ಸುದ್ದಿಗಳು

ಎಮಿಲಿ ಬ್ಲಂಟ್ ನನ್ನು ಗೌರವಿಸುತ್ತಿರುವ ಪಾಮ್ ಸ್ಪ್ರಿಂಗ್ಸ್ ಫಿಲ್ಮ್ ಫೆಸ್ಟಿವಲ್

ಬೆಂಗಳೂರು, ಜ.03: ಹಾಲಿವುಡ್ ತಾರೆ ಎಮಿಲಿ ಬ್ಲಂಟ್ ಅವರನ್ನು ಜನವರಿ 4ರಂದು ಪಾಮ್ ಸ್ಪ್ರಿಂಗ್ಸ್ ಚಲನಚಿತ್ರೋತ್ಸವದಲ್ಲಿ ಸೃಜನಶೀಲ ಇಂಪ್ಯಾಕ್ಟ್ ಇನ್ ಆಕ್ಟಿಂಗ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಜನವರಿ 3 -14ರಂದು ನಡೆಯಲಿರುವ ಪಾಮ್ ಸ್ಪ್ರಿಂಗ್ಸ್ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್

ವೆರೈಟಿ ಪ್ರಕಾರ, ಈ ಪ್ರಶಸ್ತಿಯು “ಎ ಕ್ವಿಟ್ ಪ್ಲೇಸ್”ನಲ್ಲಿ ಪೋಷಕ ಪಾತ್ರ ಮತ್ತು ಡಿಸ್ನಿಯ “ಮೇರಿ ಪಾಪಿನ್ಸ್ ರಿಟರ್ನ್ಸ್” ನಲ್ಲಿ ನಟಿಸಿದ ಪಾತ್ರಕ್ಕಾಗಿ ಬ್ಲಂಟ್ ಅವರನ್ನು ಗೌರವಿಸಲಾಗುತ್ತಿದೆ.

ನಟಿ ಎರಡು ಪಾತ್ರಗಳಿಗೆ ಎಸ್ ಎಜಿ ನಾಮನಿರ್ದೇಶನಗಳನ್ನು ಮತ್ತು “ಮೇರಿ ಪಾಪಿನ್ಸ್ ರಿಟರ್ನ್ಸ್” ಗಾಗಿ ಗೋಲ್ಡನ್ ಗ್ಲೋಬ್ ನಾಮನಿರ್ದೇಶನವನ್ನು ಪಡೆದಿದ್ದಾರೆ.

ಈ ಪ್ರಶಸ್ತಿಯನ್ನು ಹಿಂದೆ ಡೇನಿಯಲ್ ಕಲುವಾ, ಚಾರ್ಲಿಜ್ ಥರಾನ್, ಮಾರ್ಕ್ ವಾಲ್ಬರ್ಗ್ ಮತ್ತು ಸ್ಟೀವ್ ಕ್ಯಾರೆಲ್ ಕೂಡ ಪಡೆದುಕೊಂಡಿದ್ದಾರೆ. ನಿರ್ದೇಶನದಲ್ಲಿ ಸೃಜನಶೀಲ ಪ್ರಭಾವವನ್ನು ತೋರಿಸಿದ ರಿಯಾನ್ ಕೂಗ್ಲರ್‍ ಅವರನ್ನು ಗೌರವಿಸಲಾಗುತ್ತಿದೆ. ಪಾಮ್ ಸ್ಪ್ರಿಂಗ್ಸ್ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಜನವರಿ 3-14ರಂದು ನಡೆಯಲಿದೆ.

Tags