ಸುದ್ದಿಗಳು

ದುನಿಯಾ ವಿಜಿಗೆ ಜೈಲೇ ಗತಿ…!

ಮತ್ತೆ ಅರ್ಜಿ ತಿರಸ್ಕಾರ

ಹಲ್ಲೆ ಮತ್ತು ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಕೂಡ ಅರ್ಜಿ ವಿಚಾರಣೆ ತಿರಸ್ಕೃತಗೊಂಡಿದೆ.

ಬೆಂಗಳೂರು, ಸೆ.26: ಯಾಕೋ ದುನಿಯಾ ವಿಜಿ ಟೈಮ್ ಸರಿ ಇಲ್ಲ ಅನ್ನಿಸುತ್ತೆ. ಯಾಕಂದರೆ ಎರಡನೇ ಬಾರಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಈಗಾಗಲೇ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ  ಮುಂದೂಡಿಕೆಯಾಗಿತ್ತು. ಆದರೆ ಇಂದು ಅರ್ಜಿ ಕೈಗೆತ್ತಿಕೊಂಡ ಕೋರ್ಟ್ ಮತ್ತೆ ಅರ್ಜಿ ತಿರಸ್ಕಾರ ಮಾಡಿದೆ.

ಮಾರುತಿ ಗೌಡ ಹಲ್ಲೆ ಹಾಗೂ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಜೈಲು ಅಥಿತಿಯಾಗಿರುವ ದುನಿಯಾ ವಿಜಿ ಅಂಡ್ ಟೀಮ್ ಅರ್ಜಿ ವಿಚಾರಣೆಯನ್ನು ಮಾಡದೇ, ತಿರಸ್ಕಾರ ಮಾಡಿದೆ ಮ್ಯಾಜಿಸ್ಟ್ರೇಟ್ ಕೋರ್ಟ್.

ಸಾಕ್ಷಿ ನಾಶ ಸಾಧ್ಯತೆ ಅರ್ಜಿ ವಜಾ

ಸದ್ಯ ಮಾರುತಿ ಗೌಡ ಆಸ್ಪತ್ರೆಯಲ್ಲಿ ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ವಿಚಾರಣಾಧೀನ ಆರೋಪಿ ಪ್ರಭಾವಿ ಆಗಿರುವುದರಿಂದ ಸಾಕ್ಷಿ ನಾಶ ಮಾಡಬಹುದು ಎಂಬ ಆಲೋಚನೆಯಿಂದ ಅರ್ಜಿ ವಜಾ ಮಾಡಲಾಗಿದೆ. ಇನ್ನು ವಿಜಿ ಗಾಂಜ ಸೇವನೆ ಮಾಡಿ ಹಲ್ಲೆ ಮಾಡಿದ್ದಾರೆ ಅನ್ನುವ ಅನುಮಾನದ ಮೇರೆಗೆ ಈಗಾಗಲೇ ವಿಜಯ್ ಅವರ ಮೂತ್ರ ಹಾಗೂ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಇನ್ನು ಎರಡು ಬಾರಿ ಅರ್ಜಿ ತಿರಸ್ಕೃತಗೊಂಡಿರುವುದರಿಂದ ವಿಜಿ ಅಂಡ್ ಟೀಮ್ ಸೇಷನ್ಸ್ ಕೋರ್ಟ್ ಅಥವಾ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮಾಡಿದ್ದುಣ್ಣೊ ಮಾರಾಯ ಎನ್ನುವಂತಾಗಿದೆ ದುನಿಯಾ ವಿಜಿ ಕಥೆ. ಸದ್ಯ ದುನಿಯಾ ವಿಜಿ ಅಂಡ್ ಟೀಮ್ ೧೪ ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದಾರೆ.

 

Tags