ಸುದ್ದಿಗಳು

ಐಂದ್ರಿತಾ ಮತ್ತು ಕೃತಿ ಕರಬಂಧ ನಂತರ ಹೊಸ ಪ್ರತಿಭೆ ಪರಿಚಯಿಸುತ್ತಿರುವ ನಿರ್ದೇಶಕ ಮಹೇಶ್ ಬಾಬು

ಹೈದ್ರಾಬಾದ್, ಮಾ.14:

ಎಷ್ಟೋ ಮಂದಿ ಸಿನಿಮಾ ರಂಗಕ್ಕೆ ಪ್ರವೇಶ ಪಡೆಯಬೇಕೆಂದು ಆತೊರೆಯುತ್ತಾರೆ‌. ಎಷ್ಟೋ ಮಂದಿ ತಮ್ಮ ಸ್ವಂತ ಪ್ರತಿಭೆ ಮೇಲೆ ಬಂದರೆ ಇನ್ನೊಂದಿಷ್ಟು ಮಂದಿ ಬೇರೆಯವರ ಸಹಾಯದೊಂದಿಗೆ  ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಾರೆ. ಈ ಬಣ್ಣದ ಲೋಕದಲ್ಲಿ ಗಾಡ್ ಫಾದರ್ ಬೇಕೆ ಬೇಕು ಅನ್ನೋದು ಹಲವರ ಮಾತು. ಇನ್ನೊಂದಿಷ್ಟು ಮಂದಿ ಗಾಡ್ ಫಾದರ್ ಇಲ್ಲದೆಯೂ ಬೆಳೆದಿದ್ದಾರೆ. ಇನ್ನು ಒಂದಿಷ್ಟು ಮಂದಿಯನ್ನು ನಿರ್ದೇಶಕರು, ನಿರ್ಮಾಪಕರೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಿಸೋದುಂಟು. ಇದೀಗ ಹೊಸ ಪ್ರತಿಭೆಯೊಂದನ್ನು ಮಹೇಶ್ ಬಾಬು ಪರಿಚಯ ಮಾಡುತ್ತಿದ್ದಾರೆ.

ಹಿಟ್ ಸಿನಿಮಾ ನೀಡಿದ್ದ ಮಹೇಶ್ ಬಾಬು

ಹೌದು,  ಬಹಳಷ್ಟು ಮಂದಿ ಹಿರೋಯಿನ್ ಗಳ ಪಾಲಿಗೆ ಅದೃಷ್ಟದ  ಡೈರೆಕ್ಟರ್ ಅಂತಾನೇ ಹೆಸರು ವಾಸಿಯಾಗಿರುವ ನಿರ್ದೇಶಕ ಮಹೇಶ್ ಬಾಬು. ಸದ್ಯ ಐಂದ್ರಿತಾ ರೇ, ಕೃತಿ ಕರಬಂದ ಸೇರಿದಂತೆ ಹಲವಾರು ಮಂದಿ ನಟಿಮಣಿಯರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿದ ಹೆಗ್ಗಳಿಕೆ ಇವರದು‌. ಇದೀಗ ಮತ್ತೊಬ್ಬ ಪ್ರತಿಭೆಯನ್ನು ಕನ್ನಡ ಸಿನಿಮಾ ರಂಗಕ್ಕೆ ಕರೆತರುತ್ತಿದ್ದಾರೆ.

ಕೃತಿಕ ಎಂಬ ಹೊಸ ಪ್ರತಿಭೆ

ಅನೇಕ ಹಿಟ್ ಸಿನಿಮಾಗಳನ್ನು ನೀಡಿದ ಮಹೇಶ್ ಬಾಬು ಮತ್ತೊಂದು ಹೆಸರಿಡದ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ. ಈ ಹೆಸರಿಡದ ಸಿನಿಮಾಗೆ ಹೊಸ ಪ್ರತಿಭೆಯನ್ನು ಹಾಕಿಕೊಳ್ಳುತ್ತಿದ್ದಾರೆ.  ಬೆಂಗಳೂರಿನ ಕೃತಿಕಾ ಎಂಬ ಹೊಸ ಪ್ರತಿಭೆಯನ್ನು ಕರೆತಂದಿದ್ದಾರೆ. ಬೆಂಗಳೂರಿನಲ್ಲಿ ವಾಸವಿರುವ ಕೃತಿಕಾ ಭರತನಾಟ್ಯ ಕಲಾವಿದೆ. ಇದೀಗ ಇವರ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಕೃತಿಕಾ. ಇನ್ನು ಈ ಕೃತಿಕ ನಟಿ  ಆಮಿನಿ ಅವರ ಅಣ್ಣನ ಮಗಳಂತೆ. ಇದೀಗ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ.

ತಮಿಳು ಸಿನಿಮಾ ಗಿಟ್ಟಿಸಿಕೊಂಡ ರಶ್ಮಿಕಾ

#sandalwood #kannadamovies #balkaninews #directormaheshbabu #sandalwooddirectormahesbabu

Tags