ಸುದ್ದಿಗಳು

ರಾಜಣ್ಣನ ಹುಟ್ಟುಹಬ್ಬ ನಮ್ಮ ಮನೆಯಲ್ಲಿ ಭಾವನ್ಮಾತಕವಾಗಿ ಬೆಸೆದಿದೆ ಎಂದ ನವರಸ ನಾಯಕ..!!! ಕಾರಣವೇನು ಗೊತ್ತೆ…?

ಬೆಂಗಳೂರು, ಏ.24:

ಚಂದನವನದ ನವರಸ ನಾಯಕ ಜಗ್ಗೇಶ್. ತಮ್ಮ ವಿಭಿನ್ನವಾದ ನಟನೆಯ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇಷ್ಟೇ ಅಲ್ಲದೇ ಜಗ್ಗೇಶ್ ಡಾ. ರಾಜ್ ಕುಮಾರ್ ರವರ ಅಪ್ಪಟ ಅಭಿಮಾನಿ.

ಹೌದು, ರಾಜ್ ಕುಮಾರ್ ಎಂದರೇ ಜಗ್ಗೇಶ್ ಗೆ ಎಲ್ಲಿಲ್ಲದ ಪ್ರೀತಿ. ಅಷ್ಟರ ಮಟ್ಟಿಗೆ ರಾಜಣ್ಣನ ನಟನೆ, ವ್ಯಕ್ತಿತ್ವ,ಸೌಮ್ಯ ಸ್ವಭಾವ, ಗುಣಗಳ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದಾರೆ. ಅದರ ಸಲುವಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಜಗ್ಗೇಶ್ ರಾಜಣ್ಣನ ಬಗ್ಗೆ ಗುಣಗಾನಗಳನ್ನು ಮಾಡುತ್ತಿರುತ್ತಾರೆ. ಅದರಂತೆ ಇಂದು ರಾಜಣ್ಣನ ದಿನವಾದ ಕಾರಣ ಜಗ್ಗೇಶ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ದಿನದ ವಿಶೇಷವನ್ನು ಹಂಚಿಕೊಂಡಿದ್ದಾರೆ.

ಹೌದು, ಜಗ್ಗೇಶ್ ರವರ ಹಿರಿಯ ಪುತ್ರ ಗುರುರಾಜ್. ಇವರು ‘ಗಿಲ್ಲಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಂದು ಜಗ್ಗೇಶ್ ರವರಿಗೆ ಎಲ್ಲಿಲ್ಲದ ಖುಷಿ. ಕಾರಣವೇನೆಂದರೆ ಜಗ್ಗೇಶ್ ರವರು ರಾಜಣ್ಣನ ಮೇಲಿರುವ ಅಭಿಮಾನದಿಂದಾಗಿ ತಮ್ಮ ಮಗನಿಗೂ ಕೂಡ ಅವರ ಹುಟ್ಟುಹಬ್ಬದ ದಿನದಂದೇ ವಿವಾಹ ಮಾಡಿಸಿದ್ದರು. ಇಂದು ಗುರುರಾಜ್ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆಯಲ್ಲಿದ್ದಾರೆ.

ಈ ದಿನದ ಸವಿ ಖುಷಿಯಲ್ಲಿ ಜಗ್ಗೇಶ್ ರಾಜಣ್ಣನ ನೆನಪು ಸದಾ ನನ್ನ ಮಾನಸದಲ್ಲಿ ಉಳಿಸಿಕೊಳ್ಳಲು ನನ್ನ ಹಿರಿಯ ಮಗ ಗುರುರಾಜ್ ಗೆ 24-04-2019 ರಾಜಣ್ಣನ ಹುಟ್ಟುಹಬ್ಬದ ದಿನ ಮದುವೆ ಮಾಡಿಸಿದ್ದೆ..! ಹಾಗಾಗಿ ರಾಜಣ್ಣನ ಹುಟ್ಟಹಬ್ಬ ನಮ್ಮ ಮನೆಯಲ್ಲಿಯು ಭಾವನಾತ್ಮಕವಾಗಿ ಬೆಸೆದಿದೆ. ಎಂದಿರುವುದು ವರದಿಗಳಾಗಿವೆ.

ತಮಿಳಿನ ‘ಮಫ್ತಿ’ ರಿಮೇಕ್ ನಲ್ಲಿ ಸಿಂಬು!!

#balkaninews #sandalwood #jaggesh #jaggeshmovies #jaggeshhits #jaggeshimages #drrajkumarbirthday

Tags