ಸುದ್ದಿಗಳು

ಟಾಪ್ ಲೆಸ್ ಆಗಿ ಪೋಸ್ ಕೊಟ್ಟು ವಿಶೇಷ ಸಂದೇಶ ರವಾನಿಸಿದ ಹಾಲಿವುಡ್ ಮಾಡೆಲ್

ಎಮಿಲಿ ರಟಾಜ್ ಕೌಸ್ಕಿ…ಹಾಲಿವುಡ್ ನ್ಯೂಸ್ ಓದುವ ಮಂದಿಗೆ ಈ ಹೆಸರು ಚಿರಪರಿಚಿತ. ಸದ್ಯ ಮಾಡೆಲ್ ಎಮಿಲಿ ಈಗ ಭಾರೀ ಸುದ್ದಿಯಲ್ಲಿದ್ದಾಳೆ. ಯಾಕೆ ಅಂತೀರಾ? ಎಮಿಲಿ ಇದೀಗ ಟಾಪ್ ಲೆಸ್ ಆಗಿ ಪೋಸ್ ನೀಡುವುದರ ಜೊತೆಗೆ ಸಂದೇಶವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ.

ವರದಿಗಳ ಪ್ರಕಾರ, 28 ವರ್ಷದ ಮಾಜಿ ಯುಸಿಎಲ್ಎ ವಿದ್ಯಾರ್ಥಿಯಾದ ಎಮಿಲಿ ಮೇಲುಡುಪನ್ನು ಹಾಕದೆ ಫೋಟೋಗೆ ಪೋಸ್ ಕೊಟ್ಟಿದ್ದಾಳೆ. ಎಮಿಲಿ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಇಂತಹ ಫೋಟೋ ಹಾಕುವುದು ಹೊಸತೇನಲ್ಲ. ಯಾವಾಗಲೂ ಅರೆನಗ್ನ ಫೋಟೋ ಪೋಸ್ಟ್ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾಳೆ.

ಮತ್ತೇಕೆ ಇಂತಹ ಸುದ್ದಿ ಹಾಕಿದ್ರಿ ನೀವು ಎಂದು ಕೇಳಬಹುದು. ಆದರೆ ಈ ಬಾರಿ ಎಮಿಲಿ ಬಗ್ಗೆ ಮಾತನಾಡಲು ವಿಷಯವೊಂದಿದೆ. ತಾನು ಸುಂದರಿ ಮಾತ್ರವಲ್ಲ, ನನಗೂ ಕೆಲವು ಎಥಿಕ್ಸ್ ಇದೆ ಎಂಬುದನ್ನು ತೋರಿಸಿದ್ದಾರೆ.

ಹೌದು, ಎಮಿಲಿ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕಂಕುಳಲ್ಲಿ ಕೂದಲಿರುವ ಫೋಟೋ ಪೋಸ್ಟ್ ಮಾಡಿದ್ದರು. ಅದರಲ್ಲಿ ‘ಹಾರ್ಪರ್ಸ್ ಬಜಾರ್’ ನಿಯತಕಾಲಿಕೆಯಲ್ಲಿ ಬಂದ ಪ್ರಬಂಧ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದರು. ಆಗ ಆಶ್ಲೇ ಗ್ರಹಾಂ ಅವರಂತಹ ಖ್ಯಾತನಾಮರು ಎಮಿಲಿಗೆ ಬೆಂಬಲವಾಗಿ ಕಾಮೆಂಟ್ ಮಾಡಿದರೆ, ಇತರರು ಇದನ್ನು ವಿರೋಧಿಸಿದರು.

ಅಂದಹಾಗೆ ಎಮಿಲಿ ತನ್ನ ಸೌಂದರ್ಯದವನ್ನು ತೋರಿಸಲು ಮಾತ್ರ ಇನ್ ಸ್ಟಾಗ್ರಾಂ ಬಳಸುತ್ತಿಲ್ಲ. ಬದಲಿಗೆ ಮಹಿಳಾ ಸಬಲೀಕರಣದ ಸಂದೇಶವನ್ನು ಹರಡಲು ಇದನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾಳೆ.

 

View this post on Instagram

 

A post shared by Emily Ratajkowski (@emrata) on

ಅಭಿಮಾನಿಗಳಿಗೆ ಶಾಕ್ ನೀಡಿದ ವರಲಕ್ಷ್ಮಿ ಶರತ್ ಕುಮಾರ್

#balkaninews #emilyratajkowski #emilyratajkowskiinstagram # hollywoodmodel

Tags