ಸುದ್ದಿಗಳು

ಈ ಬಾರಿ ಅರ್ಥಪೂರ್ಣವಾದ ಹುಟ್ಟುಹಬ್ಬ ಆಚರಿಸೋಣ: ಡಾಲಿ ಧನಂಜಯ್…!!!

ನಟ ಧನಂಜಯ್ ಅವರ ಜನ್ಮದಿನ (ಆಗಸ್ಟ್ 23) ಬರಲು ಇನ್ನೇನು ಕೆಲವೇ ದಿನಗಳು ಬಾಕಿಯಿದೆ… ಅವತ್ತು ಅವರ ಅಭಿಮಾನಿಗಳು ಸೇರಿಕೊಂಡು ಅತ್ಯಂತ ಸಡಗರ ಸಂಭ್ರಮದಿಂದಅವರ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಆದರೆ ಈ ಸಂಭ್ರಮ ಈ ರೀತಿಯಾಗಿ ಬೇಡವೆಂದು ಹಾಗೆಯೇ ಅರ್ಥಪೂರ್ಣವಾಗಿ ಆಚರಿಸೋಣವೆಂದು ಸ್ವತಃ ಧನಂಜಯ್ ಅವರೇ ಹೇಳಿದ್ದಾರೆ.

‘ಟಗರು ಚಿತ್ರದಲ್ಲಿ ನನ್ನ ನೆಗೆಟಿವ್ ರೋಲ್ ಕಂಡು ಸೈಮಾ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದೀರ. ಅದಕ್ಕೆ ನಿಮ್ಮೆಲ್ಲರಿಗೂ ಚಿರಋಣಿ. ಅಂದ ಹಾಗೆ ಈ ಬಾರಿ ಉತ್ತರ ಕರ್ನಾಟಕದಲ್ಲಿ ಮಹಾ ಪ್ರವಾಹವಾಗಿ ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ಈ ಬಾರಿಯ ನನ್ನ ಹುಟ್ಟುಹಬ್ಬಕ್ಕೆ ಬರೋ ಅಭಿಮಾನಿಗಳು ಹಾರ, ಹೂ, ಕೇಕು, ತರುವ ಬದಲಾಗಿ ಅದೇ ಹಣದಲ್ಲಿ ಸಂತ್ರಸ್ತಗೆ ಅಗತ್ಯ ವಸ್ತುಗಳನ್ನು ನೀಡಿ ಸಹಾಯ ಮಾಡಿ .ಈಗಾಗಲೇ ‘ಸಲಗ’ ಚಿತ್ರತಂಡ, ಹಾಗೂ ಹಲವು ಅಭಿಮಾನಿಗಳ ಬಳಗ ನೆರೆ ಸಂತ್ರಸ್ತರಿಗೆ ಕೈಲಾದ ಸಹಾಯ ಮಾಡಿದ್ದಾರೆ. ನಮ್ಮೊಂದಿಗೆ ನೀವೂ ಸಹ ಮತ್ತೆ ಕೈ ಜೋಡಿಸಿ’ ಎಂದು ಧನಂಜಯ್ ವಿನಂತಿಸಿಕೊಂಡಿದ್ದಾರೆ.

ಇದಷ್ಟೇ ಅಲ್ಲದೇ ಧನಂಜಯ್ ರವರು ‘ಪ್ರತಿ ಬಾರಿ ಆಗಸ್ಟ್​ 22ರ ರಾತ್ರಿಯಂದು ಅಭಿಮಾನಿಗಳು ಮನೆ ಬಳಿ ಬಂದು ಶುಭ ಹಾರೈಸುತ್ತಿದ್ರಿ. ಆದರೆ ಈ ಬಾರಿ ನಾನು ಶೂಟಿಂಗ್ ​ನಲ್ಲಿ ಇರುವುದರಿಂದ 23ರ ಬೆಳಗ್ಗೆ ಅಂದರೆ,  ಶುಕ್ರವಾರ ನಿಮಗೆಲ್ಲಾ ಸಿಗುತ್ತೇನೆ. ಗವಿಪುರದಲ್ಲಿರುವ ಬಂಡಿ ಮಹಾಕಾಳಿ ದೇಗುಲದಲ್ಲಿ ಅದೇ ದಿನ ‘ಬಡವ ರಾಸಲ್’ ಎಂಬ ನನ್ನ ಹೊಸ ಸಿನಿಮಾದ ಮುಹೂರ್ತ ಸಮಾರಂಭವಿದೆ, ಬನ್ನಿ ಹರಸಿ ಅಂತಾ’ ಎಂದು ಕೇಳಿಕೊಂಡಿದ್ದಾರೆ.

ಪ್ರಭಾಸ್ ಬ್ಯಾಡ್ ಬಾಯ್ ಲುಕ್ ಗೆ ಫಿದಾ ಆದ ಅಭಿಮಾನಿಗಳು

#dollyDhananjay #birthdayNews #FilmNews, #KannadaSuddigalu #kannadafilm, #kannadamovie #BadavaRascal

Tags