ಸುದ್ದಿಗಳು

ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಯ ಕಥೆಯನ್ನು ಹೇಳಲಿರುವ ರಾಕೇಶ್

‘ಪತಿಬೇಕು ಡಾಟ್ ಕಾಮ್’ ಚಿತ್ರದ ನಿರ್ದೇಶಕರ ಹೊಸ ಸಿನಿಮಾ

ಬೆಂಗಳೂರು.ಮಾ.15: ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ರವರು ದೈಹಿಕವಾಗಿ ನಮ್ಮನ್ನೆಲ್ಲಾ ಅಗಲಿದ್ದರೂ ಸಹ ಮಾನಸಿಕವಾಗಿ ಜೊತೆಯಾಗಿದ್ದಾರೆ. ಈಗ ಅವರ ಅಭಿಮಾನಿಯೊಬ್ಬರ ಕಥೆಯನ್ನು ‘ಪತಿಬೇಕು ಡಾಟ್ ಕಾಮ್’ ಚಿತ್ರದ ರಾಕೇಶ್ ಹೇಳಲಿದ್ದಾರೆ.

ಹೌದು, ಬದುಕಿದ್ದಾಗಲೇ ದಂತಕಥೆಯಾಗಿದ್ದವರು ಅಂಬರೀಶ್. ಹೀಗಾಗಿ ಅವರು ಮರೆಯಾಗಿದ್ದರೂ ಜೊತೆಗೇ ಇದ್ದಂತೆ ಭಾಸವಾಗುವ ವ್ಯಕ್ತಿತ್ವ ಹೊಂದಿದ್ದರು. ಈಗ ನಿರ್ದೇಶಕ ರಾಕೇಶ್ ತಮ್ಮ ಹೊಸ ಚಿತ್ರದಲ್ಲಿ ಅವರ ಅಭಿಮಾನಿಯೊಬ್ಬರ ಕಥೆಯನ್ನು ಹೇಳಲು ತಯಾರಿ ನಡೆಸುತ್ತಿದ್ದಾರೆ.

‘ಪತಿಬೇಕು ಡಾಟ್ ಕಾಮ್’ ಚಿತ್ರದ ಮೂಲಕವೇ ರಾಕೇಶ್ ಹೆಸರಾಗಿದ್ದಾರೆ. ಈ ಸಿನಿಮಾ ತೆರೆ ಕಾಣುತ್ತಲೇ ಮುಂದಿನ ಚಿತ್ರಕ್ಕಾಗಿ ತಯಾರಿ ಆರಂಭಿಸಿದ್ದ ರಾಕೇಶ್ ಹೊಸಾ ಚಿತ್ರಕ್ಕೆ “ಫ್ಯಾನ್ ಆಫ್ ರೆಬೆಲ್ ಸ್ಟಾರ್” ಎಂಬ ವಿಶಿಷ್ಟವಾದ ಶೀರ್ಷಿಕೆ ಫೈನಲ್ ಮಾಡಿದ್ದಾರೆ.

ಹೌದು, ಇದೊಂದು ರೆಬೆಲ್ ಸ್ಟಾರ್ ಅಭಿಮಾನಿಯೊಬ್ಬನ ಕಥೆ. ಮಂಡ್ಯ ಜಿಲ್ಲೆಯ ಗ್ಯಾಮ್ಯ ಶೈಲಿಯಲ್ಲಿ ಇಡೀ ಚಿತ್ರ ಮೂಡಿ ಬರಲಿದೆ. ಹಾಗಾದರೆ ಇದರ ಹೀರೋ ಯಾರೆಂಬ ಪ್ರಶ್ನೆ ಸಹಜ. ಈ ಬಗ್ಗೆ ನಿರ್ದೇಶಕರು ಸದ್ಯಕ್ಕೆ ಸಸ್ಪೆನ್ಸ್ ಇಟ್ಟಿದ್ದಾರೆ. ಆದರೆ ಹೀರೋ ಅಂಬರೀಶ್ ಆಪ್ತ ವಲಯದಲ್ಲಿದ್ದವರೇ ಎನ್ನುವುದಂತೂ ನಿಜ ಎಂಬ ಮಾತುಗಳು ಕೇಳಿ ಬರುತ್ತಿವೆ.

“ಫ್ಯಾನ್ ಆಫ್ ರೆಬೆಲ್ ಸ್ಟಾರ್” ಸಿನಿಮಾ ಇನ್ನು ಶುರುವಾಗದಿದ್ದರೂ ಸಹ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲಗಳು ಮೂಡುತ್ತಿವೆ. ವಿಶೇಷವೆಂದರೆ, ಅಂಬರೀಶ್ ರವರು ಅಗಲಿದ್ದಾಗ ಅವರ ಅಂತಿಮ ದರ್ಶನ ನಡೆದಿದ್ದ ಮಂಡ್ಯದ ಮೈದಾನದಲ್ಲಿ ಈ ಚಿತ್ರ ಆರಂಭವಾಗಲಿದೆ.

ನಿರ್ದೇಶನದತ್ತ ಪುಟ್ಟ ಗೌರಿಯ ರಂಜನಿ

#fanofambareesh, #filmnews, #balkaninews #kannadasuddigalu, #ambareesh, #rakesh, #nextmovie

Tags