ಸುದ್ದಿಗಳು

ಡ್ರಗ್ಸ್ ಸುಳಿಯಲ್ಲಿ ತೆಲುಗಿನ ಸಿನಿ ಪ್ರಮುಖರು!

ಕೆಲದಿನಗಳ ಹಿಂದೆ ತೆಲುಗು ರಾಷ್ಟ್ರದಲ್ಲಿ ಡ್ರಗ್ಸ್ ದಂಧೆಯಲ್ಲಿ ಕೆಲ ಸಿನಿ ಪ್ರಮುಖರು ಶಾಮೀಲು ಆಗಿದ್ದಾರೆಂದು ಅವರ ಮೇಲೆ ಛಾರ್ಜ್ ಶೀಟ್ ದಾಖಲಿಸಲಾಗಿರುವ ಸುದ್ದಿ ದಕ್ಷಿಣ ಭಾರತದ ಸಿನಿ ಲೋಕವನ್ನು ದಿಗ್ಬ್ರಮೆಗೊಳಪಡಿಸಿತ್ತು. ಟಾಲಿವುಡ್ ಗೆ ಸೇರಿದ ಸಿನಿ ಪ್ರಮುಖರಾದ ಸೆನ್ಸೇಷನಲ್ ಡೈರೆಕ್ಟರ್ ಪೂರಿ ಜಗನ್ನಾಥ್ , ರವಿತೇಜ, ನವದೀಪ್, ನಂದು, ಚಾರ್ಮಿ, ಮುಮೈತ್ ಖಾನ್, ಸುಬ್ಬರಾಜು, ಶ್ಯಾಂ ಕೆ ನಾಯ್ಡು ಸೇರಿದಂತೆ ಇನ್ನು ಸಿನಿಮೇತರರು ಈ ಕೇಸಿನಲ್ಲಿ ದಾಖಲಾಗಿದ್ದರು.

ಈ ಕೇಸಿಗೆ ಸಂಭಂದಿಸಿದಂತೆ ಐಪಿಎಸ್ ಅಧಿಕಾರಿ ಸಬರ್ಪಾಲ್  ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ  ಕೋರ್ಟ್ ನ ಆದೇಶದ ಮೇರೆಗೆ ಮೇಲ್ಕಾಣಿಸಿದ ಮೂರು ಸಿನಿ ಪ್ರಮುಖರ ಕೂದಲು,ಉಗುರು ಹಾಗು ರಕ್ತದ ಸ್ಯಾಂಪಲ್ ಅನ್ನು ಫೊರೆನ್ಸಿಕ್  ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪರೀಕ್ಷೆಗೆ ಸಂಭಂದಿಸಿದಂತೆ ಈಗ ರಿಪೋರ್ಟ್ ಹೊರಬಿದ್ದಿದೆ. ಫೊರೆನ್ಸಿಕ್ ರಿಪೋರ್ಟ್ ಪ್ರಕಾರ ಪಾಸಿಟಿವ್ ಆಗಿ ಹೊರಬಿದ್ದಿದೆ. ಹಾಗು ಈ ರಿಪೋರ್ಟ್ ಅನ್ನು ಸಂಭಂದಿಸಿದ ಎಕ್ಸೈಸ್ ಡಿಪಾರ್ಟ್ ಮೆಂಟ್ ನವರು ಈಗಾಗಲೇ ಕೋರ್ಟ್ ಗೆ ಸಲ್ಲಿಸಲಾಗಿದೆಯಂತೆ.

ನಂತರ  ಆರೋಪಕ್ಕೆ ಸಂಭಂದಿಸಿದಂತೆ ಬಹುಶಃ ಸಿನಿ ಪ್ರಮುಖರಿಗೆ ಶಿಕ್ಷೆಯಾಗುವ ಸಾದ್ಯತೆ ಇದ್ದು ಈ ಕೇಸಿನ ಹಿನ್ನೆಲೆಯಲ್ಲಿ ಡ್ರಗ್ಸ್ ದಂಧೆಯಲ್ಲಿ ಶಾಮೀಲಾದವರನ್ನು ಬೇಟೆಯಾಡಲು  ಪೊಲೀಸ್ ಇಲಾಖೆ ಗುಪ್ತ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ ಎಂದು ತಿಳಿಸಲಾಗಿದೆ.

Tags