ಸುದ್ದಿಗಳು

‘ಡಾಲಿ’ ಅಭಿನಯಕ್ಕೆ ‘ಆರ್ ಜಿ ವಿ’ ಫಿದಾ..!!

ಬೆಂಗಳೂರು, ಆ.21: ‘ಟಗರು’ ಚಿತ್ರದ ‘ಡಾಲಿ’ ಪಾತ್ರದಲ್ಲಿ ಧನಂಜಯ ಮಿಂಚುತ್ತಲಿರುವಾಗಲೇ ಅವರೊಂದಿಗೆ ಚಿತ್ರ ಶುರು ಮಾಡಿದ್ದವರು ರಾಮ್ ಗೋಪಾಲ್ ವರ್ಮಾ. ಅವರು ನಿರ್ಮಾಣ ಮಾಡಿರುವ ‘ಭೈರವ ಗೀತಾ’ ಎಂಬ ಚಿತ್ರದಲ್ಲಿ ಧನಂಜಯ ನಾಯಕನಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಇದೀಗ ಈ ಚಿತ್ರದ ಮೊದಲ ನೋಟ ಆರ್.ಜಿ.ವಿ ಕೈ ಸೇರಿದೆ.

ಭೈರವ-ಗೀತಾ

ಇನ್ನುಳಿದಂತೆ ವರ್ಮಾ ಬಹುವಾಗಿ ಹೊಗಳಿರುವುದು ನಿರ್ದೇಶಕ ಸಿದ್ದಾರ್ಥ ಅವರ ಕಸುಬುದಾರಿಕೆಯನ್ನು. ಆರ್.ಜಿ.ವಿ ಬಹಳಷ್ಟು ನಂಬಿಕೆಯಿಟ್ಟು ‘ಭೈರವ ಗೀತಾ’ ಚಿತ್ರವನ್ನು ಸಿದ್ದಾರ್ಥ ಕೈಗೊಪ್ಪಿಸಿದ್ದರು. ಆದರೆ ಮೊದಲ ನೋಟವನ್ನು ನೋಡಿದ ವರ್ಮಾ ತಮ್ಮ ಶಿಷ್ಯ ನಿರೀಕ್ಷೆಗೂ ಮೀರಿ ಈ ಚಿತ್ರವನ್ನು ರೂಪಿಸಿದ್ದಾನೆಂದು ಬೆನ್ನು ತಟ್ಟಿದ್ದಾರೆ.

“ಕಳೆದ ಹತ್ತಾರು ವರ್ಷಗಳಿಂದ ಸಿದ್ದಾರ್ಥನನ್ನು ನೋಡುತ್ತಿದ್ದೇನೆ. ಆತ ಪ್ರತಿಭಾವಂತ, ಶ್ರಮ ಜೀವಿ. ಆತನ ಟ್ಯಾಲೆಂಟಿನ ಮೇಲೆ ನಂಬಿಕೆ ಇಟ್ಟು ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊರಿಸಿದ್ದೆ. ಅದನ್ನು ಅವನು ಸಮರ್ಥವಾಗಿ ನಿರ್ವಹಿಸಿದ್ದಾನೆ” ಎಂದು ವರ್ಮಾ ಹೇಳಿದ್ದಾರೆ.

“ಭೈರವ ಗೀತಾ” ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ವರ್ಮಾ ಗರಡಿಯಲ್ಲಿ ಪಳಗಿರುವ ಸಿದ್ದಾರ್ಥ. ಅವರ ನಿರ್ದೇಶನದಲ್ಲಿ ಧನಂಜಯ್ ಅಬ್ಬರದ ನಟನೆ ನೀಡಿರುವ ಈ ಚಿತ್ರದ ಮೊದಲ ನೋಟವನ್ನು ವರ್ಮಾ ಮೆಚ್ಚಿ ಕೊಂಡಾಡಿದ್ದಾರೆ. ಡಾಲಿ ಭೈರವನಾಗಿ ನೀಡಿರುವ ನಟನೆಯನ್ನು ಮೆಚ್ಚಿಕೊಂಡಿರುವ ವರ್ಮಾ, ಧನಂಜಯನ ಪಾಲಿಗೆ ಈ ಚಿತ್ರ ಮಹಾ ತಿರುವು ನೀಡುವ ಭವಿಷ್ಯವನ್ನೂ ಹೇಳಿದ್ದಾರೆ.

ಈ ಚಿತ್ರ ಆರಂಭದಲ್ಲಿಯೇ ಎಬ್ಬಿಸಿರುವ ಹವಾ ನೋಡಿದರೆ ಖಂಡಿತವಾಗಿಯೂ ಈ ಚಿತ್ರ ಟಗರು ಚಿತ್ರವನ್ನೇ ಸರಿಗಟ್ಟುವಂಥಾ ದಾಖಲೆ ನಿರ್ಮಿಸುವ ಲಕ್ಷಣಗಳೇ ಕಾಣಿಸುತ್ತಿವೆ.

Tags

Related Articles