ಸುದ್ದಿಗಳು

‘ಜೀ ಕನ್ನಡದಲ್ಲಿ ಪ್ರೇಕ್ಷಕರ ನಡುವೆ ‘ಡಿಕೆಡಿ ಲಿಟ್ಲ್‌ ಮಾಸ್ಟರ್ಸ್‌’ ರಿಯಾಲಿಟಿ ಶೋ!

‘ಜೀ ಕನ್ನಡ’ ವಾಹಿನಿಯು ನೂತನವಾಗಿ ಡಾನ್ಸ್ ರಿಯಾಲಿಟಿ ಶೋ ಆಯೋಜಿಸಲು ತಯಾರಿ ನಡೆಸುತ್ತಿದೆ  ‘ಡಾನ್ಸ್ ಕರ್ನಾಟಕ ಡಾನ್ಸ್ (ಡಿಕೆಡಿ) ಲಿಟ್ಲ್ ಮಾಸ್ಟರ್ಸ್’ ಎನ್ನುವ ಶೀರ್ಷಿಕೆಯಲ್ಲಿ ಕಾರ್ಯಕ್ರಮವು ಸೆಟ್ಟೇರಲಿದ್ದು ಪ್ರೇಕ್ಷಕರ ನಡುವೆಯೇ ಈ ಕಾರ್ಯಕ್ರಮವನ್ನುಆರಂಭಿಸಲು ತೀರ್ಮಾನಿಸಿದೆ ಎಂದು ತಿಳಿಸಲಾಗಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಯಸುವವರು ವಾಹಿನಿಯ ಎಂ.ಜಿ. ರಸ್ತೆಯ ಕಚೇರಿಯಲ್ಲಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯ ನಡುವೆ ಪಾಸ್‌ ಪಡೆಯಬಹುದು. ಮೊದಲು ಬಂದವರಿಗೆ ಆದ್ಯತೆ ಆಧಾರದಲ್ಲಿ ಪಾಸ್ ನೀಡಲಾಗುವುದು ಎಂದು ಕಾರ್ಯಕ್ರಮದ ಯೋಜಕರು ಹಾಗು ವಾಹಿನಿಯವರು ತಿಳಿಸಿದ್ದಾರೆ.

‘ಡಿಕೆಡಿ ಲಿಟ್ಲ್‌ ಮಾಸ್ಟರ್ಸ್‌’ ಕಾರ್ಯಕ್ರಮ ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಬೆಂಗಳೂರಿನ ‘ಮಾನ್ಯತಾ ಎಂಬಸಿ ಬ್ಯುಸಿನೆಸ್ ಪಾರ್ಕ್ ಕ್ಯಾಂಪಸ್‍’ನ ವೈಟ್ ಆರ್ಕಿಡ್‍ನಲ್ಲಿ ನಡೆಯಲಿದ್ದು. ಮೂರು ಗಂಟೆಯೊಳಗೆ ವೈಟ್‌ ಆರ್ಕಿಡ್‌ಗೆ ಬಂದು ಪಾಸ್‌ ಪಡೆಯುವ ಅವಕಾಶ ಕೂಡ ಇದೆ ಎಂದು ತಿಳಿಸಲಾಗಿದೆ.

‘ಡಿಕೆಡಿ ಲಿಟ್ಲ್ ಮಾಸ್ಟರ್ಸ್‍’ನಲ್ಲಿ, ‘ಸರೆಗಮಪ ಲಿಟ್ಲ್ ಚಾಂಪ್ಸ್’, ‘ಡ್ರಾಮಾ ಜೂನಿಯರ್ಸ್ 1 ಮತ್ತು 2ನೇ ಸೀಸನ್‌’ ಹಾಗೂ ‘ಜೋಡಿ ಹಕ್ಕಿ’ ಮತ್ತು ‘ಗಂಗಾ’ ಧಾರಾವಾಹಿಗಳ ಬಾಲಪ್ರತಿಭೆಗಳು ಭಾಗವಹಿಸಲಿವೆ. ಅನುಶ್ರೀ ಕಾರ್ಯಕ್ರಮ ನಿರೂಪಕಿ ಆಗಿರಲಿದ್ದಾರೆ. ವಿಜಯ್ ರಾಘವೇಂದ್ರ, ರಕ್ಷಿತಾ ಮತ್ತು ಅರ್ಜುನ್ ಜನ್ಯ ತೀರ್ಪುಗಾರರಾಗಿರುತ್ತಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿ ಜೋಡಿಗೂ ಕನ್ನಡ ಚಿತ್ರರಂಗದ ಖ್ಯಾತ ನೃತ್ಯ ನಿರ್ದೇಶಕರಿಂದ ತರಬೇತಿ ನೀಡಲಾಗುತ್ತದೆಯಂತೆ ಎಂದು ತಿಳಿಸಲಾಗಿದೆ.

Tags

Related Articles

Leave a Reply

Your email address will not be published. Required fields are marked *