ಸುದ್ದಿಗಳು

‘ಸಲಗ’ ಮೂಲಕ ನಿರ್ದೇಶಕರಾಗುತ್ತಿರುವ ದುನಿಯಾ ವಿಜಯ್ ರಿಗೆ ಕಿಚ್ಚ ಸುದೀಪ್ ಸಲಹೆ

ಚಿತ್ರರಂಗಕ್ಕೆ ಮತ್ತೆ ಮರಳಿದ ‘ಕರಿ ಚಿರತೆ’ ವಿಜಯ್’

ಬೆಂಗಳೂರು.ಮೇ.15: ಇಷ್ಟು ದಿನಗಳ ಕಾಲ ನಾಯಕ ನಟರಾಗಿ ರಂಜಿಸಿದ್ದ ‘ದುನಿಯಾ’ ವಿಜಯ್ ಇದೀಗ ನಿರ್ದೇಶಕರಾಗುತ್ತಿದ್ದಾರೆ. ಈ ಮೂಲಕ ಅವರು ನಿರ್ದೇಶಕರಾಗಿ ಭಡ್ತಿ ಪಡೆಯುತ್ತಿದ್ದಾರೆ.

ಹೌದು, ಕಳೆದ ವರ್ಷ ‘ಜಾನಿ ಜಾನಿ ಎಸ್ ಪಪ್ಪಾ’ ಚಿತ್ರದ ಬಳಿಕ ‘ಕುಸ್ತಿ’ ಆರಂಭಿಸಿದ್ದ ವಿಜಯ್, ತಮ್ಮ ವಯಕ್ತಿಕ ಕಾರಣಾoತರಗಳಿಂದಾಗಿ ಬ್ರೇಕ್ ಕೊಟ್ಟಿದ್ದರು. ಅದರ ನಡುವೆಯೇ ‘ಸಲಗ’ ಸಿನಿಮಾಗೂ ಕೂಡ ಭರ್ಜರಿ ತಯಾರಿ ನಡೆಸಿದ್ದರು.

ಇದೀಗ ‘ಸಲಗ’ ಚಿತ್ರವು ವಿಶೇಷ ಕಾರಣಗಳಿಂದಾಗಿ ಸದ್ದು ಮಾಡುತ್ತಿದೆ. ಅದೇನೆಂದರೆ, ಈ ಚಿತ್ರವನ್ನು ಮುನ್ನಡೆಸುವುದಕ್ಕೆ ಸ್ವತಃ ದುನಿಯಾ ವಿಜಯ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಹೌದು ಶ್ರೀಕಾಂತ್ ನಿರ್ಮಾಣದ ಸಲಗ ಸಿನಿಮಾದ ಮಾವುತರಾಗಿ ಅಂದರೆ ನಿರ್ದೇಶಕರಾಗಿ ದುನಿಯಾ ವಿಜಯ್ ಬಡ್ತಿ ಪಡೆದಿದ್ದಾರೆ.

ಇದೀಗ ನಟ, ನಿರ್ಮಾಪಕ, ನಿರ್ದೇಶಕ ಕಿಚ್ಚ ಸುದೀಪ್ ‘ಸಲಗ’ ಚಿತ್ರದ ಕುರಿತಂತೆ ಟ್ವೀಟ್ ಮಾಡಿದ್ದು, ದುನಿಯಾ ವಿಜಯ್ ರಿಗೆ ಶುಭ ಹಾರೈಸಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ‘ ಯಾರಾದರೂ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗುತ್ತಿದ್ದಾರೆ ಎನ್ನುವುದು ಒಳ್ಳೆಯ ವಿಷಯ. ಈ ರೀತಿ ಕೆಲವು ಬಾರಿ ನಮ್ಮನ್ನು ಹುಡುಕಲು ಹೋದರೆ, ಕೆಲವು ಬಾರಿ ಪ್ರಯೋಗ ಮಾಡಲು ಹೋಗಬೇಕಾಗುತ್ತದೆ.

ಇನ್ನು ಒಬ್ಬ ನಟ ನಿರ್ದೇಶಕ ಆಗುವುದು ಒಳ್ಳೆಯ ಬೆಳವಣಿಗೆ. ಜೊತೆಗೆ ಇದು ಒಂದು ದೊಡ್ಡ ಒತ್ತಡ ಕೂಡ. ವಿಜಯ್ ಅವರಿಗೆ ನನ್ನ ಶುಭಾಶಯಗಳು. ನಿರ್ದೇಶನದ ಸಮಯವನ್ನು ಖುಷಿ ಪಡಿ’

ಸುದೀಪ್ ರ ಈ ಟ್ವೀಟ್ ಗೆ ದುನಿಯಾ ವಿಜಯ್ ಹೃತ್ಪೂರ್ವಕ ಕೃತಜ್ಞತೆ ತಿಳಿಸಿದ್ದಾರೆ. ‘ಎಲ್ಲದರಲ್ಲೂ ವಿಫಲವಾದಾಗ ತಾಳ್ಮೆಯಿಂದ ಪ್ರಯತ್ನಿಸಬೇಕು…’ ಎಂಬ ಮಾತಿನಲ್ಲಿ ನಂಬಿಕೆ ಇಟ್ಟಿದ್ದೇನೆ. ಈ ಇಂಡಸ್ಟ್ರಿಯಲ್ಲಿರುವ ನಿಮ್ಮಂಥ ಹಿರಿಯರು ನನಗೆ ಬೆಂಬಲವಾಗಿ ನಿಂತಿದ್ದೀರಿ. ಅದರೊಂದಿಗೆ ದೇವರೂ ಕೂಡ ನನ್ನ ಈ ಹೊಸ ಕೆಲಸಕ್ಕೆ ಆಶೀರ್ವಾದ ಮಾಡುತ್ತಾನೆ ಎಂಬ ಆಶಯ ಇದೆ’ ಎಂದು ರೀ- ಟ್ವೀಟ್ ಮಾಡಿದ್ದಾರೆ.

ಇನ್ನು ಈ ಚಿತ್ರದ ಕಥೆಯನ್ನು ಬರೆದಿದ್ದು ಸ್ವತಃ ವಿಜಯ್. ಮೊದಲು ನಿರ್ಮಾಣ ಹೊಣೆ ಕೂಡ ಅವರ ದುನಿಯಾ ಟಾಕೀಸ್ ನದ್ದಾಗಿತ್ತು. ಆದರೆ, ನಿರ್ಮಾಪಕರಾಗಿ ಕೆಪಿ ಶ್ರೀಕಾಂತ್ ತಂಡ ಸೇರಿದ್ದರು. ಉಳಿದಂತೆ ಚಿತ್ರದಲ್ಲಿ ಡಾಲಿ ಧನಂಜಯ್, ಸುಧಿ, ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

ಕಮಲ್ ಹಾಸನ್ ನಾಲಿಗೆ ಕತ್ತರಿಸಬೇಕು ಹೀಗಂದವರು ಯಾರು ಗೊತ್ತಾ..?

#duniyavijay, #sudeep, #tweeter, #balkaninews #filmnews, #kannadasuddigalu, #sudeeptweet #salaga

Tags

Related Articles