ಸುದ್ದಿಗಳು

ಶಿವಣ್ಣ ನಟರಾಗದಿದ್ದರೇ, ಬೇರೆ ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು ಗೊತ್ತೆ….?

ಇಂದು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ರವರ 57ನೇ ವರ್ಷದ ಹುಟ್ಟುಹಬ್ಬ. ಬಹಳಷ್ಟು ವೈಶಿಷ್ಟ್ಯ ಕಥೆಗಳ ಮೂಲಕ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ  ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ತಮ್ಮ ಮನೋಜ್ಞ ಅಭಿನಯದ ಮೂಲಕ ಜನರ ಮನಸೂರೆಗೊಂಡಿರುವ ಶಿವಣ್ಣ ಇಂದು ಕರುನಾಡ ಚಕ್ರವರ್ತಿಯಾಗಿ ಮೆರೆಯುತ್ತಿದ್ದಾರೆ. ಇಂತಹ ಚೆಂದದ ನಟರಾಗಿರುವ ಶಿವಣ್ಣನವರು ಕಲಾವಿದರಾಗಿರದಿದ್ದರೇ ಬೇರೆ ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು ಎಂಬುದು ಹಲವರ ಪ್ರಶ್ನೆಯಾಗಿರುತ್ತದೆ. ಅದಕ್ಕೆ ಸ್ವತಃ ಶಿವಣ್ಣ ಕೆಲವೊಂದು ಸಂದರ್ಶನಗಳಲ್ಲಿ ಉತ್ತರವನ್ನು ಸಹ ನೀಡಿದ್ದರು.

ಹೌದು, ಶಿವಣ್ಣರವರಿಗೆ ಚಿತ್ರರಂಗಕ್ಕೆ ಬರದೇ ಇರದಿದ್ದರೇ, ನಾನು ಕ್ರಿಕೆಟರ್ ಆಗುತ್ತಿದೆ ಎಂದಿದ್ದರು. ಶಿವಣ್ಣನವರಿಗೆ ಕ್ರೀಡೆಯಲ್ಲಿ ಬಹಳ ಇಷ್ಟವಿತ್ತು. ಹಾಗೂ ವಾಲಿಬಾಲ್ ನಲ್ಲಿಯು ಕೂಡ ಹೆಚ್ಚಾಗಿ ಕ್ರೇಜ್ ನನ್ನು ಹೊಂದಿದ್ದರು ಎನ್ನಬಹುದು.

ಶಿವಣ್ಣ ರಾಜ್ ಕಪ್ ಹಾಗೂ ಕರ್ನಾಟಕ ಚಲನ ಚಿತ್ರ ಕಪ್ ಹೀಗೆ ಬಹಳಷ್ಟು ಭಾರೀ ಕ್ರಿಕೆಟ್ ಆಡಿದ್ದರು. ಬಿಡುವಿದ್ದಾಗಲೂ ಕೂಡ ಕುಟುಂಬದವರೊಡನೆ ಕ್ರಿಕೆಟ್ ಆಡುತ್ತಿರುತ್ತಾರೆ. ಅಷ್ಟರ ಮಟ್ಟಿಗೆ ಕ್ರಿಕೆಟ್ ಎಂಬುದು ಶಿವಣ್ಣನಿಗೆ ಅಚ್ಚು ಮೆಚ್ಚು.

ಇಂತಹ ನಮ್ಮ ಶಿವಣ್ಣ ಸರಳತೆಗೆ ಹೆಸರಾಗಿದ್ದು, ಭುಜದ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡು ಲಂಡನ್ ನಲ್ಲಿ ಸುಧಾರಿಸಿಕೊಳ್ಳುತ್ತಿದ್ದಾರೆ. ಬಹುಬೇಗ ಚೇತರಿಕೆ ಕಂಡು ಬೆಂಗಳೂರಿಗೆ ವಾಪಸ್ಸಾಗಲಿ ಎಂದು ಆಶಿಸೋಣ.

Image result for shivaraj kumar cricket

 

 

ಲಾಂಗ್ ಬಿಟ್ಟು ಲೇಖನಿ ಹಿಡಿದು ಬರುತ್ತಿದ್ದಾರೆ ಕರುನಾಡ ಚಕ್ರವರ್ತಿ ಶಿವಣ್ಣ

#balkaninews #shivarajkumar #shivarajkumartwitter #shivarajkumarinstagram #shivarajkumarfacebook #shivarajkumarcricket

Tags