ಸುದ್ದಿಗಳು

ಟಾಲಿವುಡ್ ನಲ್ಲಿ ಮತ್ತೆ ನೆಲಕಚ್ಚಿದ ಸೆಕ್ಸಿ ಲೇಡಿಯ ಅದೃಷ್ಟ…!

ಹೈದ್ರಾಬಾದ್, ಜ.14: ಕೆಲವೊಮ್ಮೆ ಅದೃಷ್ಟವೊಂದಿದ್ದರೆ ಮನಸ್ಸಿಲ್ಲದೆ ಮಾಡಿದ ಕೆಲಸವೂ ನಮ್ಮನ್ನೂ ಎಲ್ಲೋ ಹೋಗಿ ನಿಲ್ಲಿಸುತ್ತದೆ. ಇನ್ನೂ ಕೆಲವೊಮ್ಮೆ ಅದೃಷ್ಟ ಕೈಕೊಟ್ಟರೆ ಮಾಡಿದ್ದೆಲ್ಲಾವೂ ಸೋತುಹೋಗುತ್ತದೆ. ಅದರಲ್ಲೂ ಚಿತ್ರರಂಗದಲ್ಲಿರುವ ಕೆಲವೊಂದು ಹಾಟ್ ಬೆಡಗಿಯರು ಕೆಲವೊಂದು ಸಿನಿಮಾಗಳಿಗೆ ಸಹಿಹಾಕುವಾಗ ಈ ಚಿತ್ರ ನಮ್ಮ ಜೀವನದಲ್ಲಿ ಖಂಡಿದ ಮ್ಯಾಜಿಕ್ ಮಾಡಿಯೇ ತೀರುತ್ತದೆ ಎಂದು ಕನಸು ಕಾಣುತ್ತಾರೆ.

ಆದರೆ ದುರದೃಷ್ಟಕ್ಕೆ ಆ ಚಿತ್ರ  ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿ ಹಾಕಿದ ಬಂಡವಾಳವೂ ವಾಪಾಸ್ ಬರುವುದಿಲ್ಲ. ಇದೀಗ ಡಸ್ಕ್ ಸಿರೇನ್ ಇಷಾ ಗುಪ್ತಾ ಅವರ ಸರದಿಯೂ ಇದೇ ಆಗಿದೆ.

ಹಾಟ್ ಫೋಟೋಗಳಿಂದ ಗಮನ ಸೆಳೆಯುವ ನಟಿ ಇಷಾ

ಇಷಾ ಗುಪ್ತಾ ಅವರ ಅದೃಷ್ಟ ಕೈಕೊಟ್ಟಿದೆ ಎಂದೇ ಕಾಣುತ್ತದೆ. ಇತ್ತೀಚೆಗೆ ಆಕೆ ಅಭಿಮಾನಿಗಳನ್ನು ಸೆಳೆಯಲು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಾಟ್ ಫೋಟೋಗಳನ್ನು ಹರಿಬಿಟ್ಟರೂ, ಸಿನಿಮಾರಂಗದಲ್ಲಿ ಆಕೆಗೆ ಬೇಡಿಕೆ ಇಲ್ಲ. ಈ ಮಾಜಿ ಮಿಸ್ ಇಂಡಿಯಾಗೆ ಇದೀಗ ಹೇಳಿಕೊಳ್ಳುವ ಅವಕಾಶಗಳು ಬರುತ್ತಿಲ್ಲ.

ಹೀಗಾಗಿ ತೆಲುಗಿನಲ್ಲಿ ಅದೃಷ್ಟಪರೀಕ್ಷೆಗೆ ಮುಂದಾದ ಈ ಬ್ಯೂಟಿಗೆ ಇಲ್ಲೂ ಅದೃಷ್ಟ ಕೈಕೊಟ್ಟಿದೆ. ಸಚಿನ್ ಜೋಶಿ ಅವರ ‘ವೀದೇವಾಡು’ ಚಿತ್ರದಲ್ಲಿ ಹಿರೋಯಿನ್ ಆಗಿ ಇಷಾ ನಟಿಸಿದರು. ಆದರೆ ಚಿತ್ರ ಸೋತುಹೋಯ್ತು. ಇದಾದ ಬಳಿಕ ಇದೀ ರಾಮ್ ಚರಣ್ ತೇಜಾ ಅವರ ‘ವಿನಯ ವಿಧೇಯ ರಾಮ’ ಚಿತ್ರದಲ್ಲಿ ಆಕೆ ನಟಿಸಿದ್ದಾರೆ. ಬಹುನಿರೀಕ್ಷಿತ ಈ ಚಿತ್ರವೂ ನೆಲಕಚ್ಚಿದೆ. ಒಟ್ಟಾರೆ ಬ್ಯೂಟಿ, ಸೆಕ್ಸಿ ಫಿಗರ್ ಇದ್ದರೆ ಸಾಲದು ಅದೃಷ್ಟವೂ ಬೇಕು ಎಂಬುದಕ್ಕೆ ಇಷಾ ಉದಾಹರಣೆಯಂತಿದ್ದಾರೆ.

#eshaguptha #tollywood #tollywoodmovies #eshagupthainvinayvidheyaramamovie #balkaninews

Tags