ಸುದ್ದಿಗಳು

ಯಶ್ ಅಭಿಮಾನಿಗಳಿಂದ ಹೊಸ ಟ್ರೆಂಡ್ ಶುರು…

ಸಾಮಾನ್ಯವಾಗಿ ಸ್ಟಾರ್ ನಟನ ಫ್ಯಾನ್ಸ್ ತಮ್ಮ ಮೆಚ್ಚಿನ ಕಲಾವಿದನ ಹುಟ್ಟುಹಬ್ಬವನ್ನು ಅವರ ಮನೆಗಳಲ್ಲಿ ಅವರ ಆ ನಟನ ಮನೆಗೆ ಬಂದು ಆಚರಿಸುವುದು ಸಾಮಾನ್ಯ. ವಿಶೇಷವೆಂದರೆ ಯಶ್ ಅವರ ಬರ್ತಡೇಗೆ ಇನ್ನೂ ನೂರು ದಿನಗಳು ಇರಬೇಕಾದರೆ ಅವರ ಅಭಿಮಾನಿಗಳು ಹೊಸ ಟ್ರೆಂಡ್ ಶುರು ಮಾಡಿದ್ದಾರೆ.

ಹೌದು, ಯಶ್ ಫ್ಯಾನ್ಸ್ ಇದೀಗ ಟ್ವಿಟರ್ ನಲ್ಲಿ ಹೊಸ ಟ್ರೆಂಡ್ ಶುರು ಮಾಡಿದ್ದಾರೆ. ಯಶ್ ಬರ್ತಡೇ ಗೆ ಇವತ್ತಿಂದ 58 ದಿನಗಳು ಮಾತ್ರ ಬಾಕಿ ಇರುತ್ತದೆ. ಹೀಗಾಗಿ ಈ ಬಾರಿ ಡಿಫರೆಂಟ್ ಟ್ರೆಂಡ್ ಮಾಡುವುದಕ್ಕೆ ಅಭಿಮಾನಿಗಳು ಮುಂದಾಗಿದ್ದಾರೆ.

ಅದೇನೆಂದರೆ, ಪ್ರತಿ ಸಲದಂತೆ ಯಶ್ ಬರ್ತಡೆಗೆ 24 ಗಂಟೆ ಟ್ವಿಟರ್ ಟ್ರೆಂಡ್ ಬದಲು 24 ಗಂಟೆ ಸಸಿ ನೆಡುವ ಮೂಲಕ ಹುಟ್ಟು ಹಬ್ಬವನ್ನು  ಆಚರಿಸಲಾಗುತ್ತದೆ. ಸದ್ಯ ಯಶ್ ‘ಕೆ.ಜಿ.ಎಫ್-2’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಬಾರಿ ಅವರು 33ನೇ ವಸಂತಕ್ಕೆ ಕಾಲಿಡಲಿದ್ದಾರೆ.

ಕತಾರ್ ನಲ್ಲಿ ಕರ್ನಾಟಕ ರಾಜ್ಯೋತ್ಸವ 2019

#Yash #YashMovies # YashFans #YashBirthday  ‍#kannadaSuddigalu

Tags