ಸುದ್ದಿಗಳು

ಸಮಸ್ಯೆಗಳ ಸುತ್ತ ವಿಜಿಯೋ…! ವಿಜಿಯ ಸುತ್ತ ಸಮಸ್ಯೆಗಳೋ….!

ಕಂಡು ಕಾಣದ ಸಂಕಷ್ಟಗಳ, ವಿಷವರ್ತುಲಗಳ ದುನಿಯಾದಲ್ಲಿ ಸಿಲುಕಿದ ವಿಜಿ

ಬೆಂಗಳೂರು, ಡಿ.06: ಇತ್ತೀಚೆಗೆ ದುನಿಯಾ ವಿಜಯ್‌ ಗೆ ಸಂಕಷ್ಟಗಳು ಒಂದರ ಮೇಲೆ ಒಂದು ಬಂದೊದಗುತ್ತಿವೆಯೋ, ಅಥವಾ ಅವರೇ ಈ ರೀತಿ ಸಂಕಷ್ಟಗಳಿಗೆ ಸಿಲುಕಿಕೊಳ್ಳುತ್ತಿದ್ದಾರೋ ಒಂದು ಗೊತ್ತಾಗ್ತಾ ಇಲ್ಲ. ಇದೀಗ ವಿಜಿ ಅವರ ಮೊದಲ ಪತ್ನಿ ನಾಗರತ್ನ ಮತ್ತೆ ದೂರು ನೀಡುವುದಕ್ಕೆ ರೆಡಿಯಾಗಿದ್ದಾರಂತೆ.

ಜೈಲು ವಾಸ ಅನುಭವಿಸಿ ಬಂದ ಕರಿ ಚಿರತೆ ವಿಜಿಗೆ ವಿವಾದದಿಂದ ಹೊರ ಬರುವುದಕ್ಕೆ ಆಗುತ್ತಿಲ್ಲ. ಜೈಲು ಸೇರಲು ಮುಖ್ಯಕಾರಣವಾದ ಹಲ್ಲೆ ಮತ್ತು ಕಿಡ್ನಪ್ ಕೇಸ್‌ ಗಿಂತ ಪತ್ನಿಯರ ಜಡೆ ಜಗಳಕ್ಕೆ ವಿಜಿ ರೋಸಿ ಹೋಗಿದ್ದಾರೆ. ಇದೀಗ ತಮ್ಮ ಮೊದಲನೇ ಹೆಂಡತಿಯಿಂದ ಬೇಸತ್ತ ಈ ನಟನಿಗೆ ಇದೀಗ ಮತ್ತೆ ಕಂಟಕ ಎದುರಾಗುತ್ತಿದೆ.

ಪತ್ರದ ಆಧಾರದ ಮೇಲೆ ದೂರು..?

ಇದೀಗ ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆಯಾಗಿದ್ದಾರೆ ಎಂದು ಮತ್ತೆ ನಾಗರತ್ನ ರಗಳೆ ತೆಗೆದಿದ್ದಾರೆ. ಅಲ್ಲದೆ ಕೀರ್ತಿ ವಿಜಿ ಜೈಲಿನಲ್ಲಿದ್ದಾಗಲೇ ಒಂದು ಪತ್ರವನ್ನು ಬರೆದಿದ್ದರು. ಈ ಪತ್ರವನ್ನು ಆಧಾರವಾಗಿಟ್ಟುಕೊಂಡು ಇದೀಗ ನಾಗರತ್ನ ದೂರು ನೀಡಲು ರೆಡಿಯಾಗಿದ್ದಾರಂತೆ.ಮತ್ತೆ ದೂರು ಕೊಡುತ್ತಾರಾ ನಾಗರತ್ನ..?

ಈಗಾಗಲೇ ಈ ವಿಚಾರವಾಗಿ ತಮ್ಮ ವಕೀಲರ ಬಳಿ ಮಾತನಾಡಿ ಚರ್ಚೆ ಮಾಡಿರುವ ನಾಗರತ್ನ ಈ ವಾರವೇ ದೂರು ದಾಖಲು ಮಾಡುತ್ತಾರೆಂಬ ಮಾಹಿತಿ ಇದೆ. ಆದರೆ ಇದ್ಯಾವುದೂ ಅಧಿಕೃತವಲ್ಲ. ಇತ್ತೀಚೆಗಷ್ಟೆ  ಮಹಿಳಾ ಆಯೋಗಕ್ಕೆ ನಾಗರತ್ನ ಮನೆ ಹಾಗೂ ಜೀವನಾಂಶದ ವಿಚಾರವಾಗಿ ದೂರು ನೀಡಿದ್ದರು. ಇದರ ಬೆನ್ನಲ್ಲೇ ನಾಗರತ್ನ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ. ಏನಾದರೂ ಈ ಆರೋಪ ಸಾಬೀತಾದ್ರೆ ಕರಿ ಚಿರತೆಗೆ ಕಾನೂನಿನ ಪ್ರಕಾರ 7 ವರ್ಷ ಜೈಲು ಅನುಭವಿಸಬೇಕಾಗುತ್ತದೆ.

ಮತ್ತೆ ಸಂಕಷ್ಟಕ್ಕೆ ಸಿಲುಕುತ್ತಾರಾ ವಿಜಿ..?

ಇನ್ನು ಒಂದು ಕಡೆ ನಾಗರತ್ನ ಆಸ್ತಿ ವಿಚಾರ. ಇದೀಗ ವಿಜಿಯ ವೈಯಕ್ತಿಕ ಜೀವನ ಜಗಜ್ಜಾಹಿರಾಗಿದೆ. ಇತ್ತ ಹಲ್ಲೆ ಮತ್ತು  ಕಿಡ್ನಾಪ್ ಕೇಸ್ ಜೊತೆ ಜಂಗ್ಲಿಗೆ ನಾಗರತ್ನರಿಂದ ಮತ್ತೆ ತಲೆ ನೋವು ಶುರುವಾಗಿದೆ. ಆದರೆ ಅವರ ಕೌಟುಂಬಿಕ ಕಲಹ ಮತ್ತೆ ವಿಜಿಯನ್ನು ವಿವಾದಕ್ಕೆ ತಳ್ಳದಿದ್ದರೆ ಸಾಕು ಅನ್ನುವುದು ಅವರ ಅಭಿಮಾನಿಗಳ ಆಶಯವಾಗಿದೆ.

Tags