ಆರೋಗ್ಯಆಹಾರಸುದ್ದಿಗಳು
Trending

ಕುಡಿದರೆ ಒಣದ್ರಾಕ್ಷಿ ನೆನೆಸಿದ ನೀರು..! ಮನುಷ್ಯನ ದೇಹದ ಲಿವರ್‌‌ನ ಆಯಸ್ಸು ನೂರು..!!

ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುವುದು ಒಣದ್ರಾಕ್ಷಿಯಲ್ಲಿ ..

  

ಒಣದ್ರಾಕ್ಷಿಯನ್ನು ಹಾಗೆ ತಿನ್ನುವುದಕ್ಕಿಂತ ನೀರಿನಲ್ಲಿ ನೆನೆಸಿ ಹಾಕಿಟ್ಟು ತಿಂದರೆ ಅದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭವಿದೆ. ದ್ರಾಕ್ಷಿಯ ಸಿಪ್ಪೆಯಲ್ಲಿ ಇರುವಂತಹ ವಿಟಮಿನ್ ಗಳು ಹಾಗೂ ಖನಿಜಾಂಶಗಳು ನೀರಿನಲ್ಲಿ ಕರಗುವುದು. ಇದರಿಂದಾಗಿ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುವುದು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರಿಗೆ ಇದು ಹೆಚ್ಚು ಸಹಕಾರಿ. ನೀರಿನಲ್ಲಿ ನೆನೆಸಿಟ್ಟ ಕಾರಣ ಅದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಕೂಡ ಲಭ್ಯವಾಗುವುದು.

ರಕ್ತದೊತ್ತಡ ನಿಯಂತ್ರಿಸುವುದು ಅತಿಯಾಗಿ ಉಪ್ಪು ಸೇವನೆ ಮಾಡಿದರೆ ಅದರಿಂದ ರಕ್ತದೊತ್ತಡವು ಹೆಚ್ಚಾಗುವುದು. ಅದಾಗ್ಯೂ ಒಣದ್ರಾಕ್ಷಿಯಲ್ಲಿ ಇರುವಂತಹ ಪೊಟಾಶಿಯಂ ನಮ್ಮ ದೇಹದಲ್ಲಿ ಉಪ್ಪಿನ ಅಂಶವನ್ನು ಸಮತೋಲನದಲ್ಲಿಡುವುದು ಮತ್ತು ರಕ್ತದೊತ್ತಡ ನಿಯಂತ್ರಿಸುವುದು.

  
ಜೀರ್ಣಕ್ರಿಯೆಗೆ ಸಹಕಾರಿ ಇದರಲ್ಲಿ ನಾರಿನಾಂಶವು ಅಧಿಕವಾಗಿದೆ ಮತ್ತು ಇದನ್ನು ನೀರಿನಲ್ಲಿ ನೆನೆಸಿಟ್ಟು ತಿಂದಾಗ ನೈಸರ್ಗಿಕ ವಿರೇಚಕವಾಗಿ ಕೆಲಸ ಮಾಡುವುದು. ಇದರಿಂದ ನೆನೆಸಿಟ್ಟ ದ್ರಾಕ್ಷಿ ತಿಂದರೆ ಮಲಬದ್ಧತೆ ಕಡಿಮೆಯಾಗುವುದು ಮತ್ತು ಜೀರ್ಣಕ್ರಿಯೆಯು ಸರಿಯಾಗಿ ಆಗುವುದು.

ತೂಕ ಇಳಿಸಲು ಒಣದ್ರಾಕ್ಷಿಯಲ್ಲಿ ಸಂಪೂರ್ಣ ಪ್ರಮಾಣದ ನೈಸರ್ಗಿಕ ಸಕ್ಕರೆಯಿದೆ ಮತ್ತು ಇದು ಸಿಹಿ ತಿನ್ನುವ ಬಯಕೆ ಕಡಿಮೆ ಮಾಡುವುದು ಮತ್ತು ಅತಿಯಾಗಿ ಕ್ಯಾಲರಿ ಸೇವಿಸದಂತೆ ತಡೆಯುವುದು. ಇದನ್ನು ಮಿತವಾಗಿ ಸೇವಿಸಿ, ಅತಿಯಾಗಿ ಒಳ್ಳೆಯದಲ್ಲ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇಟ್ಟುಕೊಂಡು ಬಯಕೆ ಕಡಿಮೆ ಮಾಡುವುದು. ಇದರಿಂದ ತೂಕ ಕಳೆದುಕೊಳ್ಳಲು ಸಹಕಾರಿ.

ಪ್ರತಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ ಸಿ ಮತ್ತು ಬಿ ಯಿಂದ ಸಮೃದ್ಧವಾಗಿರುವಂತಹ ಒಣದ್ರಾಕ್ಷಿಯು ದೇಹದಲ್ಲಿ ಪ್ರತಿರೋಧಕ ಶಕ್ತಿಯ ಹೆಚ್ಚಳ ಮಾಡುವುದು. ಇದರಿಂದ ದೇಹಕ್ಕೆ ಸೋಂಕು ಬಾಧಿಸದು.

ಮೂಳೆಗಳನ್ನು ಬಲಪಡಿಸಲು ಮೂಳೆಗಳು ಬೆಳೆಯಲು ಬೇಕಾಗುವಂತಹ ಬೊರೊನ್ ಎನ್ನುವ ಅಂಶವು ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದಲ್ಲಿ ಇದೆ. ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವಂತಹ ಒಣದ್ರಾಕ್ಷಿಯು ಮೂಳೆಗಳು ಬಲಗೊಳ್ಳಲು ನೆರವಾಗುವುದು. ನೀರಿನಲ್ಲಿ ಹಾಕಿಟ್ಟ ಒಣದ್ರಾಕ್ಷಿ ಸೇವನೆ ಮಾಡಿದರೆ ಈ ಎಲ್ಲಾ ಪೋಷಕಾಂಶಗಳು ಸಿಗುವುದು ಮತ್ತು ಮೂಳೆಗಳ ಸಾಂದ್ರತೆ ಹೆಚ್ಚಿಸುವುದು.


ದೇಹದ ಲಿವರ್‌ನ ಆರೋಗ್ಯಕ್ಕೆ ಒಹಳ ಒಳ್ಳೆಯದು…. ಯಕೃತ್‌ನ (ಲಿವರ್‌) ಆರೋಗ್ಯಕ್ಕೆ ನೆನೆಸಿಟ್ಟ ಒಣದ್ರಾಕ್ಷಿ ಹಾಗೂ ಇದರ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಉತ್ತಮಗೊಳ್ಳುತ್ತದೆ. ಇದೇ ಕಾರಣಕ್ಕೆ ಈ ನೀರನ್ನು ಕೆಲವಾರು ಟಾನಿಕ್ ಮತ್ತು ಔಷಧಿಗಳಲ್ಲಿ ಬಳಸಲಾಗುತ್ತಿದೆ.

ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ ಮೂತ್ರಪಿಂಡಗಳಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸಲು ಒಣದ್ರಾಕ್ಷಿ ನೆನೆಸಿದ ನೀರು ಉತ್ತಮವಾಗಿದ್ದು ಇದರಿಂದ ಮೂತ್ರಪಿಂಡಗಳ ಒಳಗೆ ಕಲ್ಲು ಉಂಟಾಗುವುದು,ಸೋಂಕು ಉಂಟಾಗುವುದು ಮೊದಲಾದ ತೊಂದರೆಗಳಿಂದ ರಕ್ಷಣೆ ಪಡೆಯಬಹುದು.

Tags