ಸುದ್ದಿಗಳು

ಮೊದಲನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸಂತೋಷ್ ಆನಂದ್ ರಾಮ್

ಬೆಂಗಳೂರು, ಫೆ.21:

ಚಂದನವನದ ಬಹುಬೇಡಿಕೆಯ ಹಾಗೂ ಯಶಸ್ವಿ ನಿರ್ದೇಶಕ ಸಂತೋಷ್ ಆನಂದ್  ರಾಮ್. ಕನ್ನಡದ ಸ್ಟಾರ್ ಡೈರೆಕ್ಟರ್ ಆಗಿರುವ ಸಂತೋಷ್ ಕೇವಲ ಎರಡು ಸಿನಿಮಾಗಳನ್ನು ಮಾಡಿದ್ದರು ಸಹ ಆ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ದಾಖಲೆ ಬರೆದಿವೆ. ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ ಇವರು ತಮ್ಮ ಮೊದಲನೇ ವರ್ಷ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

ಸಂತೋಷ್ ವೆಡ್ಸ್ ಸುರಭಿ

ಬರೋಬ್ಬರಿ ಎರಡು ಹಿಟ್ ಚಿತ್ರಗಳನ್ನು ನೀಡಿರುವ ಸಂತೋಷ್ ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅದರಂತೆ ಇಂದು ಸಂತೋಷ್ ಮತ್ತು ಸುರಭಿಯವರು ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಸಂತೋಷ್ ರವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

One Year Of Togetherness😍 Happy Anniversary surabhi❤️ Stay blessed🙌 Love u 😘😘😘

A post shared by SanthoshAnanddramOfficial (@santhosh_ananddram) on


ಸಂತೋಷ್ ರವರ ಮೊದಲ ನಿರ್ದೇಶನದ ಸಿನಿಮಾ ರಾಮಾಚಾರಿ. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದಲ್ಲಿ ಮೂಡಿಬಂದ ಈ ಸಿನಿಮಾ ಪ್ರೇಕ್ಷಕರಲ್ಲಿ ಮೋಡಿ ಮಾಡಿದಂತು ಸುಳ್ಳಲ್ಲ. ಅಷ್ಟರ ಮಟ್ಟಿಗೆ  ಸ್ಯಾಂಡಲ್ ವುಡ್ ನಲ್ಲಿ ಈ ಸಿನಿಮಾ ನೂರು ದಿನಗಳನ್ನು ಪೂರೈಸಿತು. ತದನಂತರ ಪುನೀತ್ ರಾಜ್ ಕುಮಾರ್ ರವರ ಜೊತೆ ‘ರಾಜಕುಮಾರ’ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರವು ಕೂಡ ಬ್ಲ್ಯಾಕ್ ಬಸ್ಟರ್ ಹಿಟ್ ಆಗಿತ್ತು. ರಾಜಕುಮಾರ ಚಿತ್ರದ ಗೆಲುವಿನ ಬಳಿಕ ಸಂತೋಷ್ ಮತ್ತೆ  ಪುನೀತ್ ರಾಜ್ ಕುಮಾರ್ ರವರ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಅದುವೇ ‘ಯುವರತ್ನ’. ಕನ್ನಡ ರಾಜ್ಯೋತ್ಸವ ದಿನಾಚರಣೆಯಂದು ಈ ಸಿನಿಮಾದ ಶೀರ್ಷಿಕೆ ಹೊರಬಿದ್ದಿತ್ತು. ಅದರಂತೆ ಈಗಾಗಲೇ ಶೂಟಿಂಗ್ ಹಂತದಲ್ಲಿರುವ ‘ಯುವರತ್ನ’ ಈ ವರ್ಷದ ಕೊನೆಯ ವೇಳೆಗೆ ತೆರೆಯ ಮೇಲೆ ರಾರಾಜಿಸಲಿದೆ.

 

View this post on Instagram

 

Finally Mr & Mrs ❤️ Nimma Aashirvadha Namage SriRakshe 🙏

A post shared by SanthoshAnanddramOfficial (@santhosh_ananddram) on

 

View this post on Instagram

 

ಒಲವೇ ಜೀವನ ಸಾಕ್ಷಾತ್ಕಾರ❤️

A post shared by SanthoshAnanddramOfficial (@santhosh_ananddram) on

ಅವಿಭಕ್ತ ಕುಟುಂಬದಲ್ಲಿ ವಾಸಿಸಿದರೆ ಹಲವಾರು ರೀತಿಯ ಲಾಭಗಳಿವೆ!!!

#santhoshanandram #directorsanthoshanandrammovies #santhoshanandramandsurabhi #weddinganniversery #balkaninews #yuvarathnakannadamovie

.

Tags

Related Articles