ಸುದ್ದಿಗಳು

ಟೈಟಲ್ ನಿಂದಲೇ ಸದ್ದು ಮಾಡುತ್ತಿರುವ ಸಿನಿಮಾ ‘ಡಿ.ಕೆ ಬೋಸ್’

ಒಂದು ಡೈಮಂಡ್ ಮತ್ತು ಇಬ್ಬರು ಕಳ್ಳರು ಸುತ್ತ ನಡೆಯುವ ಕಥೆ

ಬೆಂಗಳೂರು.ಫೆ.20

ವಿಭಿನ್ನ ಪೋಸ್ಟರ್ ಮತ್ತು ಟೈಟಲ್ ಮೂಕಲವೇ ಎಲ್ಲರ ಗಮನ ಸೆಳೆದಿರುವ ಸಿನಿಮಾ ‘ಡಿ.ಕೆ ಬೋಸ್’. ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಇದೇ ತಿಂಗಳ 24 ರಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.

ಚಿತ್ರದ ಬಗ್ಗೆ

ಅಂದ ಹಾಗೆ ಇದೊಂದ ವಜ್ರ ಮತ್ತು ಇಬ್ಬರು ಕಳ್ಳರ ಸುತ್ತ ನಡೆಯುವ ಕಥೆಯನ್ನು ಒಳಗೊಂಡಿದೆ. ಸಂತೋಷ್ ಮಹಾಂತೇಶ್ ಹಾಗೂ ನರಸಿಂಹಮೂರ್ತಿ ನಿರ್ಮಿಸಿರುವ ಈ ಚಿತ್ರವನ್ನು ನಿರ್ಮಾಪಕರಲೊಬ್ಬರಾದ ಸಂತೋಷ್ ಮಹಾಂತೇಶ್ ನಿರ್ದೇಶಿಸಿದ್ದಾರೆ. ಮುಂದಿನ ತಿಂಗಳ 15 ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದೆ.

“ಡೈಮಂಡ್ ಹುಡುಕಿಕೊಂಡು ಮಂಗಳೂರಿಗೆ ಇಬ್ಬರು ಕಳ್ಳರು ಬರುತ್ತಾರೆ. ಅವರು ಬಂದ ಮೇಲೆ ಅಲ್ಲಿ ಏನೇನು ಘಟನೆಗಳು ನಡೆಯುತ್ತವೆ ಎನ್ನುವ ಕಥಾಹಂದರವುಳ್ಳ ಈ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ” ಎಂದು ಚಿತ್ರತಂಡದವರು ಹೇಳುತ್ತಾರೆ.

ತಾರಾಬಳಗ

ಇನ್ನು ಚಿತ್ರದಲ್ಲಿ ಪೃಥ್ವಿ ಅಂಬರ್, ಭೋಜರಾಜ್ ವಾಮಂಜೂರ್, ಶೋಭ್ ರಾಜ್ ಪಾವೂರ್, ರಿಷ ನಿಜಗುಂದ್, ರಘು ಪಾಂಡೇಶ್ವರ್ ಸೇರಿದಂತೆ ಮುಂತಾದವರು ನಟಿಸಿದ್ದು, ಡಿಲ್ವಿನ್ ಸಂಗೀತ ನೀಡಿದ್ದಾರೆ. ಉಳಿದಂತೆ ಉದಯ್ ಬಲ್ಲಾಳ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನವಿದೆ.

‘ಚಂಬಲ್’ ಗೆ ಸಿನಿ ತಾರೆಯರ ವಿಶ್

#dkbose, #balkaninews #filmnews, #kannadasuddigalu

Tags

Related Articles