ಸುದ್ದಿಗಳು

ಡಾಲಿಗೆ ಸಿಕ್ಕ ನಾಯಕಿ ಇವರೇ..!!!

ರಾಟೆ ಧನಂಜಯ್, ಟಗರು ಚಿತ್ರದ ನಂತರ ಡಾಲಿ ಎಂದೇ ಫೇಮಸ್. ಇದೀಗ ಅವರು ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿರುವ ‘ಭೈರವ ಗೀತಾ’ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದು, ಬಾಲಿವುಡ್ ನ ಖ್ಯಾತ ನಿರ್ದೇಶಕ ಆರ್.ಜಿ.ವಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಈಗಾಗಲೇ ಚಿತ್ರದ ಪೋಸ್ಟರ್ ಗಳು ಬಿಡುಗಡೆಗೊಂಡಿದ್ದವು. ಆದರೆ ನಾಯಕಿಯ ಬಗ್ಗೆ ಎಲ್ಲಿಯೂ ಚಿತ್ರರಂಗ ಹೇಳಿಕೊಂಡಿರಲಿಲ್ಲ. ಇದೀಗ ಇರಾ ಎಂಬುವವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದೆ ಚಿತ್ರತಂಡ. ಇರಾ ಅವರು, ಆರ್ ಜಿ ವಿ ಪ್ರೊಡಕ್ಷನ್ ನಿಂದಲೇ ತಮ್ಮ ವೃತ್ತಿ ಜೀವನ ಆರಂಭಿಸುತ್ತಿದ್ದಾರೆ. ಚಿತ್ರದಲ್ಲಿ ದಬ್ಬಾಳಿಕೆ ಮಾಡುವ ಭೂ ಮಾಲೀಕನ ಮಗಳ ಪಾತ್ರವನ್ನು ಇರಾ ಕಾಣಿಸಿಕೊಳ್ಳುತ್ತಿದ್ದಾರೆ

ಚೊಚ್ಚಲ ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚು ಮಹತ್ವ ಇರುವ ಪಾತ್ರ ಎಂಬ ಕಾರಣಕ್ಕೆ ಇರಾ ಅವರು ಸಖತ್ ಖುಷಿಯಾಗಿದ್ದಾರೆ. ಹಾಗೂ ಚೊಚ್ಚಲ ಚಿತ್ರದಲ್ಲೇ ದೊಡ್ಡ ಬ್ಯಾನರ್ ನಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ಇರಾ ಎಗ್ಸೈಟ್ ಆಗಿದ್ದಾರಂತೆ.

ಪ್ರಸ್ತುತ ಹೈದರಾಬಾದ್ನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಧನಂಜಯ ಮತ್ತು ಐರಾ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಈ ಚಿತ್ರವನ್ನು ಆರ್.ಜಿ.ವಿ ಅವರು ರಾಶಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದು, ಭಾಸ್ಕರ್ ರಾಶಿ ಸಹ-ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಹಳ್ಳಿಯೊಂದರಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವೆ ನಡೆಯುವ ಯುದ್ಧ, ಪ್ರೀತಿಗಾಗಿ ಕೆಳವರ್ಗದ ಯುವಕ ಸಿಡಿದೇಳುವ ಪರಿಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದ್ದು, ಆರ್.ಜಿ.ವಿ. ಸಹವರ್ತಿಯಾಗಿ ದೀರ್ಘಕಾಲ ಕೆಲಸ ಮಾಡಿದ್ದ ಯುವ ನಿರ್ದೇಶಕ ಸಿದ್ದಾರ್ಥ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

Tags