ಸುದ್ದಿಗಳು

ಏಪ್ರಿಲ್‍ನಲ್ಲಿ ‘ಜೇಮ್ಸ್’ ಎರಡನೇ ಹಂತದ ಚಿತ್ರೀಕರಣ ಪ್ರಾರಂಭ

ಕೊರೊನಾ ಎಫೆಕ್ಟ್‍ನಿಂದ ಚಿತ್ರರಂಗ ಹೈರಾಣು

-ಅಮಿತ್‍ ಕುಮಾರ್

ಕೊರೊನಾ ಎಫಕ್ಟ್ ಚಿತ್ರರಂಗಕ್ಕೆ ಬಾರಿ ನಷ್ಟವನ್ನುಂಟು ಮಾಡಿದ್ದು, ಎಲ್ಲ ಚಿತ್ರದ ಚಿತ್ರೀಕರಣಗಳು ಸ್ಥಗಿತಗೊಂಡಿದೆ. ಪವರ್ ಸ್ಟಾರ್ ಪುನೀತ್‍ ರಾಜಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರವು ತನ್ನ ಮೊದಲ ಹಂತದ ಶೂಟಿಂಗ್‍ ಪೊರ್ಣಗೊಳಿಸಿ ಸದ್ಯಕ್ಕೆ ಕರೊನಾ ಎಫೆಕ್ಟ್‍ ಕಡಿಮೆಯಾಗುವ ತನಕ ಕಾಯುತ್ತಿದೆ. ಚಿತ್ರದ ಎರಡನೇ ಹಂತದ ಚಿತ್ರೀಕರಂವನ್ನು ಏಪ್ರಿಲ್‍ನಲ್ಲಿ ಪ್ರಾರಂಭಿಸಲು ಚಿತ್ರತಂಡ ತಯಾರಿ ನಡೆಸುತ್ತಿದೆ.

Image result for james kannada movie

ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ‘ಬಾಲ್ಕನಿ ನ್ಯೂಸ್‍’ನೊಂದಿಗೆ ಮಾತನಾಡಿ, “ಕರೊನಾದಿಂದ ಎಲ್ಲೆಡೆ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಚಿತ್ರೀಕರಣವು ಸದ್ಯಕ್ಕೆ ನಿಂತಿದ್ದು, ಕೊರೊನಾ ಎಫೆಕ್ಟ್‍ ಕಡಿಮೆಯಾದ ಮೇಲೆ ಚಿತ್ರದ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ” ಎಂದು ತಿಳಿಸಿದರು.

‘ಜೇಮ್ಸ್’ ಚಿತ್ರದ ನಿರ್ದೇಶಕ ಚೇತನ್‍ ಕುಮಾರ್ ಮಾತನಾಡಿ, “ಸದ್ಯಕ್ಕೆ ಜನರು ಈ ಸಂಕಷ್ಟದಿಂದ ಪಾರಾಗಾಲಿ. ಕೊರೊನಾ ಭೀತಿ ಎಲ್ಲರನ್ನು ಕಾಡುತ್ತಿರುವ ಸಮಯದಲ್ಲಿ ಜವಾಬ್ದಾರಿಯಿಂದ ನಡೆದುಕ್ಕೊಳ್ಳುವುದು ಮುಖ್ಯ. ಏಪ್ರಿಲ್‍ ಮೊದಲ ಅಥವಾ ಎರಡನೇ ವಾರದಿಂದ ‘ಜೇಮ್ಸ್‍’ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ಸದ್ಯಕ್ಕೆ ವಾಣಿಜ್ಯ ಮಂಡಳಿಯ ಆದೇಶದ ಮೇರೆಗೆ ಚಿತ್ರಕರಣ ನಡೆಸುತ್ತಿಲ್ಲ. ಮುಂದಿನ ದಿನಗಳಲ್ಲಿ ಚಿತ್ರೀಕರಣದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕ್ಕೊಳ್ಳಲಾಗುವುದು” ಎಂದು ಹೇಳಿದರು.

Image result for james kannada movie

‘ಜೇಮ್ಸ್’ ಚಿತ್ರವನ್ನು ಕಿಶೋರ್ ಪ್ರೊಡಕ್ಷನ್ಸ್‍ ಬ್ಯಾನರ್‍ನಲ್ಲಿ ಕುಮಾರಸ್ವಾಮಿ ಪತ್ತಿಕೊಂಡ ಹಾಗೂ ಕಿಶೋರ್ ಪತ್ತಿಕೊಂಡ ನಿರ್ಮಿಸುತ್ತಿದ್ದಾರೆ. ‘ಬಹದ್ದೂರ್’, ‘ಭರಾಟೆ’ ಖ್ಯಾತಿಯ ಚೇತನ್‍ ಕುಮಾರ್ ಚಿತ್ರಕ್ಕೆ ಆಕ್ಷನ್‍ ಕಟ್‍ ಹೇಳುತ್ತಿದ್ದಾರೆ. ಈಗಾಗಲೇ ‘ಜೇಮ್ಸ್’ ಚಿತ್ರದ ಮೋಷನ್‍ ಪೋಸ್ಟರ್  ಸೋಶಿಯಲ್‍ ಮಿಡಿಯಾಗಳಲ್ಲಿ ಸಕತ್‍ ಸೌಂಡ್‍ ಮಾಡುತ್ತಿದೆ. ಬೇಗ ಕೊರೊನಾ ಸಂಕಷ್ಟ ಕಳೆದು ಎಲ್ಲ ನಿಂತಿರುವ ಕೆಲಸ ಕಾರ್ಯಗಳು ಮತ್ತೆ ಪ್ರಾರಂಭವಾಗಲಿ ಎಂದು ಚಿತ್ರ ರಸಿಕರು ಆಶಿಸುತ್ತಿದ್ದಾರೆ.

#Balkanikannadanews #PuneethRajkumar #Jamesmovie #Chethankumar #Kishorepathikonda

ಅಂದು ಶ್, A ಇಂದು ‘S’ 

Tags