ಸುದ್ದಿಗಳು

ಲಂಡನ್ ನಲ್ಲಿ ಕ್ರಿಕೆಟಿಗ ಅನಿಲ್ ಕುಂಬ್ಳೆಯವರನ್ನು ಭೇಟಿ ಮಾಡಿದ ಶಿವಣ್ಣ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಭುಜದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಸಲುವಾಗಿ ಲಂಡನ್ ಗೆ ತೆರಳಿದ್ದರು. ಅದರಂತೆ ಭುಜದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿತ್ತು. ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿರುವ ಶಿವಣ್ಣ ಇದೀಗ ಭಾರತ ಕ್ರಿಕೆಟ್ ತಂಡ ಶ್ರೇಷ್ಠ ಆಟಗಾರ ಅನಿಲ್ ಕುಂಬ್ಳೆಯವರನ್ನು ಭೇಟಿ ಮಾಡಿದ್ದಾರೆ.

ಹೌದು, ಶಿವಣ್ಣ ಲಂಡನ್ ನಲ್ಲಿ ವಾಸ್ತವ್ಯ ಹೂಡಿದ್ದು, ಅನಿಲ್ ಕುಂಬ್ಳೆಯವನ್ನು ಭೇಟಿ ಮಾಡಿ ತಮ್ಮ ಸಂತಸದ ಕ್ಷಣವನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟ್ ಅಂದ್ರೆ ನನಗೆ ಇಷ್ಟ, ಅದರಲ್ಲೂ ನಮ್ಮ ಕನ್ನಡದ ಕ್ರಿಕೆಟ್ ಆಟಗಾರರು ಅಂದ್ರೆ ನನಗೆ ಪ್ರೀತಿ ಜಾಸ್ತಿ. ನನ್ನ ಹುಟ್ಟುಹಬ್ಬಕ್ಕೆ ಸರ್ ಪ್ರೈಸ್ ಆಗಿ  ಸಿಕ್ಕ ನನ್ನ ನೆಚ್ಚಿನ ಆಟಗಾರ, ನನ್ನ ಒಳ್ಳೆಯ ಸ್ನೇಹಿತ ಅನಿಲ್ ಕುಂಬ್ಳೆಯವನ್ನು ಭೇಟಿ ಮಾಡಿರುವುದು ನನಗೆ ತುಂಬಾ ಖುಷಿಕೊಟ್ಟಿದೆ ಎಂದಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹಾಡುಗಳ ಮೂಲಕ ಗಮನ ಸೆಳೆಯುತ್ತಿರುವ ‘ಮಳೆ ಬಿಲ್ಲು’

#drshivarajkumar #anilkumble #shivarajkumarandanilkumble #balkaninews #london

Tags