ಸುದ್ದಿಗಳು

ಬಾಲಿವುಡ್ ಗೆ ಎಂಟ್ರಿಯಾಗಲು ರೆಡಿಯಾದ ಈ ರೂಪದರ್ಶಿ ಯಾರು…?

ಮುಂಬೈ, ಫೆ.12:

ಸಿನಿಮಾ ರಂಗಕ್ಕೆ ಎಂಟ್ರಿಯಾಗಲು ಹೆಚ್ಚಿನವರು ಇಷ್ಟಪಡುತ್ತಾರೆ. ಅದರಲ್ಲಿ ಮಾಡೆಲಿಂಗ್ ಮಾಡಿ ಸಿನಿಮಾ ಕ್ಷೇತ್ರಕ್ಕೆ ಹೋಗುವವರು ಅನೇಕ ಮಂದಿ. ಅದಿರಲಿ. ಇಲ್ಲೊಬ್ಬಳು ಮಾದಕ ಬೆಡಗಿ ಇದ್ದಾರೆ.

ಹೆಸರು ಏಕ್ತಾ ಮರು. ರೂಪದರ್ಶಿ, ಫ್ಯಾಷನ್ ಬ್ಲಾಗರ್ ಮತ್ತು ಆನಿಮೇಟರ್. ನಮ್ಮ ದೇಶದ ಯುವತಿ ಈಕೆ. ಕಠಿಣ ಕೆಲಸದ ಮೂಲಕ ಸಕ್ಸಸ್ ಕಾಣಲು ಇಷ್ಟಪಡುವ ಸುಂದರ ಹುಡುಗಿ. ತನ್ನ ಜೀವನವನ್ನು ಆನಂದಿಸಲು ಈಕೆ ಹೆಚ್ಚು ಇಷ್ಟಪಡುತ್ತಾರೆ.

ಅಂದಗಾಗೇ ಏಕ್ತಾ ಭಾರತದ ಸುಂದರ ಮಾಡೆಲ್ ಗಳಲ್ಲಿ ಕೂಡಾ ಓರ್ವರು. ಇವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಅಭಿಮಾನಿಗಳಿದ್ದಾರೆ. ಈಕೆ ಏಪ್ರಿಲ್ 15 ರಂದು ಮುಂಬೈನಲ್ಲಿ ಜನಿಸಿದರು. ಇವರು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಏಕ್ತಾ ಮರು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.  ಇನ್ಸ್ಟಾಗ್ರ್ಯಾಮ್ ಖಾತೆ ektamaru03 ನಲ್ಲಿ 270 ಕ್ಕಿಂತ ಹೆಚ್ಚು ಅನುಯಾಯಿಗಳಿದ್ದಾರೆ. ಏಕ್ತಾ ಪ್ರಸ್ತುತ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಫಿಟ್ನೆಸ್ ಫ್ರೀಕ್ ಗರ್ಲ್ ಆಗಿರುವ ಇವರು ಟಿವಿ ಜಾಹೀರಾತಿನಲ್ಲಿಯೂ  ಕಾಣಿಸಿಕೊಂಡಿದ್ದಾರೆ.

ಮುಂಬೈ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ‌. ಬಾಲ್ಯದಿಂದಲೂ ಮಾಡೆಲ್ ಆಗುವ ಕನಸನ್ನು ಕಂಡ ಈ ಯುವತಿಗೆ ಬಾಲಿವುಡ್ ನಲ್ಲೂ ಅವಕಾಶ ಸಿಗುವ ಸಾಧ್ಯತೆ ಇದೆ.

ಪ್ರೀತಿಯಲ್ಲಿ ಬಿದ್ದ ವಿಜಯ್ ದೇವರಕೊಂಡ!!

#model #bollywood #instagram #ektamaruinstagram #balkaninews

Tags