ಸುದ್ದಿಗಳು

ಯುರೋಪ್ನಲ್ಲಿ ದಂಗಲ್ ನಟಿಯರ ಡಾನ್ಸ್..

‘ದಂಗಲ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ಈ ಇಬ್ಬರು ನಟಿಯರು ನಂತರದಲ್ಲೂ ಒಟ್ಟಿಗೆ ಸೇರಿದ್ದಾರೆ..

ಜಾಹಿರಾತು ಒಂದರ ಚಿತ್ರೀಕರಣದಲ್ಲಿ ಕಾಣಿಸಿಕೊಂಡಿರೋ ಇವರು ಯುರೋಪ್ ರಸ್ತೆಗಳಲ್ಲಿ ನೃತ್ಯ ಮಾಡಿದ್ದಾರೆ

ಮುಂಬೈ,ಸೆ.01:  ಬೇರೆ ಬೇರೆ ದೇಶಗಳಲ್ಲಿ ರಸ್ತೆಗಳಲ್ಲಿ ನಟ-ನಟಿಯರು ಕುಣಿಯೋದು ಹೊಸದೇನಲ್ಲಾ ಯಾವುದಾದರೊಂದು ಸಿನಿಮಾ, ಜಾಹಿರಾತು ಇದ್ದಾಗ ಈ ರೀತಿ ವೇದಿಕೆಗಳು ನಿರ್ಮಾಣವಾಗುತ್ತಲೇ ಇರುತ್ತವೆ. ಇದೀಗ ‘ದಂಗಲ್’ ನಟಿಯರಾದ ಫಾತಿಮಾ ಸನಾ ಶೇಕ್ ಮತ್ತು ಸನ್ಯಾ ಮಲ್ಹೋತ್ರಾ ಯುರೋಪ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

 ರಸ್ತೆಯಲ್ಲಿ ಡ್ಯಾನ್ಸ್..

ಜಾಹಿರಾತು ಒಂದರ ಚಿತ್ರೀಕರಣದಲ್ಲಿ ಕಾಣಿಸಿಕೊಂಡಿರೋ ಇವರು ಯುರೋಪ್ ರಸ್ತೆಗಳಲ್ಲಿ ನೃತ್ಯ ಮಾಡಿದ್ದಾರೆ. ಇನ್ನು ಸದ್ಯ ಈ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಂಗಳಲ್ಲಿ ಹಾಕಿಕೊಂಡಿದ್ದು ಅಭಿಮಾನಿಗಳು ಈ ವಿಡಿಯೋಗಳಿಗೆ ಫಿಧಾ ಆಗಿದ್ದಾರೆ.

‘ದಂಗಲ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ಈ ಇಬ್ಬರು ನಟಿಯರು ನಂತರದಲ್ಲೂ ಒಟ್ಟಿಗೆ ಸೇರಿದ್ದಾರೆ. ಯಶಸ್ವಿ ಸಿನಿಮಾ ಅಂತಾನೆ ಹೆಸರು ಪಡೆದ ‘ದಂಗಲ್’ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿದ್ದ ಈ ಜೋಡಿಯನ್ನ ಜಾಹಿರಾತಿನ ಮೂಲಕ ಮತ್ತೆ ನೋಡಬಹುದು.

Yup ???? Break tha, banta tha @sanyamalhotra_ #BreakHaiBantaHai @KitKatIndia

A post shared by Fatima Sana Shaikh (@fatimasanashaikh) on

Tags

Related Articles