ಸುದ್ದಿಗಳು

ಅಭಿಮಾನಿ ದೇವರ ಬಗ್ಗೆ ಅಪ್ಪುವಿನ ಅಭಿಮಾನದ ಮಾತು

ದೊಡ್ಮನೆ ಮನೆಯ ಕಲಾವಿದರೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ವರನಟ ಡಾ. ರಾಜ್ ಕುಮಾರ್ ಎಂದರೆ ಚಿಕ್ಕವರಿಂದ ಹಿಡಿದು ವಯಸ್ಸಾದವರಿಗೂ ಬಹಳ ಇಷ್ಟ. ಏಕೆಂದರೆ ಇವರು ನಟಿಸಿರುವ ಸಿನಿಮಾಗಳು ಬರೀ ಮನರಂಜನೆಗೆ ಮೀಸಲಾಗದೆ ಸಂದೇಶಗಳನ್ನು ಒಳಗೊಂಡಿರುತ್ತಿದ್ದವು.

ಇಂದು ಡಾ. ರಾಜ್ ಕುಮಾರ್ ದೈಹಿಕವಾಗಿ ಅಗಲಿದ್ದರೂ ಸಹ ಮಾನಸಿಕವಾಗಿ ಜೊತೆಯಾಗಿದ್ದಾರೆ. ಇವರ ಅಭಿಮಾನಿಯೊಬ್ಬ ಇವರು ನಟಿಸಿರುವ ಎಲ್ಲಾ 206 ಸಿನಿಮಾಗಳು ಮತ್ತು ಅವರಿಗೆ ಒಲಿದಿರುವ ಬಿರುದುಗಳನ್ನು ಒಂದೇ ಉಸಿರಿನಲ್ಲಿ ಹೇಳುತ್ತಾರೆ.

ಈ ಅಭಿಮಾನಿಯ ಅಭಿಮಾನದ ವಿಡಿಯೋವನ್ನು ಪುನೀತ್ ರಾಜ್ ಕುಮಾರ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು, ಅಭಿಮಾನಿ ದೇವರ ಬಗ್ಗೆ ಅಭಿಮಾನದಿಂದ ಗೌರವ ನಮನ ಸಲ್ಲಿಸಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿತಾ ಚಂದ್ರಶೇಖರ್-ಕಿರಣ್ ಶ್ರೀನಿವಾಸ್

#DrRajkumar #DrRajkumarMovies #DrRajkumarFans #KannadaSuddigalu

Tags