ಸುದ್ದಿಗಳು

ಅಲ್ಲು ಅರ್ಜುನ್ ಪಾತ್ರದಲ್ಲಿ ನಟಿಸಲಿದ್ದಾರೆ ಧೃವ ಸರ್ಜಾ…!!!

ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ ಅವರು ಈಗಾಗಲೇ ಸತತ ಮೂರು ಚಿತ್ರಗಳಲ್ಲಿ ನಟಿಸಿ ಹ್ಯಾಟ್ರಿಕ್ ಗೆಲುವನ್ನು ಪಡೆದುಕೊಂಡಿದ್ದಾರೆ. ಅದರಂತೆ ಅವರ ನಾಲ್ಕನೇ ಚಿತ್ರ “ಪೊಗರು” ಚಿತ್ರದ ಚಿತ್ರೀಕರಣವೂ ಭರದಿಂದ ಸಾಗಿರುವಾಗಲೇ, ಅವರ ಐದನೇ ಚಿತ್ರ ಸದ್ದು ಮಾಡುತ್ತಿದೆ.

ಹೌದು, ಧೃವ ಅವರು ತೆಲುಗಿನ ಸರೈನೋಡು ರೀಮೇಕ್ ಗೆ ಎಸ್ ಎಂದಿದ್ದಾರೆ. ಸರೈನೋಡು, ಅಲ್ಲು ಅರ್ಜುನ್ ನಟಿಸಿದ್ದ ಹಿಟ್ ಸಿನಿಮಾ. ಶ್ರೀಕಾಂತ್, ಸಾಯಿಕುಮಾರ್, ರಾಕುಲ್ ಪ್ರೀತ್ ಸಿಂಗ್, ಬ್ರಹ್ಮಾನಂದಂ ಮೊದಲಾದವರು ನಟಿಸಿದ್ದ ಪಕ್ಕಾ ಪೈಸಾ ವಸೂಲ್ ಸಿನಿಮಾ. ಆ ಸಿನಿಮಾವನ್ನು ನಿರ್ಮಾಪಕ ಉದಯ್ ಮೆಹ್ತಾ ಕನ್ನಡಕ್ಕೆ ತರುತ್ತಿದ್ದಾರೆ. ಧ್ರುವ ಸರ್ಜಾ ನಾಯಕತ್ವದಲ್ಲಿ. ಚಿತ್ರದ ಡೈರೆಕ್ಟರ್ ನಂದಕಿಶೋರ್. ಪೊಗರು ನಿರ್ದೇಶಿಸುತ್ತಿರುವ ನಂದಕಿಶೋರ್ ಅವರೇ ಈ ಚಿತ್ರವನ್ನೂ ನಿರ್ದೇಶಿಸಲಿದ್ದಾರೆ.

ಇನ್ನು ಪೊಗರು ಚಿತ್ರವು ನಿಂತೇ ಹೋಗಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹೊತ್ತಿನಲ್ಲೇ ಚಿತ್ರತಂಡವು “ನಮ್ಮ ಪೊಗರು ಚಿತ್ರವು ನಿಂತಿಲ್ಲ. ಆದರೆ ತಡವಾಗುತ್ತಿದೆಯಷ್ಟೇ. ಚಿತ್ರಕ್ಕೆ ಕೆಲವು ತಂತ್ರಜ್ಞರ ಅಗತ್ಯ ಇದೆಯಂತೆ. ಅವರಿಗಾಗಿ ಕಾಯುತ್ತಿದ್ದೇವೆ. ಅಷ್ಟೇ ಹೊರತು ಬೇರ್ಯಾವುದೇ ಸಮಸ್ಯೆ ಇಲ್ಲ.” ಎಂದಿದೆ.

ಮೊದಲಿನಿಂದಲೂ ಧೃವ ಅವರೊಂದಿಗೆ ಕೇಳಿ ಬರುತ್ತಿದ್ದ “ಸರೈನೋಡು” ಚಿತ್ರವನ್ನು ಯ್ಯಾಕೆ ರಿಮೇಕ್ ಮಾಡಬಾರದು ಎಂಬ ಆಲೋಚನೆ ಬಂದಿದ್ದೇ ತಡ, ನಿರ್ಮಾಪಕ ಉದಯ್ ಮೇಹ್ತಾ ಅವರು , ಈ ಚಿತ್ರದ ರಿಮೇಕ್ ರೈಟ್ಸ್ ಪಡೆದು. ಪೊಗರು ಚಿತ್ರದ ಗ್ಯಾಫ್ ನಲ್ಲಿ ಅಂದರೆ ಪೊಗರು ಚಿತ್ರದ ಚಿತ್ರಕಥೆಗೆ ಸಾಕಷ್ಟು ಸಮಯ ಬೇಕಿರುವುದರಿಂದ , ಈ ರಿಮೇಕ್ ಗೆ ಪ್ಲಾನ್ ಮಾಡಿಕೊಂಡಿದ್ದಾರೆಂಬ ಸುದ್ದಿಯಿದೆ. ಜೊತೆಗೆ ಈ ತೆಲುಗು ಚಿತ್ರವು ನಟ ಧೃವ ಅವರಿಗೆ ಹೊಂದಾಣಿಕೆ ಆಗುತ್ತದೆಂಬ ಕಾರಣವೂ ಇದೆಯಂತೆ.

ಒಟ್ಟಿನಲ್ಲಿ ನಿರಂತರ ನಾಲ್ಕು ಸ್ವಮೇಕ್ ಚಿತ್ರಗಳಲ್ಲಿ ನಟಿಸಿದ್ದ ಧೃವ ಅವರು ಇದೀಗ ತಮ್ಮ ಐದನೇ ಚಿತ್ರಕ್ಕೆ ತೆಲುಗಿನ ಚಿತ್ರದ ರಿಮೇಕ್ ನಲ್ಲಿ ನಟಿಸಲು ಮನಸ್ಸು ಮಾಡಿದ್ದಾರೆ.

 

 

@ sunil javali

Tags