ಸುದ್ದಿಗಳು

ಸಹ ಕಲಾವಿದ ನಾಗ್ ಭೂಷಣ್ ರನ್ನು ಗ್ರೇಟ್ ಆರ್ಟಿಸ್ಟ್ ಎಂದ ‘ದುನಿಯಾ’ ವಿಜಿ…!!!

ಸಾಮಾನ್ಯವಾಗಿ ಒಬ್ಬ ಕಲಾವಿದರು ಮತ್ತೊಬ್ಬ ಕಲಾವಿದರ ನಟನೆಯನ್ನು ನೋಡಿ ಹೊಗಳುವುದು ಕಡಿಮೆ ಎನ್ನಬಹುದು. ಆದರೆ, ನಟ ‘ದುನಿಯಾ’ ವಿಜಯ್ ಇದಕ್ಕೆ ಹೊರತಾಗಿದ್ದಾರೆ ಎನ್ನಬಹುದು.

ಹೌದು, ಸಹ ಕಲಾವಿದರಾದ ನಾಗ್ ಭೂಷಣ್ ರವರು ಇವ ‘ಸಂಕಷ್ಟಕರ ಗಣಪತಿ’, ‘ಒಂದಲ್ಲಾ ಎರಡಲ್ಲಾ’, ‘ಜಾನಿ ಜಾನಿ ಎಸ್ ಪಪ್ಪಾ’ ಸೇರಿದಂತೆ ಏಳೆಂಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ‘ಸಲಗ’ ಚಿತ್ರದಲ್ಲಿ ಲಾಯರ್ ಕಾಣಿಸಿಕೊಂಡಿದ್ದಾರೆ. ಇವರ ನಟನೆಯನ್ನು ನೋಡಿದ ವಿಜಿ, ಅವರನ್ನು ಗ್ರೇಟ್ ಆ್ಯಕ್ಟರ್ ಎಂದು ಹೇಳಿದ್ದಾರೆ.

ನಟ ನಾಗ್ ಭೂಷಣ್ ರ ನಟನೆಯ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ದುನಿಯಾ ‘ನಾಗಭೂಷಣ್ ಒಬ್ಬ ಗ್ರೇಟ್ ಆರ್ಟಿಸ್ಟ್’ ಎಂದು ಬರೆದಿದ್ದಾರೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಇನ್ನು ಚಿತ್ರದಲ್ಲಿ’ಡಾಲಿ’ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದು, ಸಂಜನಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದ ಮೂಲಕ ‘ಟಗರು’ ಚಿತ್ರತಂಡ ಮತ್ತೊಮ್ಮೆ ಒಂದಾಗಿದ್ದು, ಅದೇ ಸಿನಿಮಾಗೆ ಸಂಭಾಷಣೆ ಬರೆದ ಮಾಸ್ತಿ ಈ ಚಿತ್ರಕ್ಕೂ ಬರೆಯುತ್ತಿದ್ದು, ಚರಣ್ ರಾಜ್ ಸಂಗೀತ ನೀಡುತ್ತಿದ್ದಾರೆ.

“ಸೈರಾ” ಚಿತ್ರತಂಡದಿಂದ ಹೊರಬಿತ್ತು ಸಿಹಿ ಸುದ್ದಿ…!!!

#duniyavijay  #salagamovie #nagabhushan #kannadafilm, #kannadamovie, #kannadanews, #kannadanewmovie, #kannadacine, #latestkannadamovie

Tags