ಸುದ್ದಿಗಳು

‘ಈ ಕನಸಿನ ಆರಂಭಕೆ…’ ಗಮನ ಸೆಳೆದ ಆಲ್ಬಮ್ ಸಾಂಗ್

ಹೋಳಿ ಹಬ್ಬದಂದು ಬಿಡುಗಡೆಯಾಗಿರುವ ಹಾಡು

ಬೆಂಗಳೂರು.ಮಾ.24: ಸ್ಯಾಂಡಲ್ ವುಡ್ ನಲ್ಲೀಗ ಮ್ಯೂಸಿಕ್ ಆಲ್ಬಮ್ ಗಳೂ ಶುರುವಾಗಿವೆ. ಕೆಲವು ದಿನಗಳ ಹಿಂದೆಯಷ್ಟೇ ‘ಆಫ್ಟರ್ 8 ಪಿ.ಎಂ’ ಎಂಬ ಆಲ್ಬಮ್ ಸಾಂಗ್ ಸಹ ಬಿಡುಗಡೆಯಾಗಿತ್ತು. ಈಗ ಹೋಳಿ ಹಬ್ಬದಂದು ಬಿಡುಗಡೆಯಾಗಿರುವ ‘ಈ ಕನಸಿನ ಆರಂಭಕೆ…’ ಎಂಬ ಆಲ್ಬಮ್ ಎಲ್ಲರ ಗಮನ ಸೆಳೆಯುತ್ತಿದೆ.

ಈಗಾಗಲೇ ಹಲವಾರು ಹಾಡುಗಳಿಗೆ ಧ್ವನಿಯಾಗುತ್ತಲೇ ಪ್ರತಿಭಾನ್ವಿತ ಗಾಯಕಿಯಾಗಿ ಗುರುತಿಸಿಕೊಂಡಿರುವ ಅನನ್ಯಾ ಭಗತ್ ಈಗೊಂದು ಚೆಂದದ ಹಾಡೊಂದನ್ನು ರೂಪಿಸಿದ್ದಾರೆ. ಈ ಹಾಡು ಅವರದ್ದೇ ಯುಟ್ಯೂಬ್ ಚಾನಲ್ ನಿಂದ ಬಿಡುಗಡೆಯಾಗಿದೆ.

ಈ ಹಾಡಿನಲ್ಲಿ ಮಲೆನಾಡಿದ ಸ್ಥಳಗಳು ಚಂದವಾಗಿ ಮೂಡಿ ಬಂದಿದ್ದು, ಈ ವಾತಾವರಣದಲ್ಲಿ ಚಿತ್ರೀಕರಿಸಲ್ಪಟ್ಟ ದೃಶ್ಯಗಳು ಹಾಗೂ ಅನನ್ಯಾ ಭಗತ್ ಧ್ವನಿಯಲ್ಲಿ ಮೂಡಿ ಬಂದಿರುವ ಅಭಿರಾಮ್ ಎಸ್ ಸಾಹಿತ್ಯದ ಸಾಲುಗಳು ಮೋಡಿ ಮಾಡುತ್ತಿವೆ.

ನನ್ನನ್ನು ನಾವು ಪ್ರೀತಿಸುತ್ತಾ ಅರ್ಥ ಮಾಡಿಕೊಳ್ಳಬೇಕೆನ್ನುವುದು ಈ ಹಾಡಿನ ಮೂಲ ಉದ್ದೇಶ. ನೆನಪುಗಳ ಸಂತೆಯಲಿ ನೀನೇ ನೀನೇ ಬರಿ ನೀನೇ ಎಂಬ ಈ ಹಾಡು ತೀರ್ಥಹಳ್ಳಿ ಪ್ರದೇಶದ ಪ್ರಾಕೃತಿಕ ಸೌಂದರ್ಯದ ಹಿಮ್ಮೇಳದೊಂದಿಗೆ ನವಿರಾಗಿಯೇ ಮೂಡಿ ಬಂದಿದೆ. ಈ ಹಾಡಿಗೆ ವಿಶ್ವಜಿತ್ ಛಾಯಾಗ್ರಹಣ, ಅಶಿಕ್ ಸಂಕಲನ ಹಾಗೂ ಶಮಂತ್ ಅವರ ನಿರ್ದೇಶನವಿದೆ.

ಸಿನಿಮಾಕ್ಕಾಗಿ ಪ್ರಾಣವನ್ನೇ ಪಣವಿಟ್ಟು ಫೈಟ್ ಮಾಡಿದ ಪ್ರಥಮ್

#ekanasinaarambakke, #albumsong, #balkaninews #kannadasuddigalu, #filmnews

Tags