ಸುದ್ದಿಗಳು

‘ಪಂಚತಂತ್ರ’ ಹಾಡು ಮೆಚ್ಚಿದ ಸಂತೋಷ್ ಆನಂದ್ ರಾಮ್

ಬೆಂಗಳೂರು, ಮಾ.14:

ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ ಪಂಚತಂತ್ರ. ಮೊನ್ನೆಯಷ್ಟೇ ಒಂದು ಹಾಡನ್ನು ಬಿಡುಗಡೆ ಮಾಡಿ ಸದ್ದು ಮಾಡಿತ್ತು ಚಿತ್ರತಂಡ. ಈಗಾಗಲೇ ಟೀಸರ್ ಮೂಲಕ ಪಂಚತಂತ್ರ ಚಿತ್ರ ಪ್ರೇಕ್ಷಕರ ಮನಸ್ಸಲ್ಲಿ ಅಚ್ಚೊತ್ತಿದೆ, ಇದರ ಬೆನ್ನಲ್ಲೇ ಒಂದೋಂದೇ ಹಾಡನ್ನು ಭಟ್ರು ಬಿಡುಗಡೆ ಮಾಡುತ್ತ ಪಂಚತಂತ್ರದ ಎಳೆಯನ್ನು ಬಿಚ್ಚಿಡ್ತಿದ್ದಾರೆ. ಇದೀಗ ಬ್ಯಾಡ ಹೋಗು ಅಂದ್ಬುಟ್ಲು ಹಾಡು ಮಿಸ್ಟರ್ ಮಿಸ್ಸಸ್ ರಾಮಾಚಾರಿ ಹಾಗೂ ರಾಜಕುಮಾರ ನಿರ್ದೇಶಕ ಸಂತೋಷ್ ಆನಂದ್ ರಾಮ್  ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಹಾಡಿನ ಬಗ್ಗೆ ನಿರ್ದೇಶಕ ಮಾತು

ಹೌದು, ಬ್ರೇಕ್ ಅಪ್ ಹಾಡು ಅಂತಾನೇ ಫೇಮಸ್ ಆಗಿದ್ದ ಬ್ಯಾಡ ಹೋಗು ಅಂದ್ಬುಟ್ಲು ಎನ್ನುವ ಹಾಡನ್ನು ವಾಸುಕಿ ವೈಭವ್ ಹಾಡಿದ್ದು, ನಿಜಕ್ಕೂ ಈ ಹಾಡು ಅದ್ಬುತವಾಗಿ ಮೂಡಿ ಬಂದಿದೆ. ಇದೀಗ ಈ ಹಾಡನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಮೆಚ್ಚಿಕೊಂಡಿದ್ದಾರೆ. ಈ ವಿಚಾರವಾಗಿ ವಿಡಿಯೋವೊಂದನ್ನು ಮಾಡಿರುವ ಅವರು. ನಿಜಕ್ಕೂ ಹಾಡು ಅದ್ಬುತವಾಗಿ ಮೂಡಿ ಬಂದಿದೆ. ಯೋಗರಾಜ್ ಭಟ್ ಅವರ ರೀತಿ ನಮಗೆ ಥಾಟ್ ಬರೋದಿಲ್ಲ. ಇಂದಿನ ಪೀಳಿಗೆಗೆ ಯಾವ ರೀತಿ ಬೇಕೋ ಅದೇ ರೀತಿ ಬರೆಯುತ್ತಾರೆ. ನಾನು ಇಲ್ಲಿಯ ತನಕ ನೋಡಿದ ಬಹರಗಾರರು, ಪದ ಪೋಣಿಸುವ ರೀತಿ ಯೋಗರಾಜ್ ಭಟ್ ಅವರಲ್ಲೇ ಕಂಡಿರುವುದು ಅಂತಾ ವಿಡಿಯೋದಲ್ಲಿ ಹಾಕಿಕೊಂಡಿದ್ದಾರೆ.

ಹಾಡಿಗೆ ಮೆಚ್ಚಿದ ಅಭಿಮಾನಿಗಳು

ಪಂಚತಂತ್ರ ಸಿನಿಮಾದಲ್ಲಿ ವಿಹಾನ್ ಮತ್ತು ಸೋನಲ್ ಹಾಗೂ ಅಕ್ಷರ ಗೌಡ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.. ಇನ್ನೂ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.. ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದಲ್ಲಿ ಸಿನಿಮಾ ಬರ್ತಿದೆ ಅಂದ್ರೆ ಅದರ ಸ್ಪೆಷಾಲಿಟಿನೇ ಬೇರೆ.. ಸಿನಿಮಾದಲ್ಲಿ ಲವ್, ಕಾಮಿಡಿ ಹಾಗೂ ಕಾಲೆಳೆಯುವ ಅಂಶಗಳಿರೋದಂತು ಪಕ್ಕಾ. ಇದೀಗ ಇದಕ್ಕೆ ತಾಜಾ ಉದಾಹರಣೆಯೆ ಈ ಬ್ಯಾಡ ಹೋಗು ಅಂದ್ಬುಟ್ಲು ಹಾಡು.

ಸಮಾಜ ಕಟ್ಟುವಿಕೆಯಲ್ಲಿ ಮಾಧ್ಯಮಗಳ ಶ್ರಮ ಪ್ರಶಂಸನೀಯ – ನ್ಯಾ.ಮೂ. ಸಂತೋಷ್ ಹೆಗ್ಡೆ

#balkaninews #santhoshanandram #panchatantrakannadamoviesongs #panchatantrakannadamovietrailer

Tags

Related Articles