ಸುದ್ದಿಗಳು

ಶಿಕ್ಷಣದ ಅವ್ಯವಸ್ಥೆಯ ವಿರುದ್ದ ಬಾಣ ಬಿಡಲಿರುವ ‘ದ್ರೋಣ’

‘ರುಸ್ತುಂ’ ಚಿತ್ರದ ಬಳಿಕ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ‘ದ್ರೋಣ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಮೋಡಿ ಮಾಡುತ್ತಿದೆ. ಹೆಸರಿಗೆ ತಕ್ಕಂತೆ ಚಿತ್ರದ ನಾಯಕ ದ್ರೋಣ ಓರ್ವ ಸಾಮಾಜಿಕ ಕಳಕಳಿಯ ಶಿಕ್ಷಕನಾಗಿದ್ದು, ಅವನು ಶೈಕ್ಷಣಿಕ ಅವ್ಯವಸ್ಥೆಯನ್ನು ವಿರೋಧಿಸಿ ಅದರ ವಿರುದ್ದ ಬಾಣ ಬಿಡುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.

ಇವತ್ತಿನ ಸ್ಥಿತಿಯಲ್ಲಿ ಶಿಕ್ಷಣ ಮೂಲಭೂತ ಅವಶ್ಯಕತೆಯಾಗಿ ಉಳಿದಿಲ್ಲ. ಅದು ಒಂದೆಡೆ ಮಾರುಕಟ್ಟೆಯ ಸರಕಾದರೆ ಮತ್ತೊಂದೆಡೆ ಪ್ರತಿಷ್ಠೆಯ ರೂಪ ಪಡೆದುಕೊಂಡಿದೆ. ಸರಕಾರಿ ಶಾಲೆಯಲ್ಲಿ ಓದುವವರು ನಿರ್ಗತಿಕರೆಂಬಂಥಾ ಅನಿಷ್ಠ ಮನೋಭಾವ ಬಡ ಪೋಷಕರನ್ನೂ ಆವರಿಸಿಕೊಂಡಿದೆ.ಸರಕಾರಿ ಶಾಲೆಗಳಿಗೆ ಬೀಗ ಜಡಿದುಕೊಳ್ಳುತ್ತಿರುವುದರ ಹಿಂದೆ ಇರುವುದು ಇಂಥಾದ್ದೇ ಮನಸ್ಥಿತಿ.


ಹೀಗೆ ಮುಚ್ಚುತ್ತಿರುವ ಸರಕಾರಿ ಶಾಲೆಗಳ ಪ್ರಸ್ತುತ ದುರಂತವನ್ನೂ ಒಳಗೊಂಡಂತೆ ಒಟ್ಟಾರೆ ಶಿಕ್ಷಣ ವ್ಯವವಸ್ಥೆಯ ಸುತ್ತ ಈ ಚಿತ್ರದ ಕಥೆ ರಚನೆಗೊಂಡಿದೆ. ಚಿತ್ರದಲ್ಲಿ ಶಿವಣ್ಣನೊಂದಿಗೆ ಇನಿಯಾ, ಸ್ವಾತಿ ಶರ್ಮ, ರಂಗಾಯಣ ರಘು, ಬಾಬು ಹಿರಣ್ಣಯ್ಯ, ಶಂಕರ್ ರಾವ್, ರೇಖಾದಾಸ್, ರಾಮಸ್ವಾಮಿಗೌಡ, ಶ್ರೀನಿವಾಸ ಗೌಡ, ಆನಂದ್, ನಾರಾಯಣ ಸ್ವಾಮಿ, ವಿಜಯ್, ಜಯಶ್ರೀ ಕೃಷ್ಣನ್, ಮಾ. ಮಹೇಂದ್ರ ಹಾಗೂ ರವಿಕಿಶನ್ ಸೇರಿದಂತೆ ಅನೇಕರು ನಟಿಸಿದ್ದಾರೆ.

ಮೋಡಿ ಮಾಡುವ ಹೊಸಬರ ‘ಸ್ವೆಚ್ಛಾ’ ಚಿತ್ರದ ಟ್ರೈಲರ್…!!!

#dronamovie  #dronamovieteaser #shivarajkumar #kannadafilm, #kannadamovie, #kannadanews

Tags