ಸುದ್ದಿಗಳು

ನಾವು ಯಾವತ್ತೂ ಹೀರೋಗಳೇ, ಶಂಕರ್ ನಾಗ್ ಫ್ಯಾನ್ ಗಳು: ಮೋಡಿ ಮಾಡುವ ‘ಫ್ಯಾನ್’ ಚಿತ್ರದ ಟೀಸರ್

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಚಿತ್ರರಂಗಕ್ಕೆ ಸಂಬಂಧಿಸಿದ ಕಥೆಯನ್ನೇ ಇಟ್ಟುಕೊಂಡು ಅನೇಕ ಸಿನಿಮಾಗಳು ಮೂಡಿ ಬಂದಿವೆ. ಅದೇ ರೀತಿ, ರಿಯಾಲಿಟಿ ಶೋಗಳ ಎಳೆ ಇಟ್ಟುಕೊಂಡು ಹಲವು ಚಿತ್ರಗಳು ತೆರೆಕಂಡಿವೆ. ಇವುಗಳ ಸಾಲಿನಲ್ಲಿ ಇಲ್ಲೊಂದು ಸೇರ್ಪಡೆಗೊಳ್ಳುತ್ತಿದೆ. ಅದುವೇ ‘ಫ್ಯಾನ್’.

ಹೌದು, ‘ಫ್ಯಾನ್’ ಹೆಸರಿನ ಚಿತ್ರವೊಂದು ರಿಲೀಸ್ ಗೆ ರೆಡಿಯಾಗುತ್ತಿದ್ದು, ಸದ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ನಾಯಕ ಶಂಕರ್ ನಾಗ್ ಅಭಿಮಾನಿಯಾಗಿರುತ್ತಾನೆ. ಹಾಗೆಯೇ ಚಿತ್ರದಲ್ಲಿ ಪ್ರೀತಿ-ಪ್ರೇಮದ ಅಂಶಗಳು ಸಹ ಇರಲಿವೆ.

ಚಿತ್ರದಲ್ಲಿ ಆರ್ಯನ್, ಅದ್ವಿತಿ ಶೆಟ್ಟಿ, ಸಮೀಕ್ಷಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರವನ್ನು ದರ್ಶಿತ್ ಎಂಬ ಹೊಸಬರು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರದ ಕುರಿತಂತೆ ಸಾಕಷ್ಟು ಸುದ್ದಿಗಳಾಗಿವೆ.

ನಾನು ಈ ಹಿಂದೆ ಸೀರಿಯಲ್ ನಲ್ಲಿ ನಟಿಸುತ್ತಿದ್ದೆ. ಆಗ ಒಂದಷ್ಟು ಜನ ಅಭಿಮಾನಿಗಳು ನನಗೆ ಇದ್ದರು. ಈಗ ಅಂತಹ ಅಭಿಮಾನಿಯ ಪಾತ್ರವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇನೆ. ಇಲ್ಲಿ ನಾನು ಸೀರಿಯಲ್ ವೊಂದರ ನಾಯಕನ ಅಭಿಮಾನಿಯಾಗಿ ನಟಿಸುತ್ತಿದ್ದೇನೆ. ಕಥೆ ಹಾಗೂ ಪಾತ್ರ ಸ್ಪೇಷಲ್ ಆಗಿದ್ದರಿಂದ ಈ ಚಿತ್ರವನ್ನು ಖುಷಿಯಿಂದ ಒಪ್ಪಿಕೊಂಡಿದ್ದೇನೆ’ ಎಂದು ಅದ್ವಿತಿ ಶೆಟ್ಟಿ ಹೇಳಿದ್ದಾರೆ.

ಹಾಗೆಯೇ ನಟಿ ಸಮೀಕ್ಷಾ ಕೂಡಾ ಈ ರೀತಿ ಹೇಳಿದ್ದಾರೆ. ‘ಇಲ್ಲಿ ಧಾರಾವಾಹಿಯ ಕಥೆಯ ಜೊತೆಗೆ ಅದರಾಚೆಗಿನ ಇನ್ನೊಂದು ಕಥೆಯೂ ನಡೆಯುತ್ತದೆ. ಈ ಚಿತ್ರದಲ್ಲಿ ನಾನು ಧಾರಾವಾಹಿಯ ಕಥಾನಾಯಕಿಯಾಗಿದ್ದೇನೆ. ಸದ್ಯ ಈಗಾಗಲೇ ನೋಡಿರುವಂತೆ ಟಿಪಿಕಲ್ ಸೀರಿಯಲ್ ನಾಯಕಿ ಹೇಗಿರುತ್ತಾಳೋ ಅಂಥ ಪಾತ್ರ ನನ್ನದು’

ಅಂದ ಹಾಗೆ ಈ ಟೀಸರ್ ಅನ್ನು ಆನಂದ್ ಆಡಿಯೋ ಸಂಸ್ಥೆಯವರು ತಮ್ಮ ಯುಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಮಾಡಿದ್ದು, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ. ಚಿತ್ರಕ್ಕೆ ವಿಕ್ರಮ್-ಚಂದನ್ ಸಂಗೀತ ಸಂಯೋಜನೆಯಿದ್ದು, ಶಶಿಕಿರಣ್ ಎಂ ಇ ನಿರ್ಮಾಣ ಮಾಡಿದ್ದಾರೆ.

ಟಿಕ್ ಟಾಕ್ ಮಾಡಲು ಹೋಗಿ ಬೆನ್ನು ಮೂಳೆ ಮುರಿದುಕೊಂಡ ಯುವಕ..!!!

#fan, #kannada, #filmnews, #balkaninews #filmnews, #kannadasuddigalu

Tags