ಸುದ್ದಿಗಳು

ರಂಜಿಸಲು ಮತ್ತೆ ಬರುತ್ತಿದೆ ‘ಡ್ರಾಮಾ ಜೂನಿಯರ್ಸ್’

ಕಿರುತೆರೆಯಲ್ಲಿ ಜನಪ್ರಿಯವಾಗಿರುವ ರಿಯಾಲಿಟಿ ಶೋ ‘ಡ್ರಾಮಾ ಜೂನಿಯರ್ಸ್’

ಬೆಂಗಳೂರು, ಅ.20: ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಅನೇಕ ರಿಯಾಲಿಟಿ ಕಾರ್ಯಕ್ರಮಗಳು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಅವುಗಳಲ್ಲಿ ಜೀ ಕನ್ನಡ ವಾಹಿನಿ ‘ಡ್ರಾಮಾ ಜೂನಿಯರ್ಸ್’ ಕೂಡಾ ಒಂದು.

ಡ್ರಾಮಾ ಜೂನಿಯರ್ಸ್ ಸರಣಿ 3

ಈಗಾಗಲೇ ಮೊದಲ ಮತ್ತು ಎರಡನೆಯ ಸರಣಿಯಲ್ಲಿ ಮನರಂಜಿಸಿದ್ದ ಈ ಶೋ ಮತ್ತೆ ಶುರುವಾಗಲಿದೆ. ಈಗಾಗಲೇ ಸರಣಿ 3 ರ ತಯಾರಿ ನಡೆಯುತ್ತಿದ್ದು, ಇಂದಿನಿಂದ (ಅ. 20) ಪ್ರಸಾರ ಆರಂಭವಾಗಲಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಆಡಿಷನ್ ಮಾಡಿ, ಅದರಲ್ಲಿ ನಟನಾ ಕೌಶಲ್ಯವುಳ್ಳ 30 ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅವರೆಲ್ಲರೂ ಮೆಘಾ ಆಡಿಷನ್​ ಗೆ ಪ್ರವೇಶ ನೀಡಲು ಸಜ್ಜಾಗಿದ್ದಾರೆ.

ಎಂದಿನಂತೆ ರೂಪಗೊಳ್ಳಲಿರುವ ಕಾರ್ಯಕ್ರಮ

ಎಂದಿನಂತೆ ಈ ಕಾರ್ಯಕ್ರಮದ ತೀರ್ಪುಗಾರರಾಗಿ ಹಿರಿಯ ನಟಿ ‘ಜೂಲಿ’ ಲಕ್ಷ್ಮಿ, ಮುಖ್ಯಮಂತ್ರಿ ಚಂದ್ರು ಹಾಗೂ ವಿಜಯ ರಾಘವೇಂದ್ರ ಕೆಲಸ ನಿರ್ವಹಿಸಲಿದ್ದಾರೆ. ಇನ್ನುಳಿದಂತೆ ಮಾ. ಆನಂದ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪುಟಾಣಿಗಳ ಈ ಶೋ ಪ್ರಸಾರವಾಗಲಿದೆ.

ಕಾರ್ಯಕ್ರಮದ ಬಗ್ಗೆ

ಇದೊಂದು ಜನಪ್ರಿಯ ಕಾರ್ಯಕ್ರಮವಾಗಿದ್ದು, ನಗು, ಅಳು, ಕೋಪ, ಪ್ರೇಮ, ಪ್ರೀತಿ, ತರಲೆ, ಹೀಗೆ ಎಲ್ಲವೂ ಈ ಕಾರ್ಯಕ್ರಮದಲ್ಲಿ ಇರಲಿದೆ. ಈ ಹಿಂದಿನ ಶೋಗಳಲ್ಲಿ ಭಾಗವಹಿಸಿದ್ದ ಕೆಲವು ಮಕ್ಕಳು ಸಿನಿಮಾಗಳಲ್ಲಿ ನಟಿಸಲು ಅವಕಾಶಗಳನ್ನು ಪಡೆದಿದ್ದಾರೆ.

 

Tags

Related Articles