ಸುದ್ದಿಗಳು

ಸದ್ದಿಲ್ಲದೇ ‘ರಾಂಚಿ’ಗೆ ಹೊರಟು ಹೋದ ನಟಿ ದಿವ್ಯಾ..!!!

‘ಹುಲಿರಾಯ’ ಚಿತ್ರದ ನಂತರ ಮತ್ತೊಂದು ಚಿತ್ರದಲ್ಲಿ ನಟಿಸಲಿರುವ ನಟಿ

ಬೆಂಗಳೂರು.ಫೆ.10

‘ಹುಲಿರಾಯ’ ಚಿತ್ರದ ನಂತರ ನಟಿ ದಿವ್ಯಾ ಉರುಡುಗ ಸದ್ದಿಲ್ಲದೇ ‘ರಾಂಚಿ’ ಸೇರಿಕೊಂಡಿದ್ದಾರೆ. ಅರ್ಥಾತ್ ಅವರು ‘ರಾಂಚಿ’ ಹೆಸರಿನ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಹೌದು, ಶಶಿಕಾಂತ್ ಗಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ನೋಡುಗರ ಮನ ಗೆದ್ದ ನಾಯಕಿ

ದಿವ್ಯಾ ಉರುಡುಗ.. ಹುಲಿರಾಯ’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಪ್ರತಿಭೇಯ ನಟಿ. ಆನಂತರ ‘ಧ್ವಜ’ ಹಾಗೂ ‘ಫೇಸ್ ಟು ಫೇಸ್’ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಅವರು ‘ರಾಂಚಿ’ ಹೆಸರಿನ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಿನಿಮಾರಂಗವೇ ಕಥಾವಸ್ತುವಾಗಿದ್ದು, ದಿವ್ಯಾ ಇಲ್ಲಿ ಸಹಾಯಕ ನಿರ್ದೇಶಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಚಿತ್ರದ ಬಗ್ಗೆ

ಈ ಚಿತ್ರದಲ್ಲಿ ‘ಉರ್ವಿ’ ಖ್ಯಾತಿಯ ಪ್ರಭು ನಾಯಕನಟರಾಗಿ ನಟಿಸುತ್ತಿದ್ದಾರೆ. ಸಿನಿಮಾ ಜಗತ್ತಿನ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸುತ್ತಿರುವುದಕ್ಕೆ ಖುಷಿ ನಾಯಕಿ ದಿವ್ಯಾ ವ್ಯಕ್ತಪಡಿಸುತ್ತಾರೆ.

‘ಇದೊಂದು ನೈಜ ಘಟನೆಗಳಿಂದ ಪ್ರೇರಿತಗೊಂಡು ತಯಾರಾಗುತ್ತಿರುವ ಸಿನಿಮಾ. ನಾನಿದರಲ್ಲಿ ಸಹಾಯಕ ನಿರ್ದೇಶಕಿಯ ಪಾತ್ರ ಮಾಡುತ್ತಿದ್ದೇನೆ. ಇಷ್ಟು ದಿನ ಸೆಟ್ ನಲ್ಲಿ ಸಹಾಯಕ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದೆ. ಆದರೆ, ಇಲ್ಲಿ ಅವರ ಪಾತ್ರವನ್ನೇ ನಾನು ಪೋಷಿಸುತ್ತಿರುವುದು ವಿಶೇಷ ಎನಿಸುತ್ತಿದೆ’ ಎನ್ನುತ್ತಾರೆ.

‘ರಾಂಚಿ’ಯಲ್ಲಿಯೇ ಚಿತ್ರೀಕರಣ

ಈಗಾಗಲೇ ‘ರಾಂಚಿ’ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ರಾಂಚಿಯಲ್ಲೇ ಚಿತ್ರತಂಡ ಮುಗಿಸಿಕೊಂಡು ಬಂದಿರುವ ಚಿತ್ರತಂಡ, ಉಳಿದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸಲಿದ್ದಾರೆ. ವಿಶೇಷವೆಂದರೆ, ಚಿತ್ರದಲ್ಲಿ ನಾಯಕ ಪ್ರಭುಗೆ ನಿರ್ದೇಶಕನ ಪಾತ್ರ.

ಇನ್ನು ಈ ಚಿತ್ರವನ್ನು ‘ಬಾಲ್ ಪೆನ್’, ‘ಐಪಿಸಿ ಸೆಕ್ಷನ್ 300’ ಸಿನಿಮಾಗಳನ್ನು ಮಾಡಿದ್ದ ಶಶಿಕಾಂತ್ ಈ ಬಾರಿ ನೈಜ ಘಟನೆ ಆಧಾರಿತ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ ಸಂದೀಪ್ ಚೌಟ ಸಂಗೀತವಿದೆ. ಪ್ರೇಮಿಗಳ ದಿನದಂದು (ಫೆ.14) ಚಿತ್ರದ ಟ್ರೇಲರ್ ಲಾಂಚ್ ಆಗಲಿದೆ.

ಬೆಳ್ಳಿತೆರೆಗೆ ಕರಿಯಪ್ಪನ ಕೆಮಿಸ್ಟ್ರಿ

#divyauruduga, #balkaninews #filmnews, #kannadasuddigalu #ranchi

Tags