ಸುದ್ದಿಗಳು

ದುನಿಯಾ ವಿಜಿ ಪ್ರಕರಣದ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ

ಸದ್ಯ ಪೋಲಿಸರ ಅತಿಥಿಯಾಗಿರುವ ದುನಿಯಾ ವಿಜಯ್

ಬೆಂಗಳೂರು, ಸೆ, 23: ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್ ಈಗಾಗಲೇ ಪೊಲೀಸರ ಅತಿಥಿಯಾಗಿದ್ದಾರೆ .

ನಿನ್ನೆ ರಾತ್ರಿಯೇ ದುನಿಯಾ ವಿಜಯ್ ಹಾಗೂ ಅವರ ಸ್ನೇಹಿತರನ್ನು ಹೈಗ್ರೌಂಡ್ ಪೊಲೀಸರು ಅರೆಸ್ಟ್ ಮಾಡಿದ್ದು ಸದ್ಯ ಪೊಲೀಸರು ಈ ಪ್ರಕರಣದ ಬಗ್ಗೆ ದುನಿಯಾ ವಿಜಯ್ ಅವರಿಂದ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದಾರೆ .

ಜಿಮ್ ಟ್ರೈನರ್ ಮಾರುತಿಗೌಡ ಪಾನಿಪುರಿ ಕಿಟ್ಟಿ ಅವರ ತಮ್ಮನ ಮಗ .ನಿನ್ನೆ ರಾತ್ರಿಯಿಂದಲೂ ಪ್ರಕರಣ ಹೊಸ ಹೊಸ ತಿರುವನ್ನು ಪಡೆದುಕೊಂಡಿದ್ದು ಈ ಬಗ್ಗೆ ನಟ ಜಗ್ಗೇಶ್ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ

ದುನಿಯಾ ವಿಜಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಜಗ್ಗೇಶ್

ನಟ ದುನಿಯಾ ವಿಜಿ ಹಲ್ಲೆ ಪ್ರಕರಣದ ವಿಚಾರವಾಗಿ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ . ‘ಕ್ರೂರ ನಾಗಿದ್ದ ವಾಲ್ಮೀಕಿ ನಾರದರ ಮಾರ್ಗದರ್ಶನದಿಂದ ರಾಮಾಯಣ ರಚಿಸಿ ಮಹನೀಯರಾದ ಶಾರದೆಯ ಒಲುಮೆಯಿಂದ ಸಾಮಾನ್ಯ ಸಾಮಾನ್ಯನಾದ ದುನಿಯಾ ವಿಜಿ ಇಂದಿನ ಘಟನೆ ತನ್ನ ಶ್ರಮವನ್ನು ಗಾಳಿಗೆ ತೂರಿ ಬಿಟ್ಟ . ಕಲಾವಿದ ಸಮಾಜದ  ಮಾರ್ಗದರ್ಶಕ ಆಗಬೇಕು. ಕಲಾವಿದ ಸಮಾಜದ ಮಾರ್ಗದರ್ಶಕ ಆಗಬೇಕು ಇಲ್ಲದಿದ್ದರೆ ನಮ್ಮ ಬೆವರಿಗೆ ಜನರು ಚಪ್ಪಾಳೆ ಚಪ್ಪಾಳೆಗೂ ಅಪಮಾನ ಮಾಡಿದಂತೆ ನಶ್ವರ ಜಗಕ್ಕೆ ಗುಣವೇ ಶ್ರೀಮಂತಿಕೆ .ಎಂದು ನವರಸ ನಾಯಕ ಜಗ್ಗೇಶ್ ದುನಿಯಾ ವಿಜಿ ಪ್ರಕರಣದ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ .

ದುನಿಯಾ ವಿಜಿ ಪ್ರಕರಣದ ಬಗ್ಗೆ

ನಟ ದುನಿಯಾ ವಿಜಿ ಪೊಲೀಸರ ಅತಿಥಿ ಆಗುತ್ತಿರುವುದು ಇದೇನೂ ಹೊಸತಲ್ಲ ಈಗಾಗಲೇ ಸಾಕಷ್ಟು ಕೇಸ್ ಗಳ ವಿಚಾರವಾಗಿ ದುನಿಯಾ ವಿಜಿ ಪೊಲೀಸ್  ಠಾಣೆಯ ಮೆಟ್ಟಿಲು ತುಳಿದಿದ್ದಾರೆ .

ನಿನ್ನೆ ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ಕಾರ್ಯಕ್ರಮದಲ್ಲಿ ದುನಿಯಾ ವಿಜಿ ಹಾಗೂ ಬಾಡಿ ಬಿಲ್ಡರ್ ಪಾನಿಪುರಿ ಕಿತ್ತಿ ಅವರ ಸಹೋದರನ ಮಗ ಇಬ್ಬರೂ ಕೂಡ ಭಾಗಿಯಾಗಿದ್ದರು ಈ ಕಾರ್ಯಕ್ರಮದಲ್ಲಿ ಮೊದಲಿಗೆ ಮಾತಿನ ಚಕಮಕಿ ನಡೆದು ನಂತರ ನಂತರ ಮಾತು ಗಲಾಟೆಗೆ ತಿರುಗಿದೆ ಇದೇ ವೇಳೆಯಲ್ಲಿ ದುನಿಯಾ ವಿಜಿ ಹಾಗೂ ಸ್ನೇಹಿತರು ಮಾರುತಿಗೌಡ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೆ ಒಳಗಾದ ಮಾರುತಿ ಗೌಡ ಈ ಬಗ್ಗೆ ಹೈಗ್ರೌಂಡ್ ಪೊಲೀಸ್ ಪೊಲೀಸ್ ಠಾಣೆಯಲ್ಲಿ   ದುನಿಯಾ ವಿಜಿ ವಿರುದ್ಧ ದೂರು ದಾಖಲಿಸಿದ್ದಾರೆ.

Tags