ಸುದ್ದಿಗಳು

ತಪ್ಪದೇ ವೀಕ್ಷಿಸಿ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ 2019

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷ ಅನುಬಂಧ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ. ವರ್ಷವಿಡೀ ಕಷ್ಟ ಪಟ್ಟು ತೆರೆಯ ಮೇಲೆ ನಟಿಸುವ ಹಾಗೂ ತೆರೆಯ ಹಿಂದೆ ಪ್ರೋತ್ಸಾಹಿಸುವ ತಂತ್ರಜ್ಞನರಿಗೆ ಸನ್ಮಾನಿಸುವ ಸಲುವಾಗಿ ಕಲರ್ಸ್ ಕನ್ನಡ ಅನುಬಂಧ 2019 ಕಾರ್ಯಕ್ರಮ ನಡೆದಿತ್ತು. ಇದೀಗ ಈ ಕಾರ್ಯಕ್ರಮದ ಪ್ರಸಾರಕ್ಕೆ ದಿನಾಂಕ ನಿಗದಿಯಾಗಿದೆ.

Image may contain: 1 person, smiling, textಹೌದು, ಸುಮಾರು ಆರು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಆಗಸ್ಟ್ 31ರಂದು ಜಿಕೆವಿಕೆ ಕ್ಯಾಂಪಸ್ ಹೆಬ್ಬಾಳದಲ್ಲಿ ಅನುಬಂಧ 2019 ಅದ್ದೂರಿಯಾಗಿ ನಡೆದಿತ್ತು. ಇದೀಗ ಭಾವನೆಗಳ ಭಾವಾಲೋಕ, ಅನುಬಂಧ ಅವಾರ್ಡ್ಸ್ ಇದೇ ಸೆಪ್ಟೆಂಬರ್ 28 – 29ರಂದು ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ ತಪ್ಪದೇ ಈ ಕಾರ್ಯಕ್ರಮವನ್ನು ವೀಕ್ಷಿಸಿ. ನಿಮ್ಮ ನೆಚ್ಚಿನ ಯಾವ ಯಾವ ಕಲಾವಿದರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು ಎಂಬುದನ್ನು ನೋಡಿ ಕಣ್ತುಂಬಿಕೊಳ್ಳಿ.

ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಹಳಷ್ಟು ಧಾರಾವಾಹಿಗಳು, ರಿಯಾಲಿಟಿ ಶೋಗಳು ಬರುತ್ತಿದ್ದು, ಪ್ರೇಕ್ಷಕರಿಗೆ ಇಷ್ಟವಾಗಿಸುವ ರೀತಿಯಲ್ಲಿ ಕಲರ್ಸ್ ಕನ್ನಡ ವಾಹಿನಿ ಶ್ರಮಪಡುತ್ತಿದೆ. ಶೀಘ್ರದಲ್ಲಿ ಅಭಿನಯ ಚಕ್ರವರ್ತಿ ಸಾರಥ್ಯದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 7 ನಿಮ್ಮ ಮುಂದೆ ಬರಲಿದೆ.

‘ಯಾರೇ ನೀ ಮೋಹಿನಿ’ ಸೀರಿಯಲ್ ನಿಂದ ಹೊರಬಂದ ಮುತ್ತು ಮಾವ!

Tags