ಸುದ್ದಿಗಳು

ಡಬ್ಬಿಂಗ್ ಪೂರ್ಣಗೊಳಿಸಿದ ಖುಷಿಯಲ್ಲಿ ಹರಿಪ್ರಿಯಾ

ಡಬ್ಬಿಂಗ್ ಹಂತದಲ್ಲಿ ‘ಡಾಟರ್ ಆಫ್ ಪಾರ್ವತಮ್ಮ’

ಬೆಂಗಳೂರು, ಸೆ.23: ನಟಿ ಹರಿಪ್ರಿಯಾ ಅಭಿನಯದ 25 ನೇ ಚಿತ್ರ ‘ಡಾಟರ್ ಆಫ್ ಪಾರ್ವತಮ್ಮ’. ಈ ಚಿತ್ರದಲ್ಲಿ ಅವರು ತನಿಖಾಧಿಕಾರಿ ವೈದೇಹಿ ಪಾತ್ರ ಮಾಡುತ್ತಿದ್ದಾರೆ. ಅವರಿಗೆ ತಾಯಿಯಾಗಿ ಸುಮಲತಾ ಅಂಬರೀಶ್ ಅಭಿನಯಿಸಿದ್ದಾರೆ.

ತಾಯಿ-ಮಗಳ ಭಾಂದವ್ಯದ ಚಿತ್ರ

ಚಿತ್ರದಲ್ಲಿ ತಾಯಿ-ಮಗಳ ಬಾಂಧವ್ಯ ಸೇರಿದಂತೆ ಪ್ರೀತಿ- ಪ್ರೇಮಕ್ಕೂ ಒತ್ತುಕೊಡಲಾಗಿದೆ. ಚಿತ್ರದಲ್ಲಿ ನಾಯಕಿ ವೈದೇಹಿ ಕೇಸ್ವೊಂದರ ಬೆನ್ನತ್ತಿ ಹೋಗುತ್ತಾರೆ. ನಂತರ ಅದನ್ನು ಹೇಗೆ ಬಗೆಹರಿಸುತ್ತಾರೆಂಬುದು ಎಂಬ ಅಂಶದೊಂದಿಗೆ ಬಹುತೇಕ ಸಿನಿಮಾ ಸಾಗುತ್ತದೆ. ಅಂದಹಾಗೆ ಈ ಚಿತ್ರವನ್ನು ಶಂಕರ್ ಎನ್ನುವವರು ನಿರ್ದೇಶಿಸುತ್ತಿದ್ದಾರೆ.

ಚಿತ್ರೀಕರಣ ಮುಕ್ತಾಯ

ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ನಟಿ ಹರಿಪ್ರಿಯಾ ಡಬ್ಬಿಂಗ್ ಸಹ ಮುಗಿಸಿ, ಸಂತಸಗೊಂಡಿದ್ದಾರೆ. ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ, ಅರುಳ್ ಅವರ ಛಾಯಾಗ್ರಹಣವಿದೆ. ಈ ಚಿತ್ರವನ್ನು ಶಶಿಧರ್, ವಿಜಯಲಕ್ಷ್ಮೀ ಕೃಷ್ಣೇಗೌಡ, ಸಂದೀಪ್, ಶ್ವೇತಾ ಸೇರಿ ನಿರ್ಮಿಸುತ್ತಿದ್ದಾರೆ.

ಹರಿಪ್ರಿಯಾ ಚಿತ್ರ

ಈ ಚಿತ್ರವು ಹರಿಪ್ರಿಯಾರ ವೃತ್ತಿ ಬದುಕಿನ 25 ನೇ ಚಿತ್ರವಾಗಿರುವುದು ವಿಶೇಷವಾಗಿದೆ. ಈ ಚಿತ್ರದೊಂದಿಗೆ ಅವರು ‘ಕುರುಕ್ಷೇತ್ರ’,’ಸೂಜಿದಾರ’,’ಬೆಲ್ ಬಾಟಮ್’, ‘ಕನ್ನಡ್ ಗೊತ್ತಿಲ್ಲ’ ಚಿತ್ರಗಳಲ್ಲೂ ನಿರತರಾಗಿದ್ದಾರೆ. ಈ ಎಲ್ಲಾ ಚಿತ್ರಗಳ ನಂತರ ಅವರು ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಲಿದ್ದಾರೆ.

Tags