ಸುದ್ದಿಗಳು

ಬರ್ತಡೇಗೆ ವಿಶ್ ಮಾಡಿದವರಿಗೆ ಭಟ್ರ ಸ್ಪೆಷಲ್ ಪತ್ರ!

ಕನ್ನಡದ ನಿರ್ದೇಶಕ ಯೋಗರಾಜ್ ಭಟ್ ವಿಕಟಕವಿ’ ಎಂದೇ ಫೇಮಸ್. ನಿರ್ದೇಶಕ, ಚಿತ್ರ ಸಾಹಿತಿ ಯೋಗರಾಜ್ ಭಟ್ ಅಕ್ಟೋಬರ್ 8 ರಂದು  ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ರು. ಅಕ್ಟೋಬರ್ 8 ರಂದು ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅಭಿಮಾನಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು . ಅಷ್ಟೇ ಅಲ್ಲದೆ ತಮ್ಮ ಕೈಬರಹದಲ್ಲಿ ಬರೆದ ಲೆಟರ್ ಶೇರ್ ಮಾಡಿದ್ದಾರೆ.

ನಮಸ್ತೆ, ನನ್ನ ಹುಟ್ಟುಹಬ್ಬ ಈವತ್ತು.. ಎಲ್ರಿಗೂ ಧನ್ಯವಾದ… ಬಾಲ್ಯದಿಂದ ಇದೆಲ್ಲ ಆಚರಣೆ ಮಾಡಿಲ್ಲವಾದ್ದರಿಂದ, ಯಾರಾದರೂ ಶುಭ ಹಾರೈಸಿದರೆ ನಾಚಿಕೆ-ಆತಂಕ-ಗಾಬರಿ ಎಲ್ಲ ಆಗ್ತವೆ. ನನಗೆ ಹಾರೈಸಿದ, ಹಾರೈಸುವ ಸದಾ ಹರಸುವ ಎಲ್ರಿಗೂ ದೀರ್ಘದಂಡ ನಮನ…ಒಂದಿಷ್ಟು ಕತ್ತೆ ವಯಸ್ಸಾಯ್ತು ಎಂದು ಟೆನ್ಷನ್ ಆಗ್ತಾ ಇದೆ…ಇನ್ನೊಂಚೂರು ಜವಾಬ್ದಾರು ನನಗೂ ಬರಲಿ ಎಂದು ಸಕಲರೂ ಹಾರೈಸುಬೇಕಾಗಿ ಕೋರುತ್ತೇನೆ….ಪ್ರೀತಿ ಪೂರ್ವಕವಾಗಿ ನಮನಗಳೊಂದಿಗೆ ವಿನಯದಿಂದ ನಿಮ್ಮವ ಯೋಗ್ರಾಜ್ ಭಟ್” ಎಂದಿದ್ದಾರೆ…

 

View this post on Instagram

 

ಜೈ ಕುಟುಂಬ ಜೈ ಗಾಳಿಪಟ – 2

A post shared by Yogaraj Bhat (@yogarajbhatofficial) on

ಚಿತ್ರ ವಿಮರ್ಶೆ: ಕುಸ್ತಿ ಅಖಾಡದಲ್ಲಿ ಅಬ್ಬರಿಸುತ್ತಲೇ ಆಪ್ತವಾಗುವ ‘ಪೈಲ್ವಾನ್’!

Tags