ಸುದ್ದಿಗಳು

ಶಿರಾದಲ್ಲಿ ಉದ್ಟಾಟನೆಯಾದ ಡಾ. ರಾಜ್ ಕುಮಾರ್ ವೃತ್ತ

ಜೊತೆಗೆ ಖಾಸಗಿ ಬಸ್ ನಿಲ್ದಾಣಕ್ಕೆ ಡಾ. ರಾಜ್ ಕುಮಾರ್ ಬಸ್ ನಿಲ್ದಾಣವೆಂಬ ಹೆಸರು

ಶಿರಾ, ಡಿ.9: ಕನ್ನಡಿಗರ ಆರಾಧ್ಯದೈವ ನಟರೆಂದರೆ ಡಾ. ರಾಜ್ ಕುಮಾರ್. ಒಟ್ಟು 206 ಚಿತ್ರಗಳಲ್ಲಿ ನಟಿಸಿ ಎಲ್ಲರ ಮನಸ್ಸನ್ನು ಗೆದ್ದ ನಟರೆಂದರೆ ಇವರೊಬ್ಬರೇ. ಅವರನ್ನು ಪ್ರೀತಿಸಿದ, ಪೂಜಿಸದ, ಆರಾಧಿಸದೇ ಇರುವವರು ಯಾರೂ ಇಲ್ಲ. ಅಭಿಮಾನಿಗಳೇ ದೇವರು ಎನ್ನುವ ಇವರನ್ನು ಅಭಿಮಾನಿಗಳು ಸಹ ಪ್ರೀತಿಯಿಂದ ‘ಅಣ್ಣಾವ್ರು’ ಎಂದು ಕರೆಯುತ್ತಾರೆ.

ಡಾ. ರಾಜ್ ಕುಮಾರ್ ವೃತ್ತ

ಈಗಾಗಲೇ ರಾಜ್ಯದ ಅನೇಕ ಕಡೆಗಳಲ್ಲಿ ಅಂದರೆ ಬಸ್ ಸ್ಟಾಪ್ ಗಳಲ್ಲೋ, ಮುಖ್ಯ ಬೀದಿಗಳಲ್ಲೋ ಕನ್ನಡದ ಕಲಾವಿದರ ಮೂರ್ತಿಗಳನ್ನು ಅಥವಾ ಅವರ ಹೆಸರಿನ ಬೋರ್ಡ್ ಗಳನ್ನು ನೋಡಿರುತ್ತೀರಿ. ಅನೇಕ ರಸ್ತೆಗಳಿಗೂ ಕಲಾವಿದರ ಹೆಸರನ್ನು ನಾಮಕರಣ ಮಾಡಲಾಗಿರುತ್ತದೆ.

ಇದೀಗ ನಟ ಡಾ. ರಾಜ್ ಕುಮಾರ್ ಅವರ ಹೆಸರನ್ನು, ಶಿರಾದಲ್ಲಿ ಅವರ ಅಭಿಮಾನಿಗಳು ನೂತನವಾಗಿ ಡಾ|| ರಾಜ್ ಕುಮಾರ್ ವೃತ್ತ ಉದ್ಗಾಟನೆ ಮಾಡಲಾಗಿದ್ದಾರೆ. ಇದರೊಂದಿಗೆ ಖಾಸಗಿ ಬಸ್ ನಿಲ್ದಾಣಕ್ಕೆ ಅಣ್ಣಾವ್ರು ಡಾ|| ರಾಜ್ ಕುಮಾರ್ ಬಸ್ ನಿಲ್ದಾಣವೆಂದು ನಾಮಕರಣ ಮಾಡಿದ್ದಾರೆ.

 

ಡಾ. ರಾಜ್ ಕುಮಾರ್ ರಸ್ತೆ

ಇನ್ನು ಮತ್ತೊಂದು ವಿಶೇಷವೆಂದರೆ ಡಾ. ರಾಜ್ ಕುಮಾರ್ ಅವರ ಹೆಸರನ್ನು ರಸ್ತೆಗೆ ಮತ್ತು ಬೀದಿಗೆ ಇಡುವ ಅಭಿಮಾನಿಗಳ ಪ್ರೀತಿಯ ಬಗ್ಗೆ ಸಿನಿಮಾವೊಂದು ಚಂದನವನದಲ್ಲಿ ಬರಲು ತಯಾರಿ ನಡೆಸಿದೆ. ಹೌದು, ವಿನಾಯಕರಾಮ್ ಕಲಗಾರು ‘ಡಾ. ರಾಜ್ ಕುಮಾರ್ ರಸ್ತೆ’ ಎಂಬ ಹೆಸರಿನಡಿ ಸಿನಿಮಾವೊಂದನ್ನು ಮಾಡಲು ತಯಾರಿ ನಡೆಸಿದ್ದು, ತಮಿಳಿನ ‘ಲಿಂಗ’, ‘ಕೋಟಿಗೊಬ್ಬ 2-3’ ಚಿತ್ರಗಳಿಗೆ ಲೈಮ್ ಪ್ರೊಡ್ಯೂಸರ್ ಆಗಿದ್ದ ಬಸು ನಾಡಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Tags