ಸುದ್ದಿಗಳು

ಡ್ರಾಮಾ ಜ್ಯೂನಿಯರ್ಸ್ ಗ್ರ್ಯಾಂಡ್ ಫಿನಾಲೆ ಇಂದು…

ಬೆಂಗಳೂರು, ಮಾ.24:

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಗಳ ಪೈಕಿ ಡ್ರಾಮಾ ಜ್ಯೂನಿಯರ್ಸ್ ಕೂಡಾ ಒಂದು. ವಾರಾಂತ್ಯದಲ್ಲಿ ವೀಕ್ಷಕರನ್ನು ರಂಜಿಸುತ್ತಿದ್ದ ಅದ್ಭುತವಾದ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ ನ ಕೊನೆಯ ಹಂತ ತಲುಪಿದ್ದು ಇಂದು ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಇಂದು ಪ್ರಸಾರವಾಗಲಿದೆ.

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದ ಈ  ಕಾರ್ಯಕ್ರಮ ನಿಮ್ಮ ನೆಚ್ಚಿನ ಝೀ ಕನ್ನಡದಲ್ಲಿ ಇಂದು  ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. “ಹಾಸ್ಯ ಚಕ್ರವರ್ತಿ” ಬಿರುದಾಂಕಿತ ನರಸಿಂಹರಾಜು, ನಟಿ ಉಮಾಶ್ರೀ ಅವರ ಹುಟ್ಟೂರು, ಶೈಕ್ಷಣಿಕ ನಗರಿ ತಿಪಟೂರಿನಲ್ಲಿ ಈ ಬಾರಿ ಡ್ರಾಮಾ ಜೂನಿಯರ್ಸ್‌ ಸೀಸನ್‌ 3 ಗ್ರ್ಯಾಂಡ್‌ ಫಿನಾಲೆ ನಡೆಯಿತು. ಈ ಕಾರ್ಯಕ್ರಮಕ್ಕೆ ಅಲ್ಲಿನ ಜನ ಸಾಕ್ಷಿಯಾಗಿದ್ದರು. ಕಿಕ್ಕಿರಿದ ಜನರನ್ನು ನೋಡಿದಾಗ ನಮಗೆ ಡ್ರಾಮಾ ಜೂನಿಯರ್ಸ್‌ ಮೇಲೆ ಎಷ್ಟೊಂದು ಒಲವನ್ನು ತಿಪಟೂರು ಜನ ಇಟ್ಟುಕೊಂಡಿದ್ದಾರೆ ಎಂಬುದು ಗೊತ್ತಾಯಿತು ‘ಎನ್ನುತ್ತಾರೆ ಜೀ ಕನ್ನಡದ ಮುಖ್ಯಸ್ಥ ರಾಘವೇಂದ್ರ ಹುಣಸೂರು.

‘ಫಿನಾಲೆಗೆಂದು ನೂರಾರು ತಂತ್ರಜ್ಞರು ಬಹು ದೊಡ್ಡ ವೇದಿಕೆಯಲ್ಲಿ ಕೆಲಸ ಮಾಡಿದ್ದಾರೆ. ಗ್ರೂಪ್‌ ಆ್ಯಕ್ಟ್, ಜುಗಲ್‌ ಬಂಧಿ, ಸೋಲೋ ರೌಡ್‌ ಹೀಗೆ ಮೂರು ಹಂತದಲ್ಲಿ ಫಿನಾಲೆಯ ಸ್ಫರ್ಧೆ ನಡೆಯಿತು. ಸಿನಿಮಾ ವರ್ಸ್ಸ್‌ ಸೀರಿಯಲ್‌, ದಕ್ಷಯಜ್ಞ, ಕಾಳಿದಾಸ ಭೋಜರಾಜ, ನಕ್ಷತ್ರಿಕ, ಕಿಸಾ ಗೋತಮಿ, ಒಡಲಾಳ ಸಾಕವ್ವ ಹೀಗೆ ಹತ್ತು ಹಲವು ನಾಟಕಗಳಮೂಲಕ ತಿಪಟೂರಿನ ಜನರನ್ನು ನಮ್ಮ ಜೂನಿಯರ್‌ ಗಳು ರಂಜಿಸಿದರು.

ಡ್ರಾಮಾ ಜ್ಯೂನಿಯರ್ಸ್ ಸೀಸನ್ 3 ರ ವಿನ್ನರ್‌ ಯಾರು ಎಂಬುದನ್ನು ಕಾನ್ಫಿಡೆಂಟ್‌ ಗ್ರೂಪ್‌ ಸಂಸ್ಥೆಯ ಮುಖ್ಯಸ್ಥರಾದ ಡಾ. ಸಿ ಜೆ. ರಾಯ್‌ ಅನೌನ್ಸ್‌ ಮಾಡಿದರು ‘ಎಂದು ರಾಘವೇಂದ್ರ ಹುಣಸೂರು ಹೇಳಿದರು.

ಚಂದನವನದ ಚಿತ್ರನಿರ್ಮಾಪಕ ಪುರುಷೋತ್ತಮ್ ಇನ್ನಿಲ್ಲ!!

#balkaninews #dramajuniors #dramajuniorsseason3kannada #sandalwood #realityshow

Tags