ಸುದ್ದಿಗಳು

ಗರ್ಭಿಣಿಯಾಗಿರುವ ವಿಷಯವನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿರುವ ದಿಶಾ ಮದನ್

ಬೆಂಗಳೂರು.ಏ.14: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕುಲವಧು ಧಾರಾವಾಹಿಯ ವಚನಾ ಪಾತ್ರಧಾರಿಯಾಗಿ ಮಿಂಚಿದ್ದ ಡ್ಯಾನ್ಸರ್ ದಿಶಾ ಮದನ್ ಗರ್ಭಿಣಿಯಂತೆ!! ಸಾಮಾಜಿಕ ಜಾಲತಾಣದ ಮೂಲಕ ಫೇಮಸ್ ಆಗಿರುವ ದಿಶಾ, ಡಬ್ ಸ್ಮಾಷ್, ಮ್ಯೂಸಿಕಲಿ ಹಾಗೂ ಟಿಕ್ ಟಾಕ್ ಮೂಲಕ ಎಲ್ಲರ ಮನ ಸೆಳೆದಿದ್ದರು.

Image result for disha.madan actress

ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ “We are Pregnant! ಎಂದು ಬರೆದಿರುವ ದಿಶಾ ಮದನ್ ತಾವು ಗರ್ಭಿಣಿ ಎನ್ನುವ ಸಂತಸದ ವಿಚಾರವನ್ನು ಎಲ್ಲರಿಗೂ ಶೇರ್ ಮಾಡಿದ್ದಾರೆ.

ಸದಾ ಕಾಲ ನನ್ನೊಂದಿಗೆ ಇರುವ ನನ್ನ ಕುಟುಂಬದವರಿಗೆ ತುಂಬಾ ಥ್ಯಾಂಕ್ಸ್. ಪತಿ ಶಶಾಂಕ್ ಹಾಗೂ ನಾನು ತುಂಬಾ ಎಕ್ಸೈಟ್ ಆಗಿದ್ದೇವೆ. ಅಗಸ್ಟ್ ತಿಂಗಳಿನಲ್ಲಿ ನಾವು ನಮ್ಮ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲಿದ್ದೇವೆ” ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ದಿಶಾ ಶೇರ್ ಮಾಡಿದ್ದಾರೆ.

ಡ್ಯಾನ್ಸಿಂಗ್ ಸ್ಟಾರ್ಸ್ ರಿಯಾಲಿಟಿ ಶೋ ಹಾಗೂ ‘ಕುಲವಧು’ ಧಾರಾವಾಹಿಯಲ್ಲಿ ನಟಿಸಿರುವ ದಿಶಾ ಮದನ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ಹೇಟ್ ಯು ರೋಮಿಯೋ’ ವೆಬ್‌ ಸೀರಿಸ್‌ ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಮ್ಮ ಮನೆಗೆ ಹೊಸ ಅತಿಥಿಯ ಆಗಮನದಲ್ಲಿರುವ ದಿಶಾ ಮದನ್ ಸ್ವಲ್ಪ ದಿನದಿಂದ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳದಿರುವುದಕ್ಕೆ ಕೊನೆಗೂ ಕಾರಣ ಬಯಲಾಗಿದೆ. ಈ ಸುದ್ದಿ ತಿಳಿದಿದ್ದೇ ತಡ, ಸಾಮಾಜಿಕ ಜಾಲತಾಣಗಳಲ್ಲಿ ದಿಶಾಗೆ ಹಾರೈಗೆಗಳ ಮಹಾಪೂರವೇ ಹರಿದು ಬಂದಿದೆ.

4 ವರ್ಷಗಳ ಬಳಿಕ ‘ಕೆಂಪೇಗೌಡ’ರಾಗಿ ಬಂದು ಘರ್ಜಿಸಿದ ಕೋಮಲ್ ಕುಮಾರ್

#dishapadan, #pregnant, #balkaninews #kannadasuddigalu

Tags