ಸುದ್ದಿಗಳು

ಸೈಫ್ ಅಲಿಖಾನ್ ಅವರನ್ನು ಟ್ರೋಲ್ ಮಾಡಿ ಪ್ರಶ್ನಿಸಿದ್ದವರಿಗೆ ಕರೀನಾ ಖಡಕ್ ಉತ್ತರ

ಮುಂಬೈ, ಮಾ.14:

ನಟಿ ಕರೀನಾ ಕಪೂರ್ ತಮ್ಮ ಬ್ಯೂಟಿ ಹಾಗೂ ಸ್ಕೀನ್ ನ ಬಗ್ಗೆ ಸಿಕ್ಕಾಪಟ್ಟೆ ಕಾನ್ಫಿಡೆಂಟ್ ಆಗಿದ್ದರಿಂದಲೇ ಅವರು ಯಾವ ರೀತಿಯ ಉಡುಪು ಧರಿಸಲು ಹಿಂದೆ ಮುಂದೆ ನೋಡೋದೆ ಇಲ್ಲ. ಅವರು ಬಿಕಿನಿಯಲ್ಲೂ ಆರಾಮವಾಗಿರುತ್ತಾರೆ. ಶಾರ್ಟ್ ಅಂದ್ರು ಓಕೆ. ಸೀರೆ ಅಂದ್ರು ಸೂಪರ್ ಅಂತಾನೆ ಇರುತ್ತಾರೆ. ಟ್ರೋಲಿಗರ ಯಾವುದೇ ಟೀಕೆಗಳಿಗೂ ಕ್ಯಾರೇ ಅನ್ನದ ಕರೀನಾ ಕಪೂರ್, ಮದುವೆಯಾಗಿ ಮಗುವಾದ ಬಳಿಕವೂ ಬಿಕಿನಿ ಧರಿಸುತ್ತಿರುವುದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.

ಇತ್ತೀಚೆಗೆ ಅರ್ಬಾಜ್ ಖಾನ್ ಅವರ ಚಾಟ್ ಶೋ ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಆಕೆ ಸಾಮಾಜಿಕ ಜಾಲತಾಣದಲ್ಲಿ ಎದುರಿಸಿದ ಟ್ರೋಲ್ ಒಂದನ್ನು ಓದಲಾಯಿತು. ಬಿಕಿನಿ ಧರಿಸಿ ಪತಿಯೊಂದಿಗಿದ್ದ ಆಕೆಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಈ ಫೋಟೋ ನೋಡಿದ ಕೆಲವರು ಮಡದಿಯನ್ನು ಈ ರೀತಿಯ ಉಡುಪು ಧರಿಸಲು ಬಿಟ್ಟ ಪತಿ ಸೈಫ್ ಅಲಿಖಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. “Go to hell Saif Ali Khan, you not a shame to let your f***ing wife wearing bikini (sic),” the ಎಂದು ಕೆಂಡಾಮಂಡಲರಾದ ಕೆಲವರು ಸೈಫ್ ಅವರ ವಿರುದ್ಧ ಕಿಡಿಕಾರಿದ್ದರು

ಪತಿಗೆ ಬೈಯ್ದ ಟ್ರೋಲಿಗರಿಗೆ ಕರೀನಾ ಉತ್ತರ

ಪತ್ನಿಯನ್ನು ಬಿಕಿನಿ ತೊಡಲು ಬಿಟ್ಟ ನಿನಗೆ ನಾಚಿಗೆಯಾಗಬೇಕು ಎಂದೆಲ್ಲಾ ಟ್ರೋಲ್ ಮಾಡಿದ್ದ ನೆಟ್ಟಿಗರಿಗೆ ಖಾರವಾಗಿ ಉತ್ತರಿಸಿರುವ ಕರೀನಾ, “ಸೈಫ್ ಅಲಿಖಾನ್ ಯಾರು. ನಾನು ಬಿಕಿನಿ ಧರಿಸಬಾರದು ಎಂದು ಹೇಳಲು ಎಂದಿರುವ ಅವರು, ನನ್ನ ಉಡುಪಿನ ಬಗ್ಗೆ ನನ್ನ ಇತರ ಕೆಲಸಗಳ ಬಗ್ಗೆ ಸೈಫ್ ಪ್ರಶ್ನಿಸುವುದಿಲ್ಲ. ನಾವಿಬ್ಬರು ಪರಸ್ಪರ ಗೌರವಯುತವಾಗಿ ಬದುಕುತ್ತಿದ್ದೇವೆ.  ಇಂತಹ ಡೂಸ್ ಆಂಡ್ ಡೊಂಟ್ಸ್ ನಮ್ಮ ಮಧ್ಯೆ ಇಲ್ಲ. ಆತನಿಗೆ ನನ್ನ ಮೇಲೆ ನಂಬಿಕೆ ಇದೆ ” ಎಂದಿದ್ದಾರೆ. ನಾನು ಬಿಕಿನಿ ಧರಿಸಿದ್ದೇನೆ ಎಂದರೆ ಅದಕ್ಕೂ ಒಂದು ಕಾರಣವಿರುತ್ತದೆ. ಅಂದಹಾಗೆ ಸೈಫ್ ಹಾಗೂ ಕರೀನಾ ಐದು ವರ್ಷಗಳ ಕಾಲ ಪ್ರೀತಿಸಿ 2012ರ ಅಕ್ಟೋಬರ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಚೇರ್ ಬಲಿಯಾದ ಶಿಲ್ಪಾ ಶೆಟ್ಟಿ ಮಗ ವಿಯಾನ್…!

#kareenakapoor #balkaninews #saifalikhan #saifalikhanandkareenakapoor #bollywood #kareenakapoorbikaniphoto

Tags