ್ಯಾಂಟಿಕ್ ಸಿನಿಮಾ ಮಾಡಿಲ್ಲ ಆದ್ದರಿಂದ ಈ ನಿಟ್ಟಿನಲ್ಲಿ ಒಂದು ಹೊಸ ಕಥೆ ತಯಾರಿಯಲ್ಲಿದ್ದೇನೆ ಎಂದು ಹೇಳುತ್ತಾ ಮುಗುಳ್ನಗೆ ಬೀರಿದರು…….

ಸುಮನ್@ಬಾಲ್ಕಾನಿ ನ್ಯೂಸ್

Tags